ವಿದ್ಯಾರ್ಥಿಗಳ ಸರ್ವಾಂಗೀಣ ಅಭಿವೃದ್ಧಿಗೆ ಎನ್‌ಎಸ್‌ಎಸ್ ಸಹಕಾರಿ

ಅರಸೀಕೆರೆ ಗ್ರಾಮಾಂತರ ತಾಲೂಕಿನ ಚಿಕ್ಕೂರು ಗ್ರಾಮದಲ್ಲಿ ನಡೆದ ರಾಷ್ಟ್ರೀಯ ಸೇವಾ ಯೋಜನೆ ವಾರ್ಷಿಕ ವಿಶೇಷ ಶಿಬಿರದಲ್ಲಿ ಪ್ರೊ.ಗೀತಾ ಮಾತನಾಡಿದರು. ಬಸವರಾಜು, ಗುರುಮೂರ್ತಿ, ರೇಣುಕ ಮೂರ್ತಿ, ಹುಚ್ಚೇಗೌಡ, ಚಂದ್ರಶೇಖರ್, ಪುಷ್ಪವತಿ, ಪ್ರಕಾಶ್, ಹರೀಶ್ ಉಪಸ್ಥಿತರಿದ್ದರು.

Published on
ಅರಸೀಕೆರೆ (ಗ್ರಾಮಾಂತರ): ವಿದ್ಯಾರ್ಥಿಗಳ ವ್ಯಕ್ತಿತ್ವದೊಂದಿಗೆ ಸರ್ವಾಂಗೀಣ ಅಭಿವೃದ್ಧಿಗೆ ಎನ್‌ಎಸ್‌ಎಸ್ ಶಿಬಿರ ಸಹಕಾರಿಯಾಗಲಿದೆ ಎಂದು ಅರಸೀಕೆರೆ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಪ್ರೊ.ಗೀತಾ ಅಭಿಪ್ರಾಯಪಟ್ಟರು.
ತಾಲೂಕಿನ ಚಿಕ್ಕೂರು ಗ್ರಾಮದಲ್ಲಿ ಸೋಮವಾರ ಆಯೋಜಿಸಿದ್ದ ರಾಷ್ಟ್ರೀಯ ಸೇವಾ ಯೋಜನೆಯ ವಾರ್ಷಿಕ ವಿಶೇಷ ಶಿಬಿರದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಸಾಮಾಜಿಕ ಚಿಂತನೆ, ಕಳಕಳಿ ಹಾಗೂ ಸೇವಾ ಕಾರ್ಯದಲ್ಲಿ ಇಂದಿನ ವಿದ್ಯಾರ್ಥಿಗಳ ಪಾತ್ರ ಪ್ರಮುಖವಾದದು ಎಂದರು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಚಿಕ್ಕೊರು ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಗಂಗಾಧರ್, ವಿದ್ಯಾರ್ಥಿಗಳು ಇಂತಹ ಕಾರ್ಯಕ್ರಮದಲ್ಲಿ ಪಾಲ್ಗೊಂಡಲ್ಲಿ ಉತ್ತಮ ಭವಿಷ್ಯ ರೂಪಿಸಿಕೊಳ್ಳಬಹುದು ಎಂದರು.
ಶಿಬಿರಾಧಿಕಾರಿ ಕುಮಾರ್ ಪ್ರತಿಜ್ಞಾವಿಧಿ ಹಾಗೂ ಕಾರ್ಯಕ್ರಮದ ಉದ್ದೇಶ ಓದಿದರು. ಕಲಾವಿದ ಚಂದ್ರೇಗೌಡ, ಮುಖಂಡರಾದ ಬಸವರಾಜು, ಗುರುಮೂರ್ತಿ, ರೇಣುಕಮೂರ್ತಿ, ಹುಚ್ಚೇಗೌಡ , ಚಂದ್ರಶೇಖರ್, ಪುಷ್ಪವತಿ, ಪ್ರಕಾಶ್, ಡಾ.ಹರೀಶ್ ಹಾಜರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net