ನಾಡಪ್ರಭು ಕೆಂಪೇಗೌಡ ಜಯಂತಿ ನಾಳೆ

ಕೆ.ಎಸ್ ಮಂಜೇಗೌಡ
ಕೆ.ಎಸ್ ಮಂಜೇಗೌಡ
Published on
ಆಲೂರು: ಜು.8ರಂದು ನಾಡಪ್ರಭು ಕೆಂಪೇಗೌಡರ ಜಯಂತಿಯನ್ನು ಅರ್ಥಪೂರ್ಣವಾಗಿ ಮತ್ತು ಅದ್ದೂರಿಯಾಗಿ ಆಚರಿಸಲಾಗುತ್ತಿದ್ದು. ತಾಲೂಕಿನ ಎಲ್ಲ ಸಮುದಾಯದ ಜನರು ಜಾತಿ-ಭೇದ ಮರೆತು ಕಾರ್ಯಕ್ರಮದಲ್ಲಿ ಭಾಗಿಯಾಗಿ ಯಶಸ್ವಿಗೊಳಿಸಬೇಕೆಂದು ತಾಲೂಕು ಒಕ್ಕಲಿಗ ಸಂಘದ ಉಪಾಧ್ಯಕ್ಷ ಕೆ.ಎಸ್.ಮಂಜೇಗೌಡ ಮನವಿ ಮಾಡಿದರು.
ಕೆಂಪೇಗೌಡ ಜಯಂತಿಯನ್ನು ತಾಲೂಕು ಒಕ್ಕಲಿಗರ ಸಂಘ ಮತ್ತು ತಾಲೂಕು ಒಕ್ಕಲಿಗರ ಯುವ ವೇದಿಕೆ ಸಹಯೋಗದೊಂದಿಗೆ ಆಲೂರು ಪಟ್ಟಣದ ಒಕ್ಕಲಿಗರ ಸಮುದಾಯ ಭವನದಲ್ಲಿ ಆಯೋಜಿಸಲಾಗಿದೆ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ತಾಲೂಕು ಪಿಎಲ್‌ಡಿ ಬ್ಯಾಂಕ್ ಮಾಜಿ ಅಧ್ಯಕ್ಷ ಬಿ.ಕೆ.ಲಿಂಗರಾಜು ಮಾತಾನಾಡಿ, ಮೆರವಣಿಗೆಯು ವೀರಶೈವ ಕಲ್ಯಾಣ ಮಂಟಪದಿಂದ ಭವ್ಯ ಬೆಳ್ಳಿರಥದಲ್ಲಿ ನಾಡಪ್ರಭು ಕೆಂಪೇಗೌಡ ಭಾವಚಿತ್ರವನ್ನು ಇರಿಸಿ ಪಟ್ಟಣದ ಮುಖ್ಯರಸ್ತೆಗಳಲ್ಲಿ ಸಾಗಲಿದೆ. ಜಾನಪದ ಕಲಾತಂಡ, ವೀರಗಾಸೆ ಕುಣಿತ, ಡಿಜೆ ಆರ್ಕೆಷ್ಟ್ರಾ, ನಂದಿಧ್ವಜ ಕುಣಿತ ಹಾಗೂ ಇತರ ಕಲಾತಂಡಗಳು ಭವ್ಯ ಮೆರವಣಿಗೆಯಲ್ಲಿ ಸಾಗಲಿವೆ ಎಂದು ಹೇಳಿದರು.
ಮುಖಂಡ ನಟರಾಜು ನಾಕಲಗೂಡು ಮಾತನಾಡಿ, ಕೆಂಪೇಗೌಡರು ತಮ್ಮ ಜೀವಿತಾವಧಿಯಲ್ಲಿ ಸಮಾಜಕ್ಕೆ ತಮ್ಮದೇ ಆದ ಕೊಡುಗೆ ನೀಡಿ, ತಮ್ಮ ಆದರ್ಶಗಳನ್ನು ಯುವಜನರಿಗೆ ಬಿಟ್ಟು ಹೋಗಿದ್ದಾರೆ. ಜಯಂತಿ ಕೇವಲ ಒಂದು ಸಮುದಾಯಕ್ಕೆ ಸೀಮಿತವಾದುದಲ್ಲ. ಎಲ್ಲ ವರ್ಗದ ಜನರು ಕಾರ್ಯಕ್ರಮಕ್ಕೆ ಆಗಮಿಸಬೇಕು. ಬರುವ ಎಲ್ಲ ಸಾರ್ವಜನಿಕರಿಗೂ ಊಟದ ವ್ಯವಸ್ಥೆ ಮಾಡಲಾಗಿದೆ. ಜತೆಗೆ ಒಕ್ಕಲಿಗ ಯುವ ಬ್ರಿಗೇಡ್ ವತಿಯಿಂದ ಪಟ್ಟಣದ ಮುಖ್ಯರಸ್ತೆಯಲ್ಲಿ ಬೈಕ್ ರ‌್ಯಾಲಿ ಹಮ್ಮಿಕೊಳ್ಳಲಾಗಿದೆ ಎಂದು ವಿವರಿಸಿದರು.
ಒಕ್ಕಲಿಗ ಸಂಘದ ಕಾರ್ಯದರ್ಶಿ ಶಾಂತಕೃಷ್ಣ, ಸಮುದಾಯದ ಹಿರಿಯ ಮುಖಂಡರಾದ ಲೋಕೇಶ್, ಗಂಗಾಧರ್ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net