ಕಾಂಗ್ರೆಸ್‌ಗೆ ಸೇರಿದ್ದು ಈಗ ಫಲ ನೀಡಿದೆ

ಸಚಿವ ಕೆ.ಎಂ.ಶಿವಲಿಂಗೇಗೌಡ
ಸಚಿವ ಕೆ.ಎಂ.ಶಿವಲಿಂಗೇಗೌಡ
Published on

ಅರಸೀಕೆರೆ: ತಾಲೂಕಿನ ಸಮಗ್ರ ಅಭಿವೃದ್ಧಿ ಮನಗಂಡು ಕಾಂಗ್ರೆಸ್‌ಗೆ ಸೇರಿದ್ದು ಈಗ ಫಲ ನೀಡಿದೆ ಎಂದು ಸಚಿವ ಕೆ.ಎಂ.ಶಿವಲಿಂಗೇಗೌಡ ಹೇಳಿದರು.

ಅರಸೀಕೆರೆ ವಿಧಾನಸಭಾ ಕ್ಷೇತ್ರದ ಬಗ್ಗೆ ಮಲತಾಯಿ ಧೋರಣೆ ಹೊಂದಿದ್ದ ನಾಯಕರ ನಡೆಯಿಂದ ಬೇಸತ್ತು ಪಕ್ಷ ಬದಲಿಸಿದ್ದೆ. ನಾನಿದ್ದ ಪಕ್ಷದಲ್ಲಿ ಇನ್ನೂ ಹತ್ತು ಬಾರಿ ಗೆದ್ದಿದ್ದರೂ ಮಂತ್ರಿಯನ್ನಾಗಿ ಮಾಡುತ್ತಿರಲಿಲ್ಲ ಎಂದು ಜೆಡಿಎಸ್ ವಿರುದ್ಧ ಪರೋಕ್ಷ ವಾಗ್ದಾಳಿ ನಡೆಸಿದರು.
ಜನತೆ ತೋರಿದ ಅಭಿಮಾನ ಎಂದಿಗೂ ಮರೆಯುವುದಿಲ್ಲ. ಜನಸೇವೆ ಪರಿಗಣಿಸಿ ಸಿಎಂ ಡಿ.ಕೆ.ಶಿವಕುಮಾರ್, ಮಾಜಿ ಸಿಎಂ ಸಿದ್ದರಾಮಯ್ಯ ಹಾಗೂ ಕಾಂಗ್ರೆಸ್ ಹೈಕಮಾಂಡ್ ಸಚಿವ ಸ್ಥಾನ ನೀಡುವುದಾಗಿ ಭರವಸೆ ನೀಡಿದ್ದರು. ಕೊಟ್ಟ ಮಾತಿನಂತೆ ಎಲ್ಲರೂ ನಡೆದಿದ್ದಾರೆ. ಅರಸೀಕೆರೆ ಕ್ಷೇತ್ರದ 80 ವರ್ಷಗಳ ಸಚಿವ ಗಿರಿ ಕನಸು ನನಸಾಗಿದೆ ಎಂದರು.

ಬರ ಅಧ್ಯಯನ:

ಮಂಗಳವಾರ ಬೆಳಗ್ಗೆ ಕಾರ್ಯಕರ್ತರು ಹಾಗೂ ಮುಖಂಡರನ್ನು ಭೇಟಿ ಮಾಡಿ ಗಂಡಸಿ, ಬಾಣಾವರ, ಕಣಕಟ್ಟೆ ಭಾಗದ ಕೆಲವು ಹಳ್ಳಿಗಳಲ್ಲಿ ಬರ ಅಧ್ಯಯನ ಮಾಡುತ್ತೇನೆ. ಪ್ರಸಕ್ತ ವರ್ಷ ಅರಸೀ ಉತ್ಸವ ನಡೆಸಿ ಕಲೆ,ಸಂಸ್ಕೃತಿ ಅನಾವರಣ ಮಾಡಲಯ ಯತ್ನಿಸುವೆ. ಬಿಡದಿ ಭೂಸ್ವಾಧೀನ ವಿಷಯ ಕುರಿತು ಸದನದಲ್ಲಿ ಚರ್ಚೆ ಮಾಡಲು ಸಿದ್ದನಿದ್ದೇನೆ. ಮಠ, ಮಾನ್ಯಗಳಿಗೆ ತೆರಳಿ ಆಶೀರ್ವಾದ ಪಡೆದು ಜನಪರ ಸೇವೆ ಮಾಡಲಿದ್ದೇನೆ ಎಂದು ಸಚಿವರು ಭರವಸೆ ನೀಡಿದರು.
ಗಂಡಸಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮೆಟ್ರೋ ಬಾಬು, ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಗೀಜಿಹಳ್ಳಿ ಧರ್ಮಶೇಖರ್, ವೆಂಕಟ ಮುನಿ, ಮಂಜುನಾಥ್ , ರಂಗನಾಥ್, ಹರೀಶ್ ಸೇರಿದಂತೆ ಹಲವರು ಹಾಜರಿದ್ದರು. ಕಾರ್ಯಕ್ರಮದ ಬಳಿಕ ಸಚಿವರು ಕೋಡಿಮಠಕ್ಕೆ ತೆರಳಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net