ನುಗ್ಗೇಹಳ್ಳಿ ಕೆರೆಗೆ ಶಾಸಕ ಸಿ.ಎನ್.ಬಾಲಕೃಷ್ಣ ಬಾಗಿನ

ನುಗ್ಗೇಹಳ್ಳಿ ಗ್ರಾಮದ ಹಿರೆಕೆರೆ ಏತ ನೀರಾವರಿ ಯೋಜನೆ ಮೂಲಕ ತುಂಬಿ ಹರಿದ ಹಿನ್ನೆಲೆಯಲ್ಲಿ ಶಾಸಕ ಸಿ.ಎನ್.ಬಾಲಕೃಷ್ಣ ಗಂಗೆ ಪೂಜೆ ನೆರವೇರಿಸಿ ತೆಪ್ಪದಲ್ಲಿ ತೆರಳಿ ಬಾಗಿನ ಅರ್ಪಿಸಿದರು. ಮಹೇಶ್ವರ ಸ್ವಾಮೀಜಿ, ನಾಗರಾಜ್, ದೊರೆಸ್ವಾಮಿ, ನಟರಾಜ, ಕೊಪ್ಪಲು ಮಂಜುನಾಥ ಸ್ವಾಮಿ ಇದ್ದರು.
ನುಗ್ಗೇಹಳ್ಳಿ ಗ್ರಾಮದ ಹಿರೆಕೆರೆ ಏತ ನೀರಾವರಿ ಯೋಜನೆ ಮೂಲಕ ತುಂಬಿ ಹರಿದ ಹಿನ್ನೆಲೆಯಲ್ಲಿ ಶಾಸಕ ಸಿ.ಎನ್.ಬಾಲಕೃಷ್ಣ ಗಂಗೆ ಪೂಜೆ ನೆರವೇರಿಸಿ ತೆಪ್ಪದಲ್ಲಿ ತೆರಳಿ ಬಾಗಿನ ಅರ್ಪಿಸಿದರು. ಮಹೇಶ್ವರ ಸ್ವಾಮೀಜಿ, ನಾಗರಾಜ್, ದೊರೆಸ್ವಾಮಿ, ನಟರಾಜ, ಕೊಪ್ಪಲು ಮಂಜುನಾಥ ಸ್ವಾಮಿ ಇದ್ದರು.
Published on
ನುಗ್ಗೇಹಳ್ಳಿ: ಕೆರೆ-ಕಟ್ಟೆಗಳಿಗೆ ಏತನೀರಾವರಿ ಯೋಜನೆ ಮೂಲಕ ನೀರು ತುಂಬಿಸಿದ್ದಲ್ಲಿ ಮಾತ್ರ ರೈತರ ಬದುಕು ಹಸನಾಗಲು ಸಾಧ್ಯ ಎಂದು ಶಾಸಕ ಸಿ.ಎನ್.ಬಾಲಕೃಷ್ಣ ಹೇಳಿದರು.
ನುಗ್ಗೇಹಳ್ಳಿ ಗ್ರಾಮದಲ್ಲಿ ಏತನೀರಾವರಿ ಯೋಜನೆಯಡಿ ತುಂಬಿದ ಕೆರೆಗೆ ಇತ್ತೀಚೆಗೆ ವಿಶೇಷ ಪೂಜೆ ಸಲ್ಲಿಸಿಬಾಗಿನ ಅರ್ಪಿಸಿ ಮಾತನಾಡಿ, ರೈತರ ಬದುಕು ಪ್ರಗತಿ ಹೊಂದಿದರೆ ಮಾತ್ರ ದೇಶ ಅಭಿವೃದ್ಧಿ ಕಾಣಲು ಸಾಧ್ಯ. ಕೆರೆ-ಕಟ್ಟೆಗಳು ತುಂಬಿದರೆ ಅಂತರ್ಜಲ ಚೇತರಿಕೆ ಕಾಣಲಿದ್ದು, ಕೊಳವೆ ಬಾವಿಗಳಲ್ಲಿ ಸಾಕಷ್ಟು ಪ್ರಮಾಣದಲ್ಲಿ ನೀರು ಲಭ್ಯವಾಗಲಿದೆ. ಇದರಿಂದ ರೈತರ ಕೃಷಿ ಚಟುವಟಿಕೆ ಇಮ್ಮಡಿಗೊಳ್ಳಲಿದ್ದು, ಆರ್ಥಿಕವಾಗಿ ರೈತ ವರ್ಗದ ಬದುಕು ಸದೃಢಗೊಳ್ಳಲಿದೆ ಎಂದು ತಿಳಿಸಿದರು.
ಗ್ರಾಮದ ದೇವಾಲಯ ವ್ಯಾಪ್ತಿಯ ಹಾಗೂ ಕೆಲವು ರಸ್ತೆಗಳನ್ನು ಚರಂಡಿ ಹಾಗೂ ಕಾಂಕ್ರೀಟ್ ವ್ಯವಸ್ಥೆಯೊಂದಿಗೆ ಅಭಿವೃದ್ಧಿಗೊಳಿಸಲಾಗುವುದು. ಅನುದಾನಗಳ ಲಭ್ಯತೆ ಅವಲಂಬಿಸಿಕೊಂಡು ಮತ್ತಷ್ಟು ಕಾಮಗಾರಿಗಳನ್ನು ಕೈಗೊಳ್ಳುವ ಮೂಲಕ ಗ್ರಾಮದ ಸರ್ವತೋಮುಖ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡಲಾಗುವುದು ಎಂದು ಭರವಸೆ ನೀಡಿದರು.
ಪುರವರ್ಗ ಹಿರೇಮಠದ ಶ್ರೀ ಮಹೇಶ್ವರ ಶಿವಾಚಾರ್ಯ ಸ್ವಾಮೀಜಿ ಅವರು ಗಂಗೆ ಪೂಜೆ ಹಾಗೂ ಬಾಗಿನ ಸಮರ್ಪಿಸುವ ಧಾರ್ಮಿಕ ಕಾರ್ಯಕ್ರಮವನ್ನು ನೆರವೇರಿಸಿಕೊಟ್ಟರು. ಶಾಸಕರು ಕೆರೆಯ ಮಧ್ಯಭಾಗಕ್ಕೆ ತೆಪ್ಪದಲ್ಲಿ ತೆರಳಿ ಬಾಗಿನ ಅರ್ಪಿಸಿದ್ದು ವಿಶೇಷವಾಗಿತ್ತು.
ಟಿಎಪಿಸಿಎಂಎಸ್ ನಿರ್ದೇಶಕ ತೋಟಿ ನಾಗರಾಜ್, ಎಪಿಎಂಸಿ ಮಾಜಿ ಅಧ್ಯಕ್ಷ ಬಿ.ಆರ್.ದೊರೆಸ್ವಾಮಿ, ಗ್ರಾಮ ಪಂಚಾಯಿತಿ ಅಧ್ಯಕ್ಷ ನಟರಾಜ್ ಯಾದವ್, ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ವಿಕ್ಟರ್, ಮಾಜಿ ಅಧ್ಯಕ್ಷ ಸಂಪತ್ ಕುಮಾರ್, ಎಚ್.ಬಿ.ರಂಗಸ್ವಾಮಿ, ಎನ್. ಆರ್.ಮುರಳಿ, ಕೊಪ್ಪಲು ಮಂಜುನಾಥ ಸ್ವಾಮಿ, ಶಿವಕುಮಾರ್, ಎನ್.ಡಿ.ಶಂಕರ್, ತೋಪೇಗೌಡ, ಜಾವೇದ್ ಹಾಗೂ ಗ್ರಾಮಸ್ಥರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net