ನಿಲುವಾಗಿಲು ಗ್ರಾಮದ ಅಭಿವೃದ್ಧಿಗೆ ಕ್ರಮ

ಆಲೂರು ತಾಲೂಕಿನ ಪಾಳ್ಯ ಹೋಬಳಿ ನಿಲುವಾಗಿಲು ಗ್ರಾಮದಲ್ಲಿ ಸರ್ಕಾರಿ ಪ್ರಾಥಮಿಕ ಶಾಲೆ ಹೆಚ್ಚುವರಿ ಕೊಠಡಿ ನಿರ್ಮಾಣಕ್ಕೆ ಶಾಸಕ ಸಿಮೆಂಟ್ ಮಂಜು ಭೂಮಿಪೂಜೆ ನೆರವೇರಿಸಿದರು.ಶಾಲಾ ಎಸ್‌ಡಿಎಂಸಿ ಅಧ್ಯಕ್ಷೆ ರೋಸಾ, ಮುಖ್ಯಶಿಕ್ಷಕ ಮಹಮದ್ ಶಫಿ ಮತ್ತು ಬಿಜೆಪಿ ಮುಖಂಡರಾದ ಜಿ.ಕೆ.ವೆಂಕಟೇಶ್, ಹರೀಶ್ ಇತರರು ಇದ್ದರು.
ಆಲೂರು ತಾಲೂಕಿನ ಪಾಳ್ಯ ಹೋಬಳಿ ನಿಲುವಾಗಿಲು ಗ್ರಾಮದಲ್ಲಿ ಸರ್ಕಾರಿ ಪ್ರಾಥಮಿಕ ಶಾಲೆ ಹೆಚ್ಚುವರಿ ಕೊಠಡಿ ನಿರ್ಮಾಣಕ್ಕೆ ಶಾಸಕ ಸಿಮೆಂಟ್ ಮಂಜು ಭೂಮಿಪೂಜೆ ನೆರವೇರಿಸಿದರು.ಶಾಲಾ ಎಸ್‌ಡಿಎಂಸಿ ಅಧ್ಯಕ್ಷೆ ರೋಸಾ, ಮುಖ್ಯಶಿಕ್ಷಕ ಮಹಮದ್ ಶಫಿ ಮತ್ತು ಬಿಜೆಪಿ ಮುಖಂಡರಾದ ಜಿ.ಕೆ.ವೆಂಕಟೇಶ್, ಹರೀಶ್ ಇತರರು ಇದ್ದರು.
Published on
ಆಲೂರು: ನಿಲುವಾಗಿಲು ಗ್ರಾಮಕ್ಕೆ ಮೂಲಸೌಕರ್ಯ ಕಲ್ಪಿಸಲು ಪ್ರಾಮಾಣಿಕವಾಗಿ ಶ್ರಮಿಸುತ್ತೇನೆ ಎಂದು ಶಾಸಕ ಸಿಮೆಂಟ್ ಮಂಜು ಭರವಸೆ ನೀಡಿದರು.
ತಾಲೂಕಿನ ಪಾಳ್ಯ ಹೋಬಳಿ ನಿಲುವಾಗಿಲು ಗ್ರಾಮದಲ್ಲಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ 14 ಲಕ್ಷ ರೂ. ವೆಚ್ಚದಲ್ಲಿ ಹೆಚ್ಚುವರಿ ಕೊಠಡಿ ನಿರ್ಮಾಣಕ್ಕೆ ಇತ್ತೀಚೆಗೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದರು.
ಸರ್ಕಾರಿ ಶಾಲೆಗಳು ವಿದ್ಯಾರ್ಥಿಗಳ ಭವಿಷ್ಯದ ಭದ್ರ ತಳಪಾಯವಾಗಿದೆ. ಸರ್ಕಾರಿ ಶಾಲೆಗಳಲ್ಲಿ ಮಕ್ಕಳಿಗೆ ಉಚಿತ ಪುಸ್ತಕ, ಸಮವಸ್ತ್ರ, ಮಧ್ಯಾಹ್ನ ಬಿಸಿಯೂಟ ನೀಡಲಾಗುತ್ತದೆ. ಮಕ್ಕಳು ಪ್ರಾರಂಭಿಕ ಹಂತದಲ್ಲಿ ಸರ್ಕಾರಿ ಶಾಲೆಗಳಲ್ಲಿ ಶಿಕ್ಷಣ ಪಡೆಯುವಂತೆ ಪಾಲಕರು ಸಹಕರಿಸಬೇಕು ಎಂದರು.
ಗ್ರಾಮಸ್ಥರ ಕೋರಿಕೆಯಂತೆ ಶಾಲೆಗೆ ಅಗತ್ಯವಿರುವ ಆಟದ ಮೈದಾನ, ಅಂಗನವಾಡಿ ಕಟ್ಟಡ ದುರಸ್ತಿಗೆ ಕ್ರಮ ಕೈಗೊಳ್ಳುತ್ತೇನೆ. ನಿಲುವಾಗಿಲು-ಕೃಷ್ಣಾಪುರ ಗ್ರಾಮದ ಮೂಲಕ ಬೇಲೂರು ತಾಲೂಕಿಗೆ ಸಂಪರ್ಕ ಕಲ್ಪಿಸುವ 2 ಕಿ.ಮೀ.ರಸ್ತೆ ನಿರ್ಮಾಣ ಮಾಡಲಾಗುವುದು. ಈ ರಸ್ತೆ ನಿರ್ಮಾಣವಾದರೆ ಕೇವಲ 3 ಕಿ.ಮೀ. ಅಂತರದಲ್ಲಿ ಬೇಲೂರು ತಾಲೂಕನ್ನು ಸಂಪರ್ಕಿಸಬಹುದು. ಈ ಬಗ್ಗೆ ಬೇಲೂರು ಶಾಸಕರೊಂದಿಗೆ ಚರ್ಚಿಸಿದ್ದೇನೆ. 2.5 ಲಕ್ಷ ರೂ.ವೆಚ್ಚದಲ್ಲಿ ಶಾಲೆ ಛಾವಣಿ ಸರಿಪಡಿಸಲಾಗುವುದು. ಗ್ರಾಮದಲ್ಲಿರುವ ವಿದ್ಯುತ್ ಪರಿವರ್ತಕ ಬದಲಿಸಲು ಸೂಚಿಸಿದ್ದು, ಅರ್ಧಕ್ಕೆ ನಿಂತಿರುವ ದೇವಸ್ಥಾನಗಳ ಕಾಮಗಾರಿಗೆ ಪುನಶ್ಚತನ ನೀಡಲಾಗುವುದು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಶಾಲಾ ಎಸ್‌ಡಿಎಂಸಿ ಅಧ್ಯಕ್ಷೆ ರೋಸಾ, ಮುಖ್ಯಶಿಕ್ಷಕ ಮಹಮದ್ ಶಫಿ ಮತ್ತು ಬಿಜೆಪಿ ಮುಖಂಡರಾದ ಜಿ.ಕೆ.ವೆಂಕಟೇಶ್, ಹರೀಶ್ ಇತರರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net