ಸಕಲೇಶಪುರದಲ್ಲಿ ಕೊಲೆ ಆರೋಪಿ ಬಂಧನ

  ಬಂಧನ
ಬಂಧನ
Published on
ಸಕಲೇಶಪುರ: ಬೆಂಗಳೂರಿನಲ್ಲಿ ಯುವತಿ ಕೊಲೆ ಮಾಡಿದ ಆರೋಪದಡಿ ಸಕಲೇಶಪುರ ಮೂಲದ ವ್ಯಕ್ತಿಯನ್ನು ಶೇಷಾದ್ರಿಪುರಂ ಪೊಲೀಸರು ಭಾನುವಾರ ಸಕಲೇಶಪುರದಲ್ಲಿ ಬಂಧಿಸಿದ್ದಾರೆ.
ಪಟ್ಟಣದ ಅಗ್ರಹಾರ ಬಡಾವಣೆಯ ಶರತ್ ಅಲಿಯಾಸ್ ಡಿಜೆ ಬಂಧಿತ ಆರೋಪಿ. ಮೃತ ಯುವತಿ ಸಕಲೇಶಪುರದ ಎನ್.ಡಿ.ಅನುಷಾ.
ಪೊಲೀಸರ ಮೂಲಗಳ ಪ್ರಕಾರ ಶರತ್ ಮತ್ತು ಅನುಷಾ ಲೀವ್-ಇನ್ ಸಂಬಂಧ ಹೊಂದಿದ್ದು, ಅನುಷಾ ವಾಸಕ್ಕಾಗಿ ಬೆಂಗಳೂರಿನ ಶೇಷಾದ್ರಿಪುರಂ ಪ್ರದೇಶದಲ್ಲಿ ಬಾಡಿಗೆ ಮನೆ ವ್ಯವಸ್ಥೆ ಮಾಡಲಾಗಿತ್ತು. ಜೂ.13ರಂದು ರಾತ್ರಿ ಶರತ್ ಅನುಷಾಳನ್ನು ಕೊಲೆ ಮಾಡಿರುವ ಆರೋಪ ಕೇಳಿಬಂದಿದೆ.
ಘಟನೆ ಬಳಿಕ ಪೊಲೀಸರ ತನಿಖೆಯನ್ನು ದಿಕ್ಕುತಪ್ಪಿಸುವ ಉದ್ದೇಶದಿಂದ ಶರತ್ ಸಕಲೇಶಪುರಕ್ಕೆ ಬಂದು ಯಾವುದೇ ಅನುಮಾನ ಮೂಡದಂತೆ ಸಾಮಾನ್ಯವಾಗಿ ಓಡಾಡಿಕೊಂಡಿದ್ದ. ಪ್ರಕರಣದ ತನಿಖೆ ನಡೆಸಿದ ಶೇಷಾದ್ರಿಪುರಂ ಠಾಣೆ ಪೊಲೀಸರು ಆರೋಪಿಯ ಚಲನವಲನಗಳ ಬಗ್ಗೆ ಮಾಹಿತಿ ಸಂಗ್ರಹಿಸಿ ಕಾರ್ಯಾಚರಣೆ ನಡೆಸಿದರು.
ಸಕಲೇಶಪುರ ನಗರ ಪೊಲೀಸ್ ಠಾಣೆಯ ಇನ್‌ಸ್ಪೆಕ್ಟರ್ ವಿ.ಸಿ.ವನರಾಜು ಅವರ ಮಾರ್ಗದರ್ಶನದಲ್ಲಿ ಸಿಬ್ಬಂದಿ ಪೃಥ್ವಿ ಹಾಗೂ ಮಧು ಅವರ ಸಹಕಾರದೊಂದಿಗೆ ಶೇಷಾದ್ರಿಪುರಂ ಠಾಣೆ ಪೊಲೀಸರು ಭಾನುವಾರ ತಡರಾತ್ರಿ ಆರೋಪಿಯನ್ನು ಬಂಧಿಸಿ ತನಿಖೆ ಮುಂದುವರಿಸಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net