ಸಹಕಾರ ಸಂಘದ ಅಧ್ಯಕರಾಗಿ ಮುರಳಿ ಆಯ್ಕೆ

ಪಟ್ಟಣದ ಗಾಯತ್ರಿ ವಿವಿಧೋದ್ದೇಶ ಸಹಕಾರ ಸಂಘದ ನೂತನ ಅಧ್ಯಕ್ಷ ಹಾಗೂ ಉಪಾಧ್ಯಕ್ಷರಾಗಿ ಆಯ್ಕೆಯಾದ  ಬಿ.ಎಸ್.ಮುರಳಿ, ಉಪಾಧ್ಯಕ್ಷೆ ಬಿ.ಮೀರಾ ಅರಸ್ ಅವರನ್ನು ಸಂಘದವತಿಯಿಂದ ಅಭಿನಂದಿಸಲಾಯಿತು.  ಎಚ್.ಎಸ್.ರಮೇಶ್, ಬಿ.ಕೆ.ಕುಮಾರಸ್ವಾಮಿ, ಟಿ.ಸಿ.ಶಶಿಕುಮಾರ್ ಇತರರಿದ್ದರು.
ಪಟ್ಟಣದ ಗಾಯತ್ರಿ ವಿವಿಧೋದ್ದೇಶ ಸಹಕಾರ ಸಂಘದ ನೂತನ ಅಧ್ಯಕ್ಷ ಹಾಗೂ ಉಪಾಧ್ಯಕ್ಷರಾಗಿ ಆಯ್ಕೆಯಾದ ಬಿ.ಎಸ್.ಮುರಳಿ, ಉಪಾಧ್ಯಕ್ಷೆ ಬಿ.ಮೀರಾ ಅರಸ್ ಅವರನ್ನು ಸಂಘದವತಿಯಿಂದ ಅಭಿನಂದಿಸಲಾಯಿತು. ಎಚ್.ಎಸ್.ರಮೇಶ್, ಬಿ.ಕೆ.ಕುಮಾರಸ್ವಾಮಿ, ಟಿ.ಸಿ.ಶಶಿಕುಮಾರ್ ಇತರರಿದ್ದರು.
Published on
ಬೇಲೂರು: ಪಟ್ಟಣದ ಗಾಯತ್ರಿ ವಿವಿಧೋದ್ದೇಶ ಸಹಕಾರ ಸಂಘದ ಅಧ್ಯಕ್ಷ-ಉಪಾಧ್ಯಕ್ಷರ ಆಯ್ಕೆಗಾಗಿ ಇತ್ತೀಚೆಗೆ ನಡೆದ ಚುನಾವಣೆಯಲ್ಲಿ ಅಧ್ಯಕ್ಷರಾಗಿ ಬಿ.ಎಸ್.ಮುರಳಿ, ಉಪಾಧ್ಯಕ್ಷರಾಗಿ ಬಿ.ಮೀರಾ ಅರಸ್ ಅವಿರೋಧವಾಗಿ ಆಯ್ಕೆಯಾದರು.
ಚುನಾವಣಾಧಿಕಾರಿಯಾಗಿದ್ದ ಸಹಕಾರ ಸಂಘಗಳ ಉಪನಿಬಂದಕ ಗುರುಮೂರ್ತಿ ಘೋಷಿಸಿದ್ದರು.
ಸಂಘದ ಐದು ವರ್ಷದ ಅವದಿ ಮುಗಿದ ಹಿನ್ನೆಲೆ ಕಳೆದ ತಿಂಗಳು ಸಂಘದ ನೂತನ ಆಡಳಿತ ಮಂಡಳಿಗೆ ನಿರ್ದೇಶಕರ ಆಯ್ಕೆಯಾಗಿದ್ದರು.
ಗಾಯತ್ರಿ ವಿವಿಧೋದ್ದೇಶ ಸಹಕಾರ ಸಂಘದ ನೂತನ ಅಧ್ಯಕ್ಷ ಬಿ.ಎಸ್.ಮುರಳಿ ಮಾತನಾಡಿ, ಸಂಘದ ಎಲ್ಲ ಷೇರುದಾರರು, ನಿದೇಶಕರು ನನ್ನ ಮೇಲೆ ಇಟ್ಟಿರುವ ವಿಶ್ವಾಸಕ್ಕೆ ಕೃತಜ್ಞತೆ ಸಲ್ಲಿಸುತ್ತೇನೆ. ಮತ್ತು ಸಂಘದ ಅಭಿವೃದ್ಧಿ, ಸದಸ್ಯರ ಆರ್ಥಿಕ ಸಬಲೀಕರಣ ಹಾಗೂ ಉತ್ತಮ ಸೇವೆ ಒದಗಿಸುವ ನಿಟ್ಟಿನಲ್ಲಿ ಆಡಳಿತ ಮಂಡಳಿಯ ಎಲ್ಲ ನಿರ್ದೇಶಕರೊಂದಿಗೆ ಸಮನ್ವಯದಿಂದ ಕಾರ್ಯನಿರ್ವಹಿಸಲಾಗುವುದು. ಸಹಕಾರ ಸಂಘವು ಇನ್ನಷ್ಟು ಪ್ರಗತಿಪರವಾಗಿ ಬೆಳೆಯಲು ಹೊಸ ಯೋಜನೆಗಳನ್ನು ರೂಪಿಸಿ, ಸದಸ್ಯರಿಗೆ ಅನುಕೂಲವಾಗುವ ಕಾರ್ಯಕ್ರಮ ಜಾರಿಗೊಳಿಸುವ ಗುರಿ ಹೊಂದಿದ್ದೇವೆ ಎಂದರು.
ನಿರ್ದೇಶಕರಾದ ಎಚ್.ಎಸ್.ರಮೇಶ್, ಬಿ.ಕೆ.ಕುಮಾರಸ್ವಾಮಿ, ಟಿ.ಸಿ.ಶಶಿಕುಮಾರ್, ಎಚ್.ಎಸ್.ಕೇಶವಮೂರ್ತಿ, ಕೆ.ಎಸ್.ರಾಘವೇಂದ್ರ, ಬಿ.ಎಸ್.ಮಂಜುನಾಥ್, ವಾದಿರಾಜ್, ಶ್ರೀವತ್ಸ.ಟಿ.ಎ. ಕೆ.ಎಂ.ನವರತ್ನಕುಮಾರಿ, ಮುಖ್ಯ ಕಾರ್ಯನಿರ್ವಾಹಕರಾಗಿ ಎಚ್.ಎಸ್.ನಾಗಭೂಷಣ್ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net