ಬೇಲುರಿನ ಯುನೈಟೆಡ್ ಅಕಾಡೆಮಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಆಯೋಜಿಸಿದ್ದ ಸಾಂಸ್ಕೃತಿಕ ಕಾರ್ಯಕ್ರಮವನ್ನು ಕ್ಷೇತ್ರ ಶಿಕ್ಷಣಾಧಿಕಾರಿ ಭಾಗ್ಯಮ್ಮ ಉದ್ಘಾಟಿಸಿದರು. ಎಚ್.ಎಂ.ದಿನೇಶ್, ವಿ.ಎಸ್.ಭೋಜೇಗೌಡ, ಲೋಕೇಶ್,ಮಹೇಶ್, ಕೆ.ಎಲ್.ಸುರೇಶ್, ಜಗದೀಶ್, ಉಮೇಶ್ ಇದ್ದರು.
Published on:
Copied
Follow Us
ಪ್ರಮುಖ ಮುಖ್ಯಾಂಶಗಳು
ಕ್ಷೇತ್ರ ಶಿಕ್ಷಣಾಧಿಕಾರಿ ಭಾಗ್ಯಮ್ಮ
ಯುನೈಟೆಡ್ ಅಕಾಡೆಮಿ ಆಂಗ್ಲ ಮಾಧ್ಯಮ ಶಾಲೆ
ಬೇಲೂರು: ಮಕ್ಕಳಲ್ಲಿರುವ ಪ್ರತಿಭೆ, ಕನಸುಗಳನ್ನು ಪಾಲಕರು ಹಾಗೂ ಶಿಕ್ಷಕರು ಗುರುತಿಸುವ ಕೆಲಸ ಮಾಡಿ ಪ್ರೋತ್ಸಾಹಿಸಿದಾಗ ಮಾತ್ರ ಮಕ್ಕಳು ಉತ್ತಮ ಸಾಧನೆ ಮಾಡಲು ಸಾಧ್ಯ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಭಾಗ್ಯಮ್ಮ ಹೇಳಿದರು.
ಪಟ್ಟಣದ ಸಮೀಪದ ಯುನೈಟೆಡ್ ಅಕಾಡೆಮಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಚಿಣ್ಣರ ಕಲಾ ಪ್ರತಿಭೆ ಅನಾವರಣಗೊಳಿಸುವ ಚಿಣ್ಣರ ನೃತ್ಯಾಮೃತ ಸಾಂಸ್ಕೃತಿಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಯಾವ ಮಕ್ಕಳಿಗೆ ಕಲೆ, ವಿಜ್ಞಾನ, ಸಾಹಿತ್ಯ, ಆಟೋಟ, ವಿದ್ಯೆ ಅಥವಾ ಐಎಎಸ್, ಐಪಿಎಸ್ ಆಗಬೇಕೆಂಬ ಕನಸಿರುತ್ತದೆಯೋ ಆ ಕನಸನ್ನು ಬೆಳೆಸುವ ಪ್ರಕ್ರಿಯೆ ಮನೆಯಿಂದಲೇ ಪ್ರಾರಂಭವಾಗಬೇಕು ಎಂದರು.
ಮಗು ಹೆಚ್ಚಿನ ಸಮಯವನ್ನು ಮನೆಯಲ್ಲಿ ಕಳೆಯುವ ಕಾರಣ ಪಾಲಕರೇ ಮೊದಲ ಮಾರ್ಗದರ್ಶಕರಾಗಬೇಕು. ಮಗುವಿನ ರಕ್ಷಣೆ, ಆರೋಗ್ಯ ಮತ್ತು ಶಿಕ್ಷಣ ನಮ್ಮ ಮೊದಲ ಆದ್ಯತೆಯಾಗಬೇಕು. ಮನೆ, ಶಾಲೆ ಹಾಗೂ ಆಡಳಿತ ವ್ಯವಸ್ಥೆ ಎಲ್ಲ ಹಂತಗಳಲ್ಲೂ ಮಗುವಿನ ರಕ್ಷಣೆಯೇ ಪ್ರಮುಖವಾಗಿರಬೇಕು ಎಂದರು.
ಯುನೈಟೆಡ್ ಅಕಾಡೆಮಿ ಶಾಲೆಯ ಕಾರ್ಯದರ್ಶಿ ಎಚ್.ಎಂ.ದಿನೇಶ್ ಮಾತನಾಡಿದರು. ಯುನೈಟೆಡ್ ಅಕಾಡೆಮಿ ಸಂಸ್ಥೆ ಅಧ್ಯಕ್ಷ ವಿ.ಎಸ್.ಭೋಜೇಗೌಡ, ಖಜಾಂಚಿ ಲೋಕೇಶ್, ಪದಾಧಿಕಾರಿಗಳಾದ ಮಹೇಶ್, ಕೆ.ಎಲ್.ಸುರೇಶ್, ಜಗದೀಶ್, ಉಮೇಶ್, ತಾರಾಮಣಿ, ಶೈಲ, ಶಾಲೆಯ ಮುಖ್ಯಶಿಕ್ಷಕರಾದ ದೀಪಾ, ಅಸ್ಮಾ ಇತರರಿದ್ದರು.