ದುಮ್ಮೇನಹಳ್ಳಿ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಅಜಯ್ ಮಾತನಾಡಿ, ಜಾತ್ರೆ, ಉತ್ಸವಗಳನ್ನು ಸಂತೋಷದಿಂದ ಆಚರಿಸಲು ಪದೇ ಪದೆ ಅಡಚಣೆ ಮಾಡಲಾಗುತ್ತಿದೆ. ಹಿಂದುಳಿದ ವರ್ಗಗಳ ಜನರನ್ನು ಹೊಡೆದಾಡಿಸಿ ಖುಷಿ ಅನುಭವಿಸುವ ಚಾಳಿ ಒಳ್ಳೆಯದಲ್ಲ. ಪೊಲೀಸರು, ತಾಲೂಕು ಆಡಳಿತ ಜನಪರವಾದ ನಿಲುವು ತೆಗೆದುಕೊಳ್ಳಬೇಕು ಎಂದು ಮನವಿ ಮಾಡಿದರು.