ಸಮಾಜ ಸುಧಾರಣೆ, ಸಮಾನತೆಯ ಹರಿಕಾರ

ಹೊಳೆನರಸೀಪುರ ಪಟ್ಟಣದಲ್ಲಿ ತಾಲೂಕು ಆಢಳಿತ ಆಚರಿಸಿದ್ದ ವಿಶ್ವಗುರು ಬಸವೇಶ್ವರರ ಜಯಂತಿ ಆಚರಣಾ ಕಾರ್ಯಕ್ರಮದಲ್ಲಿ ಶಾಸಕ ಎಚ್.ಡಿ.ರೇವಣ್ಣ ಉದ್ಘಾಟಿಸಿದರು. ವೈ.ಎಂ.ರೇಣುಕುಮಾರ್, ಶಿವಶಂಕರ್, ಎಚ್.ಎಸ್.ಪುಟ್ಟಸ್ವಾಮಪ್ಪ ಇದ್ದರು.
ಹೊಳೆನರಸೀಪುರ ಪಟ್ಟಣದಲ್ಲಿ ತಾಲೂಕು ಆಢಳಿತ ಆಚರಿಸಿದ್ದ ವಿಶ್ವಗುರು ಬಸವೇಶ್ವರರ ಜಯಂತಿ ಆಚರಣಾ ಕಾರ್ಯಕ್ರಮದಲ್ಲಿ ಶಾಸಕ ಎಚ್.ಡಿ.ರೇವಣ್ಣ ಉದ್ಘಾಟಿಸಿದರು. ವೈ.ಎಂ.ರೇಣುಕುಮಾರ್, ಶಿವಶಂಕರ್, ಎಚ್.ಎಸ್.ಪುಟ್ಟಸ್ವಾಮಪ್ಪ ಇದ್ದರು.
Published on
ಹೊಳೆನರಸೀಪುರ : ಶತಮಾನಗಳು ಉರುಳಿದರೂ ಜಗಜ್ಯೋತಿ ಬಸವಣ್ಣನವರ ಆದರ್ಶ, ವಚನ ತತ್ವ, ಮೌಲ್ಯಗಳು ಎಂದೆಂದಿಗೂ ಅನುಕರಣೀಯ ಎಂದು ಶಾಸಕ ಎಚ್.ಡಿ.ರೇವಣ್ಣ ತಿಳಿಸಿದರು.
ಪಟ್ಟಣದ ತಾಲೂಕು ಕಚೇರಿಯಲ್ಲಿ ಸೋಮವಾರ ಭಕ್ತಿ ಭಂಡಾರಿ ಶ್ರೀ ಬಸವೇಶ್ವರರ ಜಯಂತ್ಯುತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಸಮಾಜದ ಸುದಾರಣೆಗೆ ಶ್ರಮಿಸಿದ ಸಮಾನತೆಯ ಹರಿಕಾರ ಬಸವಣ್ಣನವರು ಎಂದಿಗೂ ಅಮರಜ್ಯೋತಿ. ಇದಕ್ಕೆ ಕಾರಣ 12 ನೇ ಶತಮಾನದಲ್ಲಿ ಸರಳ ಸಾಹಿತ್ಯದ ಮೂಲಕ ಜನರಿಗೆ ಅರಿವು ಮೂಡಿಸಿದ ಶ್ರಮದ ಪ್ರತಿಫಲವಾಗಿದೆ. 800 ವರ್ಷ ಕಳೆದರೂ ಅವರನ್ನು ಸ್ಮರಿಸಲೇಬೇಕಾಗಿರುವುದು ಅವರ ಸಾಮಾಜಿಕ ಚಿಂತನೆ ಮತ್ತು ಪ್ರಯತ್ನದಿಂದಲೇ. ಸರ್ಕಾರ ಮಹನೀಯರ ಆಚರಣೆಗೆ ಅರ್ಥಬರುವಂತೆ ಶಿಕ್ಷಣ, ಆರೋಗ್ಯ ಮತ್ತು ಸಮಾನತೆಯನ್ನು ತರಲು ಉತ್ತಮ ಕಾರ್ಯಕ್ರಮ ರೂಪಿಸಬೇಕು. ಆಗ ಮಾತ್ರ ಬಸವಣ್ಣನವರ ಕನಸು ನನಸಾಗುತ್ತದೆ ಎಂದರು.
ಉಪನ್ಯಾಸಕ ಚಂದ್ರಶೇಖರ್ ಮಡಬೂರು ಮಾತನಾಡಿ, ಸಮಾಜಿಕ ಕ್ರಾಂತಿಯ ಮೂಲಕ ಸಮಾಜದಲ್ಲಿ ಸಮಾನತೆಯ ಪರಿಕಲ್ಪನೆ ಮೂಡಿಸುವ ಪ್ರಯತ್ನ ನಡೆಸಿದ ಬಸವೇಶ್ವರರು ಶರಣ ಪರಂಪರೆಯ ಅಗ್ರಮಾನ್ಯರು. ಲಿಂಗಬೇದ, ಮೇಲು, ಕೀಳು, ಅಸ್ಪಶ್ಯತೆ ತೊಡೆದು ಹಾಕುವ ಪ್ರಯತ್ನ ನಡೆಸಿದರು. ಇದರಿಂದಲೇ ವಿಶ್ವಗುರು, ಜಗತ್ತಿನ ಜ್ಯೋತಿ ಎಂದು ಹೆಸರಾದರು ಎಂದರು.
ತಹಸೀಲ್ದಾರ್ ವೈ.ಎಂ.ರೇಣುಕುಮಾರ್, ಪುರಸಭಾ ಮುಖ್ಯಾಧಿಕಾರಿ ಶಿವಶಂಕರ್, ವೀರಶೈವ ಲಿಂಗಾಯತ ಮುಖಂಡರಾದ ಎಚ್.ಎಸ್.ಪುಟ್ಟಸ್ವಾಮಪ್ಪ, ಕುಮಾರಸ್ವಾಮಿ, ಸಾಹಿತಿ ಗುಂಜೇವು ಅಣ್ಣಾಜಪ್ಪ, ಶ್ರೀ ಶಿವಕುಮಾರಸ್ವಾಮಿ ಸಹಕಾರ ಸಂಘದ ಅಧ್ಯಕ್ಷ ಸುರೇಶ್ ಹಾಗೂ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಚ್.ಟಿ.ಲಕ್ಷ್ಮಣ್ ಉಪಸ್ಥಿತರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net