ಜಾಗದ ಮಾಲೀಕರು ನ್ಯಾಯಾಲಯಕ್ಕೆ ತೆರಳಲು ಅಧಿಕಾರಿಗಳು ಕುಮ್ಮಕ್ಕು

ಬೆಳಗಾವಿಯಲ್ಲಿ ನಡೆಯುತ್ತಿರುವ ಚಳಿಗಾಲದ ಅಧಿವೇಶನದಲ್ಲಿ ಶಾಸಕ ಎಚ್.ಕೆ.ಸುರೇಶ್ ಮಾತನಾಡಿದರು.
ಬೆಳಗಾವಿಯಲ್ಲಿ ನಡೆಯುತ್ತಿರುವ ಚಳಿಗಾಲದ ಅಧಿವೇಶನದಲ್ಲಿ ಶಾಸಕ ಎಚ್.ಕೆ.ಸುರೇಶ್ ಮಾತನಾಡಿದರು.
Published on

ಸದನದಲ್ಲಿ ಶಾಸಕ ಎಚ್.ಕೆ.ಸುರೇಶ್ ಆರೋಪ

ಬೇಲೂರು: ಪುರಸಭೆ ಆಶ್ರಯ ಯೋಜನೆಯಡಿ ನಿವೇಶನ ವಿತರಿಸಲು ಮುಂದಾಗಿತ್ತು. ಆದರೆ ಪುರಸಭೆ ಅಧಿಕಾರಿಗಳೇ ಜಾಗದ ಮಾಲೀಕರು ನ್ಯಾಯಾಲಯಕ್ಕೆ ತೆರಳುವಂತೆ ಕುಮ್ಮಕ್ಕು ನೀಡಿದ್ದಾರೆ ಎಂಬ ಆರೋಪದ ಹಿನ್ನೆಲೆಯಲ್ಲಿ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮಕ್ಕೆ ಸರ್ಕಾರ ಮುಂದಾಗಬೇಕು ಎಂದು ಅಧಿವೇಶನದಲ್ಲಿ ಶಾಸಕ ಎಚ್.ಕೆ.ಸುರೇಶ್ ಆಗ್ರಹಿಸಿದರು.
ಬೆಳಗಾವಿಯಲ್ಲಿ ನಡೆಯುತ್ತಿರುವ ಚಳಿಗಾಲದ ಅಧಿವೇಶನದ ಸಂದರ್ಭ ಸಧನದಲ್ಲಿ ಮಾತನಾಡಿದ ಅವರು, ಬೇಲೂರು ಪಟ್ಟಣ ಸಮೀಪದ ರಾಯಾಪುರ ಗ್ರಾಮದ ಸರ್ವೇ ಸಂಖ್ಯೆ 19ರಲ್ಲಿ 5.13 ಎಕರೆಯಲ್ಲಿ ನಿವೇಶನವನ್ನಾಗಿಸಿ ಮೊದಲು ಜೂನಿಯರ್ ಕಾಲೇಜು ಹಿಂಭಾಗದ ಗುಡಿಸಲು ವಾಸಿಗಳಿಗೆ ಮತ್ತು ಪೌರಕಾರ್ಮಿಕರಿಗೆ ನಿವೇಶನಗಳನ್ನು ವಿತರಿಸಲು ಸಿದ್ಧತೆ ನಡೆದಿತ್ತು. ಆದರೆ ಇಲ್ಲಿ ಪುರಸಭೆ ಅಧಿಕಾರಿಗಳೇ ನ್ಯಾಯಾಲಯಕ್ಕೆ ಹೊಗಲು ಕೆಲವರಿಗೆ ಕುಮ್ಮಕ್ಕು ನೀಡಿದ್ದಾರೆ. ಈ ವಿಷಯವಾಗಿ ಜಿಲ್ಲಾಧಿಕಾರಿ ಸರಿಯಾದ ಸ್ಪಷ್ಟನೆ ನೀಡುತ್ತಿಲ್ಲ. ಜತೆಗೆ 2018-19 ರಲ್ಲಿ ನಗರೋತ್ಥಾನ ಯೋಜನೆಯಡಿ ಬಂದ ಅನುದಾನದಲ್ಲಿ ಬೇಕಾಬಿಟ್ಟಿ ಕಾಮಗಾರಿ ನಡೆದಿದೆ. ಇದರೊಂದಿಗೆ ವಿಶೇಷ ಅನುದಾನ ವಾಪಸ್ ಹೋಗಿದೆ. ಇದರಿಂದ ಪಟ್ಟಣ ಅಭಿವೃದ್ಧಿಯಾಗುತ್ತಿಲ್ಲ, ಇಲ್ಲಿನ ಶ್ರೀ ಚನ್ನಕೇಶವಸ್ವಾಮಿ ದೇಗುಲಕ್ಕೆ 900 ವರ್ಷದ ಇತಿಹಾಸವಿದೆ. ಪಟ್ಟಣದಲ್ಲಿ ಇಂದಿಗೂ ಮೂಲಸೌಕರ್ಯ ಕಲ್ಪಿಸಲು ಮತ್ತು ಸಮಸ್ಯೆಗಳನ್ನು ಪರಿಹರಿಸಲು ಅನುದಾನ ನೀಡಿ ಎಂದು ಸರ್ಕಾರಕ್ಕೆ ಹತ್ತಾರು ಬಾರಿ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ. ಆಶ್ರಯ ಸಮಿತಿಯಿಂದ ನಿವೇಶನ ವಿತರಿಸದಿರಲು ಕಾರಣವಾದ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮಕೈಗೊಳ್ಳಬೇಕು ಮುಂದಾಗಬೇಕು ಎಂದರು.
ಶಾಸಕರ ಪ್ರಶ್ನೆಗೆ ಉತ್ತರಿಸಿದ ಪೌಡಾಳಿತ ಸಚಿವ ರಹೀಂಖಾನ್, ಈಗಾಗಲೇ ಬೇಲೂರು ಪಟ್ಟಣದ ಬಹುತೇಕ ಸಮಸ್ಯೆ ಬಗ್ಗೆ ಶಾಸಕರು ನಮ್ಮೊಂದಿಗೆ ಚರ್ಚಿಸಿದ್ದಾರೆ. ಬೇಲೂರು ಪುರಸಭೆ ನಗರೋತ್ಥಾನದ ಅನುದಾನ ವಾಪಸ್ ಬಂದಿದೆ. ಆದರೆ ಈಗ ಶಾಸಕರ ಒತ್ತಾಸೆಯಂತೆ ಪುನಃ ಅನುದಾನ ಹಾಕಿದ್ದೇವೆ. ಜತೆಗೆ ಆಶ್ರಯ ಸಮಿತಿಯಿಂದ ನಿವೇಶನ ವಿತರಿಸಲು ವಿಳಂಬಕ್ಕೆ ನ್ಯಾಯಾಲಯ ತಡೆಯಾಜ್ಞೆ ನೀಡಿದೆ. ಅಧಿವೇಶನ ಮುಗಿಯುವುದರೊಳಗೆ ಜಿಲ್ಲಾಧಿಕಾರಿ ಮತ್ತು ಪುರಸಭೆ ಅಧಿಕಾರಿಗಳ ಸಭೆ ನಡೆಸಿ ನಿವೇಶನ ವಿತರಿಸಲು ಸೂಚಿಸಲಾಗುವುದು ಎಂದರು.
ಬೆಳಗಾವಿಯಲ್ಲಿ ನಡೆಯುತ್ತಿರುವ ಚಳಿಗಾಲದ ಅಧಿವೇಶನದಲ್ಲಿ ಶಾಸಕ ಎಚ್.ಕೆ.ಸುರೇಶ್ ಮಾತನಾಡಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net