ಅಯ್ಯಪ್ಪಸ್ವಾಮಿಗೆ ತಿರುವಾಭರಣ ಸಮರ್ಪಣೆ

ಶ್ರೀ ಅಯ್ಯಪ್ಪಸ್ವಾಮಿ ದೇಗುಲದ 8 ನೇ ವರ್ಷದ ವಾರ್ಷಿಕೋತ್ಸವ ಹಾಗೂ ಪಡಿ ಪೂಜೆ ಅಂಗವಾಗಿ ದೇವರ ತಿರುವಾಭರಣವನ್ನು ಚನ್ನಕೇಶವಸ್ವಾಮಿ ದೇಗುಲದಲ್ಲಿ ಪೂಜೆ ಸಲ್ಲಿಸಿ, ನಂತರ ಮೆರವಣಿಗೆಯಲ್ಲಿ ಕೊಂಡೊಯ್ಯಲಾಯಿತು.
ಶ್ರೀ ಅಯ್ಯಪ್ಪಸ್ವಾಮಿ ದೇಗುಲದ 8 ನೇ ವರ್ಷದ ವಾರ್ಷಿಕೋತ್ಸವ ಹಾಗೂ ಪಡಿ ಪೂಜೆ ಅಂಗವಾಗಿ ದೇವರ ತಿರುವಾಭರಣವನ್ನು ಚನ್ನಕೇಶವಸ್ವಾಮಿ ದೇಗುಲದಲ್ಲಿ ಪೂಜೆ ಸಲ್ಲಿಸಿ, ನಂತರ ಮೆರವಣಿಗೆಯಲ್ಲಿ ಕೊಂಡೊಯ್ಯಲಾಯಿತು.
Published on

ಪ್ರಮುಖ ಮುಖ್ಯಾಂಶಗಳು

  • ಶ್ರೀ ಅಯ್ಯಪ್ಪಸ್ವಾಮಿ ದೇಗುಲದ 8 ನೇ ವರ್ಷದ ವಾರ್ಷಿಕೋತ್ಸವ
  • ಪಡಿಪೂಜೆ
ಬೇಲೂರು: ಪಟ್ಟಣದ ಶ್ರೀ ಅಯ್ಯಪ್ಪಸ್ವಾಮಿ ದೇಗುಲದ 8 ನೇ ವರ್ಷದ ವಾರ್ಷಿಕೋತ್ಸವ ಹಾಗೂ ಪಡಿಪೂಜೆ ಅಂಗವಾಗಿ ಅಯ್ಯಪ್ಪಸ್ವಾಮಿಗೆ ಸಮರ್ಪಿಸುವ ತಿರುವಾಭರಣವನ್ನು ಶ್ರೀ ಚನ್ನಕೇಶವಸ್ವಾಮಿ ದೇಗುಲದಲ್ಲಿ ಪೂಜೆ ಸಲ್ಲಿಸಿದ ನಂತರ ದೇವರಿಗೆ ಸಮರ್ಪಿಸಲಾಯಿತು.
ಶ್ರೀ ಚನ್ನಕೇಶವಸ್ವಾಮಿ ದೇಗುಲದ ಪ್ರಧಾನ ಅರ್ಚಕರಾದ ಶ್ರೀನಿವಾಸ್ ಭಟ್ಟರ್ ಹಾಗೂ ನರಸಿಂಹಪ್ರಿಯ ಭಟ್ಟರ್ ಅವರು ಅಯ್ಯಪ್ಪಸ್ವಾಮಿ ತಿರುವಾಭರಣಕ್ಕೆ ವಿಶೇಷ ಪೂಜೆ ಸಲ್ಲಿಸಿದರು. ನಂತರ ವಿವಿಧ ಕಲಾ ತಂಡಗಳೊಂದಿಗೆ ಯಗಚಿ ನದಿ ತಟದಲ್ಲಿರುವ ಶ್ರೀ ಅಯ್ಯಪ್ಪಸ್ವಾಮಿ ದೇಗುಲಕ್ಕೆ ತಿರುವಾಭರಣವನ್ನು ಹೊತ್ತ ಭಕ್ತರು ಮೆರವಣಿಗೆ ತೆರಳಿದರು. ಪಟ್ಟಣದ ಮುಖ್ಯರಸ್ತೆಯುದ್ದಕ್ಕೂ ಮರವಣಿಗೆಯಲ್ಲಿ ಭಜನೆ ಹಾಗೂ ಘೋಷಣೆಗಳನ್ನು ಮೊಳಗಿಸುತ್ತಾ ಸಾಗಿದ್ದಲ್ಲದೆ, ಭಕ್ತರು ಸ್ವಾಮಿಯೇ ಶರಣಂ ಅಯ್ಯಪ್ಪ ನಾಮಸ್ಮರಣೆಯೊಂದಿಗೆ ತಿರುವಾಭರಣಕ್ಕೆ ಪುಷ್ಪ ನಮನ ಸಲ್ಲಿಸುತ್ತಾ ಭಕ್ತಿ ಮೆರೆದರು.
ಈ ಸಂದರ್ಭ ವಿವಿಧ ವಾದ್ಯ ಮೇಳ, ಕಲಾತಂಡಗಳ ಪ್ರದರ್ಶನದ ಮೆರವಣಿಗೆಗೆ ಮೆರುಗು ನೀಡಿತು. ಮೆರವಣಿಗೆ ನಂತರದಲ್ಲಿ ಶ್ರೀ ಅಯ್ಯಪ್ಪಸ್ವಾಮಿ ದೇಗುಲದಲ್ಲಿ ತಿರುವಾಭರಣವನ್ನು ಸಮರ್ಪಿಸಿದ ನಂತರ ದೇವರಿಗೆ ವಿಶೇಷ ಅಭಿಷೇಕ, ಅಲಂಕಾರ ಹಾಗೂ ಮಹಾಪೂಜೆ ನೆರವೇರಿಸಲಾಯಿತು.
ಶ್ರೀ ಅಯ್ಯಪ್ಪಸ್ವಾಮಿ ಟ್ರಸ್ಟ್ ಅಧ್ಯಕ್ಷ ವೈ.ಎನ್.ಕೃಷ್ಣೇಗೌಡ, ಉಪಾಧ್ಯಕ್ಷ ಬಿ.ಎಂ.ಸಂತೋಷ್, ಪ್ರಧಾನ ಕಾರ್ಯದರ್ಶಿ ಯಮಸಂಧಿ ಪಾಪಣ್ಣ, ಟ್ರಸ್ಟ್‌ನ ಮೋಹನ್ ಕುಮಾರ್, ಗುರು ಸ್ವಾಮಿಗಳಾದ ದೇವಿಸ್ವಾಮಿ, ಮಂಜುನಾಥ್, ಧನಪಾಲ್, ಪ್ರಕಾಶ್, ನಿವಿತ್, ಮಧು, ಪ್ರಧಾನ ಅರ್ಚಕರಾದ ಪ್ರಸನ್ನಭಟ್, ಪ್ರಕಾಶ್‌ಭಟ್, ಸೋಮಶೇಖರ್ ಇತರರಿದ್ದರು. ಈ ಸಂದರ್ಭ ಭಕ್ತರಿಗೆ ಪ್ರಸಾದ ವಿನಿಯೋಗಿಸಲಾಯಿತು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net