ಹಿರಿಯ ನಾಗರಿಕರ ದಿನಾಚರಣೆ ಅಂಗವಾಗಿ ದೇಶಭಕ್ತರ ಬಳಗದಿಂದ ಸಮಾಜ ಸೇವಕ ಸುಲೇಮಾನ್‌ರನ್ನು ಸನ್ಮಾನಿಸಲಾಯಿತು. ಮಹೇಶ್, ಮೋಹನ್, ಧರ್ಮ ಪ್ರಕೃತಿ ಇತರರಿದ್ದರು.
Published on:
Copied
Follow Us
ಪ್ರಮುಖ ಮುಖ್ಯಾಂಶಗಳು
ದೇಶಭಕ್ತರ ಬಳಗದ ಅಧ್ಯಕ್ಷ ಡಾ.ಸಂತೋಷ್ ವಿಷಾದ
ಬೇಲೂರು:
ಕೌಟುಂಬಿಕ ಮತ್ತು ಸಾಮಾಜಿಕ ವ್ಯವಸ್ಥೆಯಲ್ಲಾಗುತ್ತಿರುವ ಬದಲಾವಣೆಗಳಿಂದ ಇತ್ತೀಚಿನ ದಿನಗಳಲ್ಲಿ ವೃದ್ಧ್ದಾಶ್ರಾಮಗಳು ಹೆಚ್ಚಾಗುತ್ತಿರುವುದು ವಿಷಾದದ ಸಂಗತಿಎಂದು ದೇಶಭಕ್ತರ ಬಳಗದ ಅಧ್ಯಕ್ಷ ಡಾ.ಸಂತೋಷ್ ಹೇಳಿದರು.
ಹಿರಿಯ ನಾಗರಿಕರ ದಿನಾಚರಣೆ ಅಂಗವಾಗಿ ಪಟ್ಟಣದ ಪಂಪ್‌ಹೌಸ್ ರಸ್ತೆಯಲ್ಲಿರುವ ಪುತ್ರನ ನಿವಾಸದಲ್ಲಿ ಹಿರಿಯ ನಾಗರಿಕ ಹಾಗೂ ಸಮಾಜ ಸೇವಕ ಸುಲೇಮಾನ್‌ರನ್ನು ಶುಕ್ರವಾರ ಸಂಜೆ ಸನ್ಮಾನಿಸಿ ಮಾತನಾಡಿದರು.
ಯುವಜನತೆ ಶಿಕ್ಷಣ ಹಾಗೂ ಉದ್ಯೋಗಕ್ಕಾಗಿ ಬೇರೆ ಊರುಗಳಿಗೆ, ವಿದೇಶಗಳಿಗೆ ವಲಸೆ ಹೋಗುತ್ತಿದ್ದಾರೆ. ಇದರಿಂದ ವಯಸ್ಸಾದ ಹಿರಿಯರು ತವರೂರಲ್ಲೇ ಒಂಟಿಯಾಗಿ ಉಳಿಯುವಂತಾಗಿದೆ. ಆಧುನಿಕ ಬದುಕಿನ ವೇಗ, ಆರ್ಥಿಕ ಒತ್ತಡದ ಜತೆಗೆ ಕೌಟುಂಬಿಕ ಕಲಹ, ಆದುನಿಕ ಜಗತ್ತಿನ ವ್ಯಾಮೋಹದಿಂದ ಹಿರಿಯರ ಆರೈಕೆಗೆ ಸಮಯ ಮೀಸಲಿಡಲು ಯುವ ಜನತೆ ಮನಸ್ಸು ಮಾಡುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ತಲೆಮಾರುಗಳ ನಡುವಿನ ಅಂತರ ಮತ್ತು ಬದಲಾದ ಮನಸ್ಥಿತಿಗಳಿಂದಾಗಿ ಕುಟುಂಬದಲ್ಲಿ ಹೊಂದಾಣಿಕೆ ಕೊರತೆ ಮುಖ್ಯ ಕಾರಣವಾಗಿದೆ. ಹಿರಿಯರು ತಮ್ಮ ಇಳಿ ವಯಸ್ಸಿನಲ್ಲಿ ಪ್ರೀತಿ, ಕಾಳಜಿ ಮತ್ತು ಭದ್ರತೆ ಬಯಸುತ್ತಾರೆ. ಅವರನ್ನು ಗೌರವದಿಂದ ಕಾಣುವ ಮತ್ತು ಆರೈಸುವ ನಮ್ಮ ಸಾಂಸ್ಕೃತಿಕ ಮೌಲ್ಯಗಳನ್ನು ಪಾಲಿಸುವ ಅಗತ್ಯ ಇಂದಿನ ಸಮಾಜಕ್ಕಿದ್ದು, ಯುವ ಜನತೆ ಹಿರಿಯರನ್ನು ಗೌರವಿಸುವಂತ್ತಾಗ ಬೇಕು ಎಂದರು.
ದೇಶಭಕ್ತರ ಬಳಗದ ಕಾರ್ಯದರ್ಶಿ ಮಹೇಶ್, ನಿರ್ದೇಶಕ ಮೋಹನ್, ಉಪನ್ಯಾಸಕ ಧರ್ಮ ಪ್ರಕೃತಿ, ಕಸಾಪ ಅಧ್ಯಕ್ಷ ಮಾ.ನ.ಮಂಜೇಗೌಡ, ವಕೀಲ ಚಂದ್ರು, ಉಪನ್ಯಾಸಕ ಧನಂಜಯ್, ಶಿಕ್ಷಕ ಕುಮಾರಸ್ವಾಮಿ, ಸಿದ್ದೇಗೌಡ, ರಾಜಕುಮಾರ್, ಗಣಿತ ಪ್ರಾಧ್ಯಾಪಕ ಮೋಹನ್ ಸೇರಿದಂತೆ ಇತರರಿದ್ದರು.