ಅರಸೀಕೆರೆ ತಾಲೂಕಿನ ಕಣಕಟ್ಟೆ ಗ್ರಾಮದಲ್ಲಿ ಶುಕ್ರವಾರ ಭಾವೈಕ್ಯತೆಯ ಸಂಕೇತವಾಗಿರುವ ಮುಸ್ಲಿಮರ ಪವಿತ್ರ ಮೊಹರಂ ಹಬ್ಬ ಆಚರಿಸಲಾಯಿತು. ಈ ವೇಳೆ ಕೆಂಡದ ಗುಂಡಿಗೆ ಎಲ್ಲರೂ ಉಪ್ಪು ಮತ್ತು ಮೆಣಸು ಹಾಕುವ ಮೂಲಕ ಭಕ್ತಿ ಸಮರ್ಪಿಸಿದರು.
ಮೋಹರಂ ಆಚರಣೆಯ ಒಂಬತ್ತನೇ ದಿನ ಸಂಪ್ರದಾಯದಂತೆ ಇಲ್ಲಿನ ಮುಸ್ಲಿಮರು ಬಾಬಯ್ಯನ ಆರಾಧನೆ ಮಾಡುತ್ತಾರೆ. ಇದರಲ್ಲಿ ಹಿಂದೂ ಧರ್ಮೀಯರೂ ಭಾಗಿಯಾಗುತ್ತಾರೆ. ಕೆಂಡದ ಗುಂಡಿಗೆ ಉಪ್ಪು ಮತ್ತು ಮೆಣಸು ಹಾಕಿ ಬೇಡಿಕೊಂಡರೆ ಇಷ್ಟಾರ್ಥಗಳು ನೆರವೇರುತ್ತವೆ ಎನ್ನುವ ನಂಬಿಕೆ ಗ್ರಾಮಸ್ಥರಲ್ಲಿ ಇದೆ.
ಆಚರಣೆ ವೇಳೆ ಗ್ರಾಪಂ ಮಾಜಿ ಸದಸ್ಯ ಅತೀಕ್‌ವುಲ್ಲಾ ಸೇರಿ ಮುಸ್ಲಿಂ ಸಮುದಾಯದ ಮುಖಂಡರು, ಗ್ರಾಮಸ್ಥರು ಭಾಗಿಯಾಗಿದ್ದರು.