ಕ್ಷೇತ್ರದಲ್ಲಿ ಒಟ್ಟು 2,04,653 ಮತದಾರರಿದ್ದು, ಅವರಲ್ಲಿ 1,01,671 ಪುರುಷರು, 1,02,982 ಮಹಿಳೆಯರಿದ್ದಾರೆ. ಮತದಾರರ ಪಟ್ಟಿಯ ಮ್ಯಾಪಿಂಗ್ ಕಾರ್ಯ ಶೇ.91.94 ರಷ್ಟು ಪೂರ್ಣಗೊಂಡಿದೆ. ಅಲ್ಲದೆ ಸರ್ಕಾರಿ ಕಟ್ಟಡಗಳಿಲ್ಲದ ಪ್ರದೇಶದ ಶಾಲೆಗಳಲ್ಲಿ ಮತದಾರರ ಸಹಾಯ ಕೇಂದ್ರಗಳನ್ನು ಸ್ಥಾಪಿಸಲು ಕ್ರಮ ಕೈಗೊಳ್ಳಲಾಗಿದೆ. ಯಾವುದೇ ಮತಗಟ್ಟೆಯಲ್ಲಿ 1,200ಕ್ಕೂ ಹೆಚ್ಚು ಮತದಾರರಿದ್ದಲ್ಲಿ ಹೆಚ್ಚುವರಿ ಮತಗಟ್ಟೆಗಳನ್ನು ಸ್ಥಾಪಿಸುವ ಕುರಿತು ಪರಿಶೀಲನೆ ನಡೆಸಲಾಗುತಿದ್ದು, ಆಗಸ್ಟ್ 5ರಂದು ಕರಡು ಮತದಾರರ ಪಟ್ಟಿಯನ್ನು ಪ್ರಕಟಿಸಲಾಗುವುದು ಎಂದು ಹೇಳಿದರು.