ಶ್ರೀ ಹೊಸಳಿಗಮ್ಮ ದೇವಿಗೆ ಈಡುಗಾಯಿ ಸೇವೆ

ಅರಕಲಗೂಡು ತಾಲೂಕು ರಾಮನಾಥಪುರ ಪ್ರಸನ್ನ ಶ್ರೀ ಸುಬ್ರಹ್ಮಣ್ಯಸ್ವಾಮಿ ದೇವಾಲಯದ ಸನ್ನಿಧಿಯಲ್ಲಿರುವ ಶ್ರೀ ಹೊಸಳಿಗಮ್ಮ ದೇವತೆಗೆ ಭಕ್ತರು ಈಡುಗಾಯಿ ಸೇವೆ ಸಲ್ಲಿಸಿದರು.
ಅರಕಲಗೂಡು ತಾಲೂಕು ರಾಮನಾಥಪುರ ಪ್ರಸನ್ನ ಶ್ರೀ ಸುಬ್ರಹ್ಮಣ್ಯಸ್ವಾಮಿ ದೇವಾಲಯದ ಸನ್ನಿಧಿಯಲ್ಲಿರುವ ಶ್ರೀ ಹೊಸಳಿಗಮ್ಮ ದೇವತೆಗೆ ಭಕ್ತರು ಈಡುಗಾಯಿ ಸೇವೆ ಸಲ್ಲಿಸಿದರು.
Published on
ಅರಕಲಗೂಡು: ತಾಲೂಕಿನ ರಾಮನಾಥಪುರ ಪ್ರಸನ್ನ ಶ್ರೀ ಸುಬ್ರಹ್ಮಣ್ಯಸ್ವಾಮಿ ಸನ್ನಿಧಿಯಲ್ಲಿರುವ ಶ್ರೀ ಹೊಸಳಿಗಮ್ಮ ಶಕ್ತಿದೇವತೆಗೆ ಭಕ್ತರು ಸಾವಿರಾರು ಈಡುಗಾಯಿ ಒಡೆದು ಭಕ್ತಿ ಪರಾಕಾಷ್ಠೆ ಪ್ರದರ್ಶಿಸಿದರು.
ಶ್ರೀ ಸುಬ್ರಹ್ಮಣ್ಯಸ್ವಾಮಿ ರಥೋತ್ಸವ ಸುಸೂತ್ರವಾಗಿ ಸಾಗಿದ ಹಿನ್ನೆಲೆಯಲ್ಲಿ ಶನಿವಾರ ರಾತ್ರಿ ದೇವಸ್ಥಾನದವರು ಹಾಗೂ ಭಕ್ತರು ಸೇರಿ ಸಾವಿರಾರು ತೆಂಗಿನ ಕಾಯಿಗಳನ್ನು ಈಡುಗಾಯಿ ಒಡೆದರು. ಸುಕ್ಷೇತ್ರದಲ್ಲಿ ಕಳೆದ ತಿಂಗಳು ನ.26 ಹಾಗೂ ಡಿ.26 ರಂದು ಶ್ರೀ ಸುಬ್ರಮಣ್ಯಸ್ವಾಮಿ ಮಹಾ ರಥೋತ್ಸವ ಹಾಗೂ ಎರಡನೇ ತುಳು ಸೃಷ್ಟಿ ಮಹಾ ರಥೋತ್ಸವ ನಂತರ ಮಾರನೇ ದಿವಸ ಮುಕ್ತಾಯದ ಶ್ರೀ ಪ್ರಸನ್ನ ಸುಬ್ರಮಣ್ಯ ಸ್ವಾಮಿಯವರ ದೇವಾಲಯದ ಸಭಾಂಗಣದಲ್ಲಿರುವ ಶಕ್ತಿ ದೇವತೆಯಾದ ಹೊಸಳಿಗಮ್ಮನವರಿಗೆ ಈ ಹಿಂದಿನ ಎಲ್ಲ ಕಾರ್ಯಗಳು ಸುಸೂತ್ರವಾಗಿ ನಡೆದಿರುವುದಕ್ಕೆ ಭಕ್ತರು ಸುಮಾರು 2 ಸಾವಿರ ತೆಂಗಿನಕಾಯಿ ಒಡೆದರು.
ಬ್ರಹ್ಮಶ್ರೀ ತಂತ್ರಸಾರ ಅಗಮ ಕುಶಲ ಭಾರತೀರಮಣ, ಪಾರುಪತ್ತೇಗಾರ್ ರಮೇಶ್ ಭಟ್, ಅರ್ಚಕರಾದ ರಾಘವೇಂದ್ರ ಭಟ್, ಶ್ರೀನಾಥ್, ಕಾರ್ತಿಕ್ ಸೋಮಯಾಜಿ, ತ್ರಿವಿಕ್ರಮ್, ಪ್ರಹ್ನದ್, ಸುಮಿತಾ, ಪ್ರಸನ್ನ, ಶ್ರೀವಿಷ್ಣು, ರಾಮಚಂದ್ರ ಭಟ್, ನಾಗರಾಜು ಮುಂತಾದವರು ವಿಶೇಷ ಪೂಜೆಯಲ್ಲಿ ಭಾಗವಹಿಸಿದ್ದರು. ಬಂದಂತಹ ಸಾವಿರಾರು ಭಕ್ತರಿಗೆ ಪ್ರಸಾದದ ವ್ಯವಸ್ಥೆ ಮಾಡಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net