ಆಟೋ ಪಲ್ಟಿಯಾಗಿ ತಾಯಿ, ಮಗ ಸಾವು

 ಪ್ರಿಯಾಂಕಾ, ವಿನಿತ್
ಪ್ರಿಯಾಂಕಾ, ವಿನಿತ್
Published on

ಪ್ರಮುಖ ಮುಖ್ಯಾಂಶಗಳು

  • auto accident
ಆಲೂರು: ಆಲೂರು ತಾಲೂಕಿನ ಹೊನ್ನೇನಹಳ್ಳಿ ಕ್ರಾಸ್ ಬಳಿ ಚಲಿಸುತ್ತಿದ್ದ ಆಟೋ ಪಲ್ಟಿಯಾಗಿ ತಾಯಿ ಹಾಗೂ ಮಗ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಸೋಮವಾರ ಸಂಜೆ ಸಂಭವಿಸಿದೆ.
ಕುದುರುವಳ್ಳಿ ಗ್ರಾಮದ ಪ್ರಿಯಾಂಕಾ (28) ಮತ್ತು ಅವರ ಪುತ್ರ ವಿನಿತ್ (7) ಮೃತರು. ಮಗನನ್ನು ಹಾಸನದ ಶಾಲೆಗೆ ಸೇರಿಸಲು ವರ್ಗಾವಣೆ ಪತ್ರ ತರಲು ಹೋಗಿ, ಮರಳಿ ಗ್ರಾಮಕ್ಕೆ ಬರುವಾಗ ಘಟನೆ ಸಂಭವಿಸಿದೆ. ವೇಗವಾಗಿ ಆಟೋ ಚಲಾಯಿಸುತ್ತಿದ್ದ ವೇಳೆ ಚಾಲಕನ ನಿಯಂತ್ರಣ ತಪ್ಪಿ ವಾಹನ ಪಲ್ಟಿಯಾದ ಪರಿಣಾಮ ಈ ಅವಘಡವಾಗಿದೆ.
ಅಪಘಾತದಲ್ಲಿ ಆಟೋ ಚಾಲಕ ಅಬ್ಬಾಸ್ (52), ಸಹಪ್ರಯಾಣಿಕ ಸಾಗರ್ (13) ಗಾಯಗೊಂಡಿದ್ದು, ಅವರನ್ನು ಆಲೂರು ತಾಲೂಕು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ಆಲೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ದಾಖಲಾಗಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net