ರಸ್ತೆ ಅಭಿವೃದ್ಧಿಗೆ ಶಾಸಕರಿಂದ ಚಾಲನೆ

ಬೇಲೂರು ತಾಲೂಕಿನ ಕನ್ನಾಪುರ-ಗೆಂಡೇಹಳ್ಳಿ ಮಧ್ಯಬಾಗದ ತಲಗೋಡು ರಸ್ತೆ ಅಭಿವೃದ್ಧಿಗೆ ಶಾಸಕ ಎಚ್.ಕೆ.ಸುರೇಶ್ ಚಾಲನೆ ನೀಡಿದರು. ಮೀನಾಕ್ಷಿ, ಅಶೋಕ್, ನವೀನ್, ರತನ್, ದರ್ಶನ್ ಇದ್ದರು.
ಬೇಲೂರು ತಾಲೂಕಿನ ಕನ್ನಾಪುರ-ಗೆಂಡೇಹಳ್ಳಿ ಮಧ್ಯಬಾಗದ ತಲಗೋಡು ರಸ್ತೆ ಅಭಿವೃದ್ಧಿಗೆ ಶಾಸಕ ಎಚ್.ಕೆ.ಸುರೇಶ್ ಚಾಲನೆ ನೀಡಿದರು. ಮೀನಾಕ್ಷಿ, ಅಶೋಕ್, ನವೀನ್, ರತನ್, ದರ್ಶನ್ ಇದ್ದರು.
Published on
ಬೇಲೂರು: ಈ ಭಾಗದ ಗ್ರಾಮಸ್ಥರ ಅಪೇಕ್ಷೆಯಂತೆ ಕನ್ನಾಪುರ-ಗೆಂಡೇಹಳ್ಳಿ ನಡುವೆ 1 ಕಿ.ಮೀ. ರಸ್ತೆ ಅಭಿವೃದ್ಧಿಗೆ 50 ಲಕ್ಷ ರೂ. ಹಾಗೂ ಹಳೇ ಗೆಂಡೇಹಳ್ಳಿ ರಸ್ತೆಯನ್ನು 30 ಲಕ್ಷ ರೂ. ಅನುದಾನದಲ್ಲಿ ಅಭಿವೃದ್ಧಿಪಡಿಸಲು ಭೂಮಿಪೂಜೆ ನೆರವೇರಿಸಲಾಗುತ್ತಿದೆ ಎಂದು ಶಾಸಕ ಎಚ್.ಕೆ.ಸುರೇಶ್ ಹೆಳಿದರು.
ತಾಲೂಕಿನ ಕನ್ನಾಪುರ-ಗೆಂಡೇಹಳ್ಳಿ ಮಧ್ಯಬಾಗದ ತಲಗೋಡು ರಸ್ತೆಗೆ ಬಸ್ಕಲ್
ವೃತ್ತದಲ್ಲಿ ಹಾಗೂ ಹಳೇ ಗೆಂಡೇಹಳ್ಳಿ ಗ್ರಾಮದ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಮಂಗಳವಾರ ಭೂಮಿಪೂಜೆ ನೆರವೇರಿಸಿ ಮಾತನಾಡಿದ ಅವರು, ಸಾರ್ವಜನಿಕರಿಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಹಾಳಾಗಿರುವ ರಸ್ತೆ ಅಭಿವೃದ್ಧಿಗಾಗಿ ಗ್ರಾಮಸ್ಥರು ಮನವಿ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಅವರ ಆಶಯದಂತೆ ಕಾಮಗಾರಿಗೆ ಚಾಲನೆ ನೀಡಲಾಗಿದೆ ಎಂದರು.
ಬೇಲೂರು ಪಟ್ಟಣದ ಡಾ.ಅಂಬೇಡ್ಕರ್ ವೃತ್ತದಿಂದ ಕ್ರೀಡಾಂಗಣದವರೆಗೆ ಡಬಲ್ ರಸ್ತೆ ಅಭಿವೃದ್ಧಿ ಪಡಿಸಲು ಈಗಾಗಲೇ 3.5 ಕೋಟಿ ರೂ. ಅನುದಾನದಲ್ಲಿ ಕಾಮಗಾರಿ ಮಾಡಿಸಲು ಸಿದ್ಧತೆ ನಡೆದಿದ್ದು, ರಸ್ತೆ ವಿಸ್ತರಣೆ ಮಾಡುವುದಕ್ಕಾಗಿ ಈಗಾಗಲೇ ರಸ್ತೆ ಮಧ್ಯದಿಂದ ಗುರುತು ಮಾಡಿದ್ದು, ವಿಸ್ತರಣೆ ನಂತರ ಕಾಮಗಾರಿ ಮಾಡಿಸಲು ಕ್ರಮ ಕೈಗೊಳ್ಳಲಾಗುವುದು. ನಂತರ ಅಲ್ಲಿಂದ ಹಳೇ ಗೆಂಡೇಹಳ್ಳಿ ಮತ್ತು ತಲಗೋಡುವರೆಗೂ ರಸ್ತೆ ಅಭಿವೃದ್ಧಿಗೆ ಸಿಆರ್‌ಎಫ್ ಫಂಡ್‌ನಲ್ಲಿ 6 ಕೋಟಿ ರೂ. ಅನುದಾನ ನೀಡುವಂತೆ ಮನವಿ ಮಾಡಲಾಗಿದೆ. ಅದೇ ರೀತಿ ಬೇಲೂರು ರಸ್ತೆಯಿಂದ ಹಳೇ ಗೆಂಡೇಹಳ್ಳಿಗೆ ತೆರಳುವ ರಸ್ತೆಗೆ 30 ಲಕ್ಷ ರೂ.ನಲ್ಲಿ ಕಾಮಗಾರಿಗೆ ಚಾಲನೆ ನೀಡುತ್ತಿದ್ದು, ರಸ್ತೆ ಅಕ್ಕಪಕ್ಕದವರು ಇನ್ನೂ ಸ್ವಲ್ಪ ಜಾಗ ಬಿಟ್ಟರೆ ರಸ್ತೆ ಅಗಲವಾಗಿ ಜನರ ಓಡಾಟಕ್ಕೆ ಅನುಕೂಲವಾಗುತ್ತದೆ ಎಂದರು.
ಕಳ್ಳೇರಿ ಗ್ರಾಪಂ ಅಧ್ಯಕ್ಷೆ ಮೀನಾಕ್ಷಿ, ಸ್ಥಳೀಯ ಮುಖಂಡರಾದ ಅಶೋಕ್, ನವೀನ್, ರತನ್, ದರ್ಶನ್, ಜಗದೀಶ್, ಲೋಹಿತ್, ವಿಕಾಸ್, ಶಂಕರಾಚಾರ್, ದುರ್ಗೇಗೌಡ, ಪಿಡಿಒ ಕುಮಾರ್ ಸೇರಿದಂತೆ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net