ಪರಮೇಶ್ ಮಡಬಲುಗೆ ರಾಷ್ಟ್ರೀಯ ಪ್ರಶಸ್ತಿ

ಎಂ.ಜಿ.ಪರಮೇಶ್ ಮಡಬಲು
ಎಂ.ಜಿ.ಪರಮೇಶ್ ಮಡಬಲು
Published on
ಆಲೂರು: ಡಾ.ವಿ.ಬಿ.ಹಿರೇಮಠ ಮೆಮೋರಿಯಲ್ ಪ್ರತಿಷ್ಠಾನ ಹಾಗೂ ಅಶ್ವಿನಿ ಪ್ರಕಾಶನ ಗದಗ ಕೊಡಮಾಡುವ 2026 ನೇ ಸಾಲಿನ ಪಂಡಿತ ಪುಟ್ಟರಾಜ ಗವಾಯಿ ಸದ್ಭಾವನ ರಾಷ್ಟ್ರೀಯ ಪ್ರಶಸ್ತಿಗೆ ಸಾಹಿತಿ ಎಂ.ಜಿ.ಪರಮೇಶ್ ಮಡಬಲು ಆಯ್ಕೆಯಾಗಿದ್ದಾರೆ ಎಂದು ಪ್ರತಿಷ್ಠಾನದ ಅಧ್ಯಕ್ಷೆ ಡಾ.ವಿ.ವಿ.ಹಿರೇಮಠ ತಿಳಿಸಿದ್ದಾರೆ.
ಎಂ.ಜಿ. ಪರಮೇಶ್ ಅವರು ಪ್ರಸ್ತುತ ಹೊಳೆನರಸೀಪುರ ಬಿ.ಆರ್.ಸಿ. ಕೇಂದ್ರದಲ್ಲಿ ಕ್ಷೇತ್ರ ಸಂಪನ್ಮೂಲ ವ್ಯಕ್ತಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದು, ತಮ್ಮ ಬಿಡುವಿನ ವೇಳೆಯಲ್ಲಿ ಶಾಲಾ ಮಕ್ಕಳಿಗಾಗಿ ಹಲವು ಶೈಕ್ಷಣಿಕ ಲೇಖನಗಳು, ಕವನಗಳು, ಶಿಶುಗೀತೆಗಳನ್ನು ಬರೆದಿದ್ದಾರೆ. ಈಗಾಗಲೇ ಹಲವು ಕೃತಿಗಳನ್ನು ರಚಿಸಿದ್ದು, ಸಾಧಕರ ಹಾದಿಯಲ್ಲಿ, ಜ್ಞಾನ ವಿಜ್ಞಾನ ಸಂಗಮ, ಚಿಗುರೊಡೆದ ಕನಸು,ಬೆಳದಿಂಗಳು, ಶಾಂತಮಲ್ಲ ಪ್ರಭೆ, ಶ್ರೀ ಬೀರಲಿಂಗ ದರ್ಶನ, ಹಸಿರು ಸಿರಿ,
ಗುರು ಕಾರುಣ್ಯ, ಬೆಳಗುವ ಹಣತೆಗಳು, ಅವ್ವ, ಸಾಹಿತ್ಯ ಸಂಭ್ರಮ, ಚುಟುಕು-ಗುಟುಕು ಮುಂತಾದ 12 ಕ್ಕೂ ಹೆಚ್ಚು ಮೌಲ್ಯಯುತ ಕೃತಿಗಳನ್ನು ಹೊರತಂದಿದ್ದಾರೆ. ಶಿಕ್ಷಣ ಇಲಾಖೆಯ ಹಲವು ತರಬೇತಿಗಳಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಕಾರ್ಯನಿರ್ವಹಿಸಿದ್ದು, ರಾಷ್ಟ್ರೀಯ ಹಬ್ಬಗಳಲ್ಲಿ ಮಹಾತ್ಮರ ಜಯಂತಿಗಳಲ್ಲಿ ಉಪನ್ಯಾಸ ನೀಡಿದ್ದಾರೆ. ಇವರ ಸಾಹಿತ್ಯ ಹಾಗೂ ಶೈಕ್ಷಣಿಕ ಸಾಧನೆಯನ್ನು ಪರಿಗಣಿಸಿ ಗದಗ ಜಿಲ್ಲಾ ವಿ.ಬಿ.ಹಿರೇಮಠ ಮೆಮೋರಿಯಲ್ ಪ್ರತಿಷ್ಠಾನ ಮಾ.3 ರಂದು ಗದಗ ನಗರದಲ್ಲಿ ನಡೆಯುವ ಪಂಡಿತ ಪುಟ್ಟರಾಜ ಗವಾಯಿಗಳ 112 ನೇ ಜಯಂತ್ಯುತ್ಸವ ಸಮಾರಂಭದಲ್ಲಿ ಪ್ರಶಸ್ತಿ ನೀಡಲಾಗುತ್ತಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net