ಚನ್ನರಾಯಪಟ್ಟಣದ ಆಂಜನೇಯ ಸ್ವಾಮಿ ದೇಗುಲದಲ್ಲಿ ಮಹಾಭುಜ ಮಾರುತಿ ಮೂವಿ ಮೇಕರ್ ಶಾರದಾ ಚೌಡೇನಹಳ್ಳಿ ನಿರ್ಮಿಸುತ್ತಿರುವ ಮಿನುಗು ಸಿನಿಮಾದ ಮುಹೂರ್ತ ಕಾರ್ಯಕ್ರಮದಲ್ಲಿ ಸಿ.ಎನ್. ಬಾಲಕೃಷ್ಣ ಕ್ಲಾಪ್ ಮಾಡಿ ಶುಭ ಹಾರೈಸಿದರು. ಶ್ರೀ ಚಂದ್ರಶೇಖರ ಗುರೂಜಿ, ವಿ.ಮನೋಹರ್, ರಾಜೇಶ್ ಕೆಂಚನಹಳ್ಳಿ, ಯೋಗೀಶ್ ಸೇರಿದಂತೆ ಇತರರು ಇದ್ದರು.
Published on:
Copied
Follow Us
ಪ್ರಮುಖ ಮುಖ್ಯಾಂಶಗಳು
ಶಾಸಕ ಸಿ.ಎನ್.ಬಾಲಕೃಷ್ಣ ಚಾಲನೆ
ಚನ್ನರಾಯಪಟ್ಟಣ: ಗ್ರಾಮೀಣ ಪ್ರತಿಭೆಗಳು ಇಂದಿನ ಸಿನಿಮಾ ಕ್ಷೇತ್ರದ ಪ್ರಮುಖ ನಟರಾಗಿರುವುದು ಹೆಮ್ಮೆಯ ಸಂಗತಿ ಎಂದು ಶಾಸಕ ಸಿ.ಎನ್.ಬಾಲಕೃಷ್ಣ ಹೇಳಿದರು.
ಪಟ್ಟಣದ ಆಂಜನೇಯ ಸ್ವಾಮಿ ದೇಗುಲದಲ್ಲಿ ಮಹಾಬಜ ಮಾರುತಿ ಮೂವಿ ಮೇಕರ್ ಶಾರದಾ ಚೌಡೇನಹಳ್ಳಿ ಅವರು ನಿರ್ಮಿಸುತ್ತಿರುವ ಮಿನುಗು ಸಿನಿಮಾದ ಮುಹೂರ್ತ ಕಾರ್ಯಕ್ರಮದಲ್ಲಿ ಕ್ಲಾಪ್ ಮಾಡಿ ಮಾತನಾಡಿದರು.
ಕೆಲವಾರು ವರ್ಷಗಳ ಹಿಂದೆ ಗ್ರಾಮೀಣ ಭಾಗದಲ್ಲಿ ಪೌರಾಣಿಕ ನಾಟಕಗಳು ತುಂಬ ಪ್ರಸಿದ್ಧಿ ಹೊಂದಿದ್ದವು. ಒಬ್ಬರಿಗಿಂತ ಒಬ್ಬರು ಪಾತ್ರಧಾರಿಗಳು ಉತ್ತಮ ಎಂಬಂತೆ ಪ್ರದರ್ಶನ ನೀಡುತ್ತಿದ್ದು ಸೈ ಎನಿಸುವಂತೆ ಇರುತಿತ್ತು. ಅಂತಹ ಬಹುತೇಕ ಪ್ರತಿಭೆಗಳು ಸಿನಿಮಾ ರಂಗಕ್ಕೆ ಪದಾರ್ಪಣೆ ಮಾಡಿ ಯಶಸ್ಸು ಕಂಡಿರುವುದು ಶ್ಲಾಘನೀಯ ಸಂಗತಿ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಸಂಗೀತ ನಿರ್ದೇಶಕ ವಿ.ಮನೋಹರ್ ಮಾತನಾಡಿ, ಶಾರದಾ ಚೌಡೇನಹಳ್ಳಿ ಅವರು ನಿರ್ಮಾಣ ಮಾಡುತ್ತಿರುವ ಮಿನುಗು ಚಿತ್ರಕ್ಕೆ ಬಿ.ಶಿವಾನಂದ ಅವರು ಕಥೆ ಹಾಗೂ ಸಂಭಾಷಣೆ ಬರೆದಿದ್ದು, ರಾಜೇಶ್ ಕೆಂಚನಹಳ್ಳಿ ಅವರು ನಿರ್ದೇಶನ ಮಾಡಲಿದ್ದಾರೆ ಎಂದು ತಿಳಿಸಿದರು.
ಚಿತ್ರತಂಡವು ಆಂಜನೇಯ ಸ್ವಾಮಿಗೆ ವಿಶೇಷ ಪೂಜೆ ಸಲ್ಲಿಸಿತು. ಕತ್ತರಿಘಟ್ಟದ ಮೆಳಿಯಮ್ಮ ಆಧ್ಯಾತ್ಮಿಕ ಕೇಂದ್ರದ ಶ್ರೀ ಚಂದ್ರಶೇಖರ ಗುರೂಜಿ ಚಿತ್ರತಂಡಕ್ಕೆ ಆಶೀರ್ವದಿಸಿದರು. ಭೂಮಿ ಕ್ಷೇಮಾಭಿವೃದ್ಧಿ ಸಂಘದ ಮಾಜಿ ಅಧ್ಯಕ್ಷ ರಾಜ ಕುಮಾರ್, ಉದ್ಯಮಿ ಅಣತಿ ಯೋಗೇಶ್, ಚಿತ್ರತಂಡ ಹಾಗೂ ಇತರರು ಇದ್ದರು.