ಬಾಗೂರಿನಲ್ಲಿ ಪೊಲೀಸ್ ಠಾಣೆ, ಸಿಎಚ್‌ಸಿ

ಬಾಗೂರು ಹೋಬಳಿ ಕೇಂದ್ರದಲ್ಲಿ ಜೆಡಿಎಸ್ ಪಕ್ಷ ಆಯೋಜಿಸಿದ್ದ ಕಾರ್ಯಕರ್ತರ ಸಭೆಯಲ್ಲಿ ಕಾಂಗ್ರೆಸ್ ಬೆಂಬಲಿತ ಗ್ರಾಪಂ ಸದಸ್ಯೆ ರೇಣುಕಾ ಕಾಳೇಶ್ ಅವರು ಕಾಂಗ್ರೆಸ್ ಪಕ್ಷ ತೊರೆದು ಶಾಸಕ ಸಿ.ಎನ್.ಬಾಲಕೃಷ್ಣ ಅವರ ಸಮ್ಮುಖದಲ್ಲಿ ಜೆಡಿಎಸ್ ಪಕ್ಷ ಸೇರ್ಪಡೆಗೊಂಡರು. ಬಿ.ಎಚ್. ಶಿವಣ್ಣ, ಚಂದ್ರಣ್ಣ, ಭುವನಹಳ್ಳಿ ಯೋಗೇಶ್, ಬಸವರಾಜ್, ಕುಂಬಾರಳ್ಳಿ ರಮೇಶ್, ಶಿವಶಂಕರ್ ಕುಂಟೆ, ಹರೀಶ್, ಮನು, ಇದ್ದರು.
ಬಾಗೂರು ಹೋಬಳಿ ಕೇಂದ್ರದಲ್ಲಿ ಜೆಡಿಎಸ್ ಪಕ್ಷ ಆಯೋಜಿಸಿದ್ದ ಕಾರ್ಯಕರ್ತರ ಸಭೆಯಲ್ಲಿ ಕಾಂಗ್ರೆಸ್ ಬೆಂಬಲಿತ ಗ್ರಾಪಂ ಸದಸ್ಯೆ ರೇಣುಕಾ ಕಾಳೇಶ್ ಅವರು ಕಾಂಗ್ರೆಸ್ ಪಕ್ಷ ತೊರೆದು ಶಾಸಕ ಸಿ.ಎನ್.ಬಾಲಕೃಷ್ಣ ಅವರ ಸಮ್ಮುಖದಲ್ಲಿ ಜೆಡಿಎಸ್ ಪಕ್ಷ ಸೇರ್ಪಡೆಗೊಂಡರು. ಬಿ.ಎಚ್. ಶಿವಣ್ಣ, ಚಂದ್ರಣ್ಣ, ಭುವನಹಳ್ಳಿ ಯೋಗೇಶ್, ಬಸವರಾಜ್, ಕುಂಬಾರಳ್ಳಿ ರಮೇಶ್, ಶಿವಶಂಕರ್ ಕುಂಟೆ, ಹರೀಶ್, ಮನು, ಇದ್ದರು.
Published on
ಬಾಗೂರು: ಬಾಗೂರು ಹೋಬಳಿ ಕೇಂದ್ರಕ್ಕೆ ಪೊಲೀಸ್ ಠಾಣೆ ಹಾಗೂ ಸಮುದಾಯ ಆರೋಗ್ಯ ಕೇಂದ್ರ ಸ್ಥಾಪನೆಗೆ ಶ್ರಮಿಸಲಾಗುವುದು ಎಂದು ಶಾಸಕ ಸಿ.ಎನ್. ಬಾಲಕೃಷ್ಣ ಭರವಸೆ ನೀಡಿದರು.

ಹೋಬಳಿ ಕೇಂದ್ರದಲ್ಲಿ ಜೆಡಿಎಸ್ ಪಕ್ಷದಿಂದ ಮಂಗಳವಾರ ಆಯೋಜಿಸಿದ್ದ ಕಾರ್ಯಕರ್ತರ ಸಭೆಯಲ್ಲಿ ಕಾಂಗ್ರೆಸ್ ಬೆಂಬಲಿತ ಗ್ರಾಪಂ ಸದಸ್ಯೆ ರೇಣುಕಾ ಕಾಳೇಶ್ ಅವರನ್ನು ಪಕ್ಷಕ್ಕೆ ಸ್ವಾಗತಿಸಿ ಮಾತನಾಡಿದರು.

ಬಾಗೂರು ಹೋಬಳಿ ಎಲ್ಲ ಹೋಬಳಿಗಿಂತ ದೊಡ್ಡದಿದೆ. ಈ ಹಿನ್ನೆಲೆಯಲ್ಲಿ ಪೊಲೀಸ್ ಠಾಣೆ ಹಾಗೂ ಸಮುದಾಯ ಆರೋಗ್ಯ ಕೇಂದ್ರ ತೆರೆಯುವುದರಿಂದ ಈ ಭಾಗದ ರೈತರಿಗೆ ಹೆಚ್ಚು ಅನುಕೂಲವಾಗುತ್ತದೆ. ಈ ಸಂಬಂಧ ಈಗಾಗಲೇ ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿದೆ ಎಂದು ತಿಳಿಸಿದರು.

ಬಾಗೂರು ಗ್ರಾಮಕ್ಕೆ ಸಿಮೆಂಟ್ ಕಾಂಕ್ರೀಟ್ ರಸ್ತೆ, ಹೈಮಾಸ್ಟ್ ವಿದ್ಯುತ್ ದೀಪಗಳನ್ನು ಅಳವಡಿಸಲಾಗಿದೆ. ಪ್ರವಾಸಿ ಮಂದಿರದಲ್ಲಿ ಹೈಟೆಕ್ ಶೌಚಗೃಹ ನಿರ್ಮಾಣ ಕಾಮಗಾರಿಗೆ ಹಣ ಬಿಡುಗಡೆಯಾಗಿದೆ ಎಂದರು.

ಕಲ್ಲೇ ಸೋಮನಹಳ್ಳಿ ಏತ ನೀರಾವರಿ ಯೋಜನೆಯಿಂದ ಬಿದರೆ ಕೆರೆಗೆ ನೀರು ಹರಿಸಲು 75 ಎಚ್‌ಪಿ ಮೋಟರ್ ಅಳವಡಿಸಲಾಗಿದೆ 4 ದಿನದಲ್ಲಿ ನೀರೆತ್ತಲು ಚಾಲನೆ ನೀಡಲಾಗುವುದು. ಅಲ್ಲದೆ ಎಂ.ಶಿವರ, ತಗಡೂರು, ಕೂರ್ದಳ್ಳಿ, ಬಳಗಟ್ಟ, ಅಣತಿಯ ದೊಡ್ಡ ಕೆರೆಗಳನ್ನು ಹೇಮಾವತಿ ನದಿ ನೀರು ಯೋಜನೆಯಿಂದ ತುಂಬಿಸಲಾಗಿದೆ. ಇದರಿಂದ ಈ ಭಾಗದ ರೈತರ ಅಂತರ್ಜಲ ಸಮಸ್ಯೆ ಬಗೆಹರಿಯುತ್ತದೆ ಎಂದು ತಿಳಿಸಿದರು.

ಕೇಂದ್ರ ಕೈಗಾರಿಕಾ ಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರಿಗೆ ಅಮೆರಿಕದ ಪ್ರಸಿದ್ಧ ವೈದ್ಯರು ಚಿಕಿತ್ಸೆ ನೀಡಿರುವುದರಿಂದ ಅವರ ಆರೋಗ್ಯ ಸಂಪೂರ್ಣ ಸುಧಾರಿಸಿದೆ. ರಾಜ್ಯದ ಅಭಿವೃದ್ಧಿಗೆ ಹೆಚ್ಚು ಶ್ರಮಿಸುತ್ತಾರೆ ಎಂದು ತಿಳಿಸಿದರು.

ಸಾಮಾಜಿಕ ನ್ಯಾಯದಡಿಯಲ್ಲಿ ಜೆಡಿಎಸ್ ಪಕ್ಷದ ಸಿದ್ಧಾಂತ ಒಪ್ಪಿ ಬಂದಿರುವ 20 ಜನ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರನ್ನು ಮುಂದಿನ ದಿನಗಳಲ್ಲಿ ಗೌರವದಿಂದ ನಡೆಸಿಕೊಳ್ಳುವುದಾಗಿ ಭರವಸೆ ನೀಡಿದರು.

ಕಾರ್ಯಕ್ರಮದಲ್ಲಿ ಎಪಿಎಂಸಿ ಮಾಜಿ ಅಧ್ಯಕ್ಷ ಬಿ.ಎಚ್.ಶಿವಣ್ಣ, ಉದ್ಯಮಿ ಭುವನಹಳ್ಳಿ ಆರ್. ಯೋಗೇಶ್, ಎಪಿಎಂಸಿ ನಿರ್ದೇಶಕ ಮೂಡನಹಳ್ಳಿ ಚಂದ್ರಣ್ಣ, ಟಿಎಪಿಸಿಎಂಎಸ್ ನಿರ್ದೇಶಕ ಕುಂಬಾರಳ್ಳಿ ರಮೇಶ್, ಮಂಜುನಾಥ್, ತಾಪಂ ಮಾಜಿ ಉಪಾಧ್ಯಕ್ಷ ಮಲ್ಲೇಶ್, ಮಾಜಿ ಸದಸ್ಯ ಬಸವರಾಜ್, ಗ್ರಾಪಂ ಅಧ್ಯಕ್ಷ ಸ್ವಾಮಿ, ಮಾಜಿ ಅಧ್ಯಕ್ಷ ಕೆಂಪೇಗೌಡ, ಮುಖಂಡರಾದ ಕೂರ್ದಳ್ಳಿ ಶಿವ ಸ್ವಾಮಿ, ಅಂಗಡಿ ಹರೀಶ್, ಮನು, ಅಣತಿ ನಂದೀಶ್, ಕಾಂತರಾಜ್, ಚಂದ್ರಣ್ಣ, ಲಕ್ಷ್ಮಣ, ಶೇಖರ್, ರುಪೇಶ್, ನಾರಾಯಣ್, ಚಿರಂಜೀವಿ, ಗೋವಿಂದಪ್ಪ, ದಾಸಪುರ ಧರಣಿ, ಇತರರು ಹಾಜರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net