ಮಾನಸಿಕ ಆರೋಗ್ಯ ಅರಿವು ಅಗತ್ಯ

 ಬೇಲೂರಿನ ಶೃಂಗೇರಿ ಮಠದಲ್ಲಿ ಶ್ರೀಶಂಕರ ಮಠ, ತಾಲೂಕು ಬ್ರಾಹ್ಮಣ ಮಹಾಸಭಾ ಹಾಗೂ ಬೆಂಗಳೂರಿನ ನಿಮ್ಹಾನ್ಸ್ ಸಂಸ್ಥೆಯ ನಮನ ಯೋಜನೆಯಡಿ ಬುಧವಾರ ಆಯೋಜಿಸಿದ್ದ ಸಂವೇದನಾಶೀಲತಾ ಪುನಶ್ಚೇತನ ಕಾರ್ಯಾಗಾರವನ್ನು ಗಣ್ಯರು ಉದ್ಘಾಟಿಸಿದರು.  ಸಿ.ಆರ್.ವಿಜಯ್ ಕೇಶವ,  ಡಾ.ರಾಜೀವ್, ಡಾ.ಶ್ರಾವಂತಿ,  ಡಾ.ಜಯಲಕ್ಷ್ಮೀ, ಡಾ.ಮದನ್, ಸಾಗರ್ ಮನೋಜ್,  ಮಂಜುನಾಥ್, ವೇಣುಗೋಪಾಲ್, ನಾಗರಾಜ್, ರಮೇಶ ಆನಂಬಿ, ಕೇಶವ ಹತ್ವಾರ್, ಅನಂತಮೂರ್ತಿ, ಸುದರ್ಶನ್ ಶ್ರೀವಿದ್ಯಾ ಇತರರು ಇದ್ದರು.
ಬೇಲೂರಿನ ಶೃಂಗೇರಿ ಮಠದಲ್ಲಿ ಶ್ರೀಶಂಕರ ಮಠ, ತಾಲೂಕು ಬ್ರಾಹ್ಮಣ ಮಹಾಸಭಾ ಹಾಗೂ ಬೆಂಗಳೂರಿನ ನಿಮ್ಹಾನ್ಸ್ ಸಂಸ್ಥೆಯ ನಮನ ಯೋಜನೆಯಡಿ ಬುಧವಾರ ಆಯೋಜಿಸಿದ್ದ ಸಂವೇದನಾಶೀಲತಾ ಪುನಶ್ಚೇತನ ಕಾರ್ಯಾಗಾರವನ್ನು ಗಣ್ಯರು ಉದ್ಘಾಟಿಸಿದರು. ಸಿ.ಆರ್.ವಿಜಯ್ ಕೇಶವ, ಡಾ.ರಾಜೀವ್, ಡಾ.ಶ್ರಾವಂತಿ, ಡಾ.ಜಯಲಕ್ಷ್ಮೀ, ಡಾ.ಮದನ್, ಸಾಗರ್ ಮನೋಜ್, ಮಂಜುನಾಥ್, ವೇಣುಗೋಪಾಲ್, ನಾಗರಾಜ್, ರಮೇಶ ಆನಂಬಿ, ಕೇಶವ ಹತ್ವಾರ್, ಅನಂತಮೂರ್ತಿ, ಸುದರ್ಶನ್ ಶ್ರೀವಿದ್ಯಾ ಇತರರು ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ತಾಲೂಕು ಬ್ರಾಹ್ಮಣ ಮಹಾಸಭಾ ಅಧ್ಯಕ್ಷ ಸಿ.ಆರ್.ವಿಜಯ್‌ಕೇಶವ ಅಭಿಮತ
  • ಸಂವೇದನಾಶೀಲತಾ ಪುನಶ್ಚೇತನ ಕಾರ್ಯಾಗಾರ
ಬೇಲೂರು: ಇಂದಿನ ಆಧುನಿಕ ಜೀವನಶೈಲಿಯಲ್ಲಿ ಪ್ರತಿಯೊಬ್ಬರಿಗೂ ಮಾನಸಿಕ ಆರೋಗ್ಯದ ಬಗ್ಗೆ ಅರಿವು ಮೂಡಿಸುವುದು ಅತ್ಯಗತ್ಯವಾಗಿದೆ ಎಂದು ತಾಲೂಕು ಬ್ರಾಹ್ಮಣ ಮಹಾಸಭಾ ಅಧ್ಯಕ್ಷರೂ ಆದ ಶೃಂಗೇರಿ ಶಂಕರ ಮಠದ ಧರ್ಮಾಧಿಕಾರಿ ಸಿ.ಆರ್.ವಿಜಯ್ ಕೇಶವ ಹೇಳಿದರು.
ಇಲ್ಲಿನ ಶೃಂಗೇರಿ ಮಠದಲ್ಲಿ ಶ್ರೀಶಂಕರ ಮಠ, ತಾಲೂಕು ಬ್ರಾಹ್ಮಣ ಮಹಾಸಭಾ ಹಾಗೂ ಬೆಂಗಳೂರಿನ ನಿಮ್ಹಾನ್ಸ್ ಸಂಸ್ಥೆಯ ನಮನ ಯೋಜನೆಯಡಿ ಸಂವೇದನಾಶೀಲತಾ ಪುನಶ್ಚೇತನ ಕಾರ್ಯಾಗಾರದಲ್ಲಿ ಮಾತನಾಡಿದರು.
ನಿಮ್ಹಾನ್ಸ್ ಸಂಸ್ಥೆಯ ‘ನಮನ’ ಯೋಜನೆಯಡಿ ಮಾನಸಿಕ ಒತ್ತಡ ನಿರ್ವಹಣಾ ಶಿಬಿರದ ಮೂಲಕ ಜನರಲ್ಲಿ ಜಾಗೃತಿ ಮೂಡಿಸಿ ಚಿಕಿತ್ಸೆಗೆ ಎಚ್ಚರಿಸುತ್ತಿರುವುದು ಶ್ಲಾಘನೀಯವಾದ ಹೆಜ್ಜೆಯಾಗಿದೆ. ಆತ್ಮಹತ್ಯೆ ತಡೆಗಟ್ಟುವಿಕೆ, ಮಾಧ್ಯಮ ಜವಾಬ್ದಾರಿ ಮತ್ತು ನರರೋಗ ತಪಾಸಣಾ ಕಾರ್ಯಾಗಾರಗಳನ್ನು ನಡೆಸುತ್ತಿದ್ದು, ಸಾರ್ವಜನಿಕರು ಇದರ ಸದುಪಯೋಗ ಪಡಿಸಿಕೊಳ್ಳಬೇಕು ಎಂದರು.
ಸರ್ಕಾರಿ ಆಸ್ಪತ್ರೆ ವೈದ್ಯಾಧಿಕಾರಿ ಡಾ.ರಾಜೀವ್ ಮಾತನಾಡಿ, ದೇಹಕ್ಕೆ ಕಾಯಿಲೆ ಉಂಟಾದರೆ ತಕ್ಷಣ ಚಿಕಿತ್ಸೆ ಕೊಡಿಸುತ್ತೇವೆ. ಆದರೆ ಮಾನಸಿಕ ಆರೋಗ್ಯ ಹದಗೆಟ್ಟರೆ ಅದನ್ನು ಕಡೆಗಣಿಸುತ್ತೇವೆ. ಅಲ್ಲದೆ ಮಾನಸಿಕ ವೈದ್ಯರ ಬಳಿ ಹೋದರೆ ಬೇರೆಯವರು ಏನು ತಿಳಿಯುತ್ತಾರೋ ಎಂಬ ಮುಜುಗರ ಬಹಳ ಜನರಲ್ಲಿ ಇದೆ. ಒಬ್ಬ ವ್ಯಕ್ತಿ ಮಾನಸಿಕ ಸ್ತಿಮಿತ ಕಳೆದುಕೊಂಡರೆ ಅದು ಕುಟುಂಬಕ್ಕೆ, ಸಮಾಜಕ್ಕೆ ದೇಶಕ್ಕೂ ಕೆಡುಕು ಉಂಟಾಗುವ ಸಂಭವ ಇದೆ. ಶಿಕ್ಷಣ ಕ್ಷೇತ್ರದಲ್ಲಿ ದಿನದಿಂದ ದಿನಕ್ಕೆ ಸ್ಪರ್ಧೆ ಹೆಚ್ಚಾಗುತ್ತಿದ್ದು ಶಿಕ್ಷಕರು ಹಾಗೂ ಮಕ್ಕಳ ಮೇಲೆ ಮಾನಸಿಕ ಒತ್ತಡ ಹೆಚ್ಚಾಗುತ್ತಿದ್ದು. ಇದಕ್ಕೆ ವೈದ್ಯರಲ್ಲಿ ತಪಾಸಣೆ ಮಾಡಿಸಿಕೊಂಡರೆ ಸುಧಾರಣೆ ಕಾಣಬಹುದು ಎಂದು ಸಲಹೆ ನೀಡಿದರು.
ನಿಮ್ಹಾನ್ಸ್ ಆಸ್ಪತ್ರೆ ಸಂಪನ್ಮೂಲ ವ್ಯಕ್ತಿ ಡಾ.ಶ್ರಾವಂತಿ ಮಾತನಾಡಿ, ನಿತ್ಯ ಜೀವನದ ಮಾನಸಿಕ ಒತ್ತಡಗಳಿಂದ ಸಹಜವಾಗಿ ದೇಹದ ಆರೋಗ್ಯದ ಮೇಲೆ ದುಷ್ಪರಿಣಾಮ ಉಂಟಾಗುತ್ತದೆ. ಇತ್ತೀಚೆಗೆ ಜನರಲ್ಲಿ ಸಂವೇದನಾಶೀಲತೆ ಕಡಿಮೆಯಾಗುತ್ತಿದೆ. ಈ ಒತ್ತಡಗಳನ್ನು ಸಕಾರಾತ್ಮಕ ಚಿಂತನೆಗಳಿಂದ ಶಮನಗೊಳಿಸಿಕೊಂಡು ದೈಹಿಕ ಮತ್ತು ಮಾನಸಿಕ ಆರೋಗ್ಯವನ್ನು ಕಾಪಾಡಿಕೊಳ್ಳಬೇಕೆಂಬುದನ್ನು ಕಾರ್ಯಾಗಾರದಲ್ಲಿ ತಿಳಿಸಿ ಕೊಡಲಾಗುತ್ತದೆ. ವಿದ್ಯಾರ್ಥಿಗಳು, ಪಾಲಕರು, ಶಿಕ್ಷಕರು, ದೇವಾಲಯ ಅರ್ಚಕರಿಗೆ ಸಹಕಾರಿಯಾಗಲೆಂದು ಇಂತಹ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದರು.
ಮಕ್ಕಳ ತಜ್ಞೆ ಡಾ.ಜಯಲಕ್ಷ್ಮೀ, ಡಾ.ಮದನ್, ಸಾಗರ್ ಮನೋಜ್, ಬ್ರಾಹ್ಮಣ ಮಹಾಸಭಾ ಮಾಜಿ ಅಧ್ಯಕ್ಷ ಮಂಜುನಾಥ್, ಮುಖಂಡರಾದ ವೇಣುಗೋಪಾಲ್, ನಾಗರಾಜ್, ರಮೇಶ ಆನಂಬಿ, ಕೇಶವ ಹತ್ವಾರ್, ಅನಂತಮೂರ್ತಿ, ಸುದರ್ಶನ್ ಶ್ರೀವಿದ್ಯಾ ಇತರರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net