ವನ್ಯಪ್ರಾಣಿಗಳಿಗಾಗಿ ಕಾಡಂಚಲ್ಲಿ ಹಣ್ಣಿನ ಗಿಡ ನಾಟಿ

ಕಾನಳ್ಳಿ ಅರಣ್ಯದಂಚಿನ ಶಿರಗುರ ಗ್ರಾಮದಲ್ಲಿ ವಿವಿಧ ಹಣ್ಣಿನ ಗಿಡಗಳನ್ನು ನೆಡುತ್ತಿರುವ ಬೇಲೂರು ಹಾಗೂ ಅರೇಹಳ್ಳಿ ಲಯನ್ಸ್ ಸಂಸ್ಥೆ ಪದಾಧಿಕಾರಿಗಳು. ಸತೀಶ್ ಪೂಜಾರಿ, ಸೌಜನ್ಯಾ ಪೃಥ್ವಿರಾಜ್ ಇತರರಿದ್ದರು.
ಕಾನಳ್ಳಿ ಅರಣ್ಯದಂಚಿನ ಶಿರಗುರ ಗ್ರಾಮದಲ್ಲಿ ವಿವಿಧ ಹಣ್ಣಿನ ಗಿಡಗಳನ್ನು ನೆಡುತ್ತಿರುವ ಬೇಲೂರು ಹಾಗೂ ಅರೇಹಳ್ಳಿ ಲಯನ್ಸ್ ಸಂಸ್ಥೆ ಪದಾಧಿಕಾರಿಗಳು. ಸತೀಶ್ ಪೂಜಾರಿ, ಸೌಜನ್ಯಾ ಪೃಥ್ವಿರಾಜ್ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಲಯನ್ಸ್ ಸಂಸ್ಥೆ ಕಾರ್ಯದರ್ಶಿ ಪೂವಯ್ಯ ಹೇಳಿಕೆ

ಬೇಲೂರು:

ಬೇಲೂರು ಹಾಗೂ ಅರೇಹಳ್ಳಿ ಲಯನ್ಸ್ ಸಂಸ್ಥೆಯಿಂದ ತಾಲೂಕಿನ ಅರೇಹಳ್ಳಿ ಹೋಬಳಿಯ ಕಾನಳ್ಳಿ ಅರಣ್ಯದಂಚಿನ ಶಿರಗುರ ಬಳಿ ಶನಿವಾರ ವಿವಿಧ ಹಣ್ಣಿನ ಗಿಡಗಳನ್ನು ನೆಡುವ ಮೂಲಕ ವನಮಹೋತ್ಸವ ಆಚರಿಸಲಾಯಿತು.

ಬೇಲೂರು ಲಯನ್ಸ್ ಸಂಸ್ಥೆ ಕಾರ್ಯದರ್ಶಿ ಪೂವಯ್ಯ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಕಾಡುಗಳಲ್ಲಿ ಹಣ್ಣಿನ ಗಿಡಗಳ ಸಂಖ್ಯೆ ಗಣನೀಯವಾಗಿ ಇಳಿಕೆಯಾಗುತ್ತಿರುವ ಕಾರಣದಿಂದಾಗಿ ಕಾಡಿನಲ್ಲಿರಬೇಕಾದ ವ್ಯಪ್ರಾಣಿಗಳು ಆಹಾರ ಅರಸಿ ಕಾಡಂಚಿನ ಗ್ರಾಮಗಳ ತೋಟಗಳತ್ತ ಬಂದು ಬೆಳೆ ನಾಶ ಪಡಿಸಿ ರೈತರಿಗೆ ಬಹಳ ಉಪಟಳ ನೀಡುತ್ತಿವೆ ಎಂದರು.
ಈ ಹಿನ್ನೆಲೆಯಲ್ಲಿ ಸಂಸ್ಥೆಯು ಕಾಡು ಪ್ರಾಣಿಗಳಿಗೆ ತಿನ್ನಲು ಅಗತ್ಯವಿರುವ ಹಲಸು, ನೇರಳೆ, ಸೀಬೆ ಸೇರಿದಂತೆ 300 ಗಿಡಗಳನ್ನು ಕಾಡಿನ ರಸ್ತೆಯ ಬದಿ ಹಾಗೂ ಖಾಲಿಯಿರುವ ಸ್ಥಳಗಳನ್ನು ಆಯ್ಕೆ ಮಾಡಿಕೊಂಡು ನೆಡುವ ಮೂಲಕ ಪ್ರಾಣಿಗಳಿಗೆ ನೈಸರ್ಗಿಕವಾಗಿ ಆಹಾರ ಪೂರೈಸುವತ್ತ ಮುಂದಾದ ಹಿನ್ನೆಲೆಯಲ್ಲಿ ವನಮಹೋತ್ಸವದ ಮೂಲಕ ಹಣ್ಣಿನ ಗಿಡಗಳನ್ನು ನೆಡುವ ಯೋಜನೆ ಕೈಗೆತ್ತಿಕೊಂಡಿದ್ದೇವೆ ಎಂದರು.
ಅರೇಹಳ್ಳಿ ಲಯನ್ಸ್ ಸಂಸ್ಥೆ ಅಧ್ಯಕ್ಷ ಸತೀಶ್ ಪೂಜಾರಿ, ಕಾರ್ಯದರ್ಶಿ ಸೌಜನ್ಯಾ ಪೃಥ್ವಿರಾಜ್, ಪ್ರಾಂತೀಯ ರಾಯಭಾರಿ ರವಿ ಸೋಮಯ್ಯ, ಖಜಾಂಚಿ ಗುರು ಪ್ರಸಾದ್, ಸಹ ಕಾರ್ಯದರ್ಶಿ ಲಲಿತ್, ಬೇಲೂರು ಸಂಸ್ಥೆಯ ಅಧ್ಯಕ್ಷ ಮುಕ್ತರ್ ಅಹಮದ್, ರಶ್ಮಿ ಸೋಮಯ್ಯ, ಪ್ರವೀಣ್, ಬೃಂದನ್, ಸಂತೋಷ್, ಫೆಲಿಕ್ಸ್, ಪೂರ್ಣೇಶ್ ಸೇರಿದಂತೆ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net