ಪಿ.ಕೆ.ನಾಗರಾಜು, ಮಂಜಪ್ಪ ಅವಿರೋಧ ಆಯ್ಕೆ

ಶ್ರವಣಬೆಳಗೊಳ ಹೋಬಳಿಯ ಪೂಮಡಿಹಳ್ಳಿ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾಗಿ ಪಿ.ಕೆ.ನಾಗರಾಜು, ಉಪಾಧ್ಯಕ್ಷರಾಗಿ ಆಯ್ಕೆಯಾದ ಮಂಜಪ್ಪ ಅವರನ್ನು ಸಿ.ಎನ್.ಬಾಲಕೃಷ್ಣ ಅಭಿನಂದಿಸಿದರು. ಬಸವರಾಜು ಪ್ರಭು, ಸ್ನೇಹಜೀವಿ ಮಂಜು ಗಣೇಶ, ನಿಖಿಲ್ ಬೋರೇಗೌಡ, ಕೃಷ್ಣೇಗೌಡ, ಶಕುಂತಲಾ ಮಲ್ಲೇಶ್, ಶಾಂತ ಪುಟ್ಟಸ್ವಾಮಿ, ರಾಜಶೇಖರ್, ಮುಖಂಡರಾದ ದೇವರಾಜೇಗೌಡ, ಪಿ.ಕೆ.ಮಂಜೇಗೌಡ ಇತರರಿದ್ದರು.

Published on

ಪ್ರಮುಖ ಮುಖ್ಯಾಂಶಗಳು

  • ಪೂಮಡಿಹಳ್ಲಿ ಕೃಷಿ ಪತ್ತಿನ ಸಹಕಾರ ಸಂಘದ ನೂತನ ಅಧ್ಯಕ್ಷ, ಉಪಾಧ್ಯಕ್ಷರ ಚುನಾವಣೆ
ಶ್ರವಣಬೆಳಗೊಳ: ಹೋಬಳಿಯ ಜುಟ್ಟನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪೂಮಡಿಹಳ್ಲಿ ಕೃಷಿ ಪತ್ತಿನ ಸಹಕಾರ ಸಂಘದ ನೂತನ ಅಧ್ಯಕ್ಷರಾಗಿ ಪಿ.ಕೆ.ನಾಗರಾಜು ಉಪಾಧ್ಯಕ್ಷರಾಗಿ ಬೇಡರಹಳ್ಳಿಯ ಮಂಜಪ್ಪ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಈಚೆಗೆ ಈ ಸಂಘಕ್ಕೆ ನಡೆದ ಚುನಾವಣೆಯಲ್ಲಿ 11 ನಿರ್ದೇಶಕರುಗಳು ಆಯ್ಕೆಯಾಗಿದ್ದರು. ಶುಕ್ರವಾರ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆ ಪ್ರಕ್ರಿಯೆಯಲ್ಲಿ ಪಿ.ಕೆ.ನಾಗರಾಜು ಮತ್ತು ಬೇಡರಹಳ್ಳಿಯ ಮಂಜಪ್ಪ ಹೊರತುಪಡಿಸಿ ಮತ್ಯಾರು ನಾಮಪತ್ರ ಸಲ್ಲಿಸದ ಹಿನ್ನೆಲೆಯಲ್ಲಿ ಅವಿರೋಧ ಆಯ್ಕೆಯನ್ನು ಚುನಾವಣಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿದ್ದ ಸಹಕಾರ ಇಲಾಖೆಯ ಅಭಿವೃದ್ಧಿ ಅಧಿಕಾರಿ ಶಕುಂತಲಾ ಘೋಷಿಸಿದರು.
ಶಾಸಕ ಸಿ.ಎನ್.ಬಾಲಕೃಷ್ಣ ನೂತನ ಆಡಳಿತ ಮಂಡಳಿಯವರನ್ನು ಅಭಿನಂದಿಸಿ ಮಾತನಾಡಿ, ಕೃಷಿ ಪತ್ತಿನ ಸಹಕಾರ ಸಂಘದಿಂದ ಪಡೆದ ಕೃಷಿ ಸಾಲವನ್ನು ಬೇರೆ ಯಾವುದೇ ತರಹದ ಉದ್ದೇಶಗಳಿಗೆ ಬಳಸಿಕೊಳ್ಳದೆ ಬೆಳೆಗಾಗಿಯೇ ಉಪಯೋಗಿಸಿಕೊಳ್ಳಬೇಕು. ಕೃಷಿಗೆ ಪಡೆದ ಬೆಳೆ ಸಾಲವನ್ನು ಸಕಾಲದಲ್ಲಿ ಮರು ಪಾವತಿಸುವುದರಿಂದ ಹೊಸ ಸಾಲ ಅಪೇಕ್ಷಿಸುವ ರೈತರಿಗೂ ವಿತರಿಸಲು ಅನುಕೂಲವಾಗುತ್ತದೆ ಎಂದರು.
ನಿರ್ದೇಶಕರಾದ ಬಸವರಾಜು ಪ್ರಭು, ಸ್ನೇಹಜೀವಿ ಮಂಜು ಗಣೇಶ, ನಿಖಿಲ್ ಬೋರೇಗೌಡ, ಕೃಷ್ಣೇಗೌಡ, ಶಕುಂತಲಾ ಮಲ್ಲೇಶ್, ಶಾಂತ ಪುಟ್ಟಸ್ವಾಮಿ, ರಾಜಶೇಖರ್, ಮುಖಂಡರಾದ ದೇವರಾಜೇಗೌಡ, ಪಿ.ಕೆ.ಮಂಜೇಗೌಡ, ದೊಡ್ಡೇಗೌಡ, ಬೋರೇಗೌಡ, ದಾಸರಹಳ್ಳಿ ರಂಗೇಗೌಡ, ಎಂ.ಪಿ.ಪ್ರಸನ್ನಕುಮಾರ್, ಶ್ರೀನಿವಾಸ, ಎ.ಟಿ.ದೇವರಾಜು, ವಾಸು, ರಮೇಶ್, ಅರುಣ್, ಶಿವಣ್ಣ, ಸುನೀಲ್, ಯೋಗೇಶ್, ನಾಗೇಶ್, ಪ್ರಭಾಕರ್, ಬಾಬು, ಧರಣೇಶ್, ಸಿಇಒ ಪ್ರಕಾಶ್, ಮೇಲ್ವಚಾರಕ ಮಧು ಪಾಲ್ಗೊಂಡಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net