ಮಾನಸಿಕ ಆರೋಗ್ಯ ವಿಶೇಷ ಉಪನ್ಯಾಸ

 ವೈಡಿಡಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಆಯೋಜಿಸಿದ್ದ ಮಾನಸಿಕ ಆರೋಗ್ಯ ಉಪನ್ಯಾಸ ಕಾರ್ಯಕ್ರಮವನ್ನು ಗಣ್ಯರು ಉದ್ಘಾಟಿಸಿದರು. ಡಾ.ಕಾರ್ತಿಕ್, ವೀರಭದ್ರಪ್ಪ, ಡಾ.ಎನ್.ಎಂ.ಮಧು ಇತರರಿದ್ದರು.
ವೈಡಿಡಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಆಯೋಜಿಸಿದ್ದ ಮಾನಸಿಕ ಆರೋಗ್ಯ ಉಪನ್ಯಾಸ ಕಾರ್ಯಕ್ರಮವನ್ನು ಗಣ್ಯರು ಉದ್ಘಾಟಿಸಿದರು. ಡಾ.ಕಾರ್ತಿಕ್, ವೀರಭದ್ರಪ್ಪ, ಡಾ.ಎನ್.ಎಂ.ಮಧು ಇತರರಿದ್ದರು.
Published on

ವೈಡಿಡಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಐಕ್ಯು ಎಸಿ, ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮದಡಿ ಪದವಿ ವಿದ್ಯಾರ್ಥಿಗಳಿಗೆ ಹೊಸದಿಗಂತ ಮಾನಸಿಕ ಆರೋಗ್ಯ ವಿಶೇಷ ಉಪನ್ಯಾಸ ಮತ್ತು ವೃತ್ತಿ ನಿರ್ಮಾಣ ಜಾಗೃತಿ ಕಾರ್ಯಕ್ರಮವನ್ನು ಗುರುವಾರ ನಡೆಸಲಾಯಿತು.

ವೈಡಿಡಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಅಭಿವೃದ್ಧಿ ಸಮಿತಿ ಸದಸ್ಯ ಜಗದೀಶ್ ಮಾತನಾಡಿ, ವಿದ್ಯಾರ್ಥಿಗಳಲ್ಲಿ ಅತಿಯಾದ ಪರೀಕ್ಷೆ ಒತ್ತಡ, ಅಂಕಗಳ ಗಳಿಕೆಯ ಸ್ಪರ್ಧೆಯ ಜತೆಗೆ ಭವಿಷ್ಯದ ಅಂತಕ ಕಾಡುತ್ತಿದೆ. ಅಲ್ಲದೆ ಸಾಮಾಜಿಕ ಮಾಧ್ಯಮಗಳ ಪ್ರಭಾವದಿಂದಾಗಿ ಇಂದಿನ ಯುವ ಜನತೆಯಲ್ಲಿ ಖಿನ್ನತೆ ಹಾಗೂ ಮಾನಸಿಕ ಬಳಲಿಕೆ ಹೆಚ್ಚಾಗುತ್ತಿದೆ. ಇದಕ್ಕೆ ಸರಿಯಾದ ಸಮಯದಲ್ಲಿ ಸ್ಪಂದಿಸುವ ಮತ್ತು ಕಾಳಿಜಿ ವಹಿಸುವುದು ಸೂಕ್ತ. ಆದ್ದರಿಂದ ಇಂತಹ ಮಾನಸಿಕ ಜಾಗೃತಿ ಕಾರ್ಯಕ್ರಮಗಳು ವಿದ್ಯಾರ್ಥಿಗಳ ಪಾಲಿಗೆ ಪ್ರೇರಕವಾಗಲಿ ಎಂದು ಹೇಳಿದರು.
ಕಾಲೇಜು ಅಭಿವೃದ್ಧಿ ಸಮಿತಿ ಉಪಾಧ್ಯಕ್ಷ ಹಾಲಪ್ಪ ಮಾತನಾಡಿ, ವ್ಯಕ್ತಿಯು ತನ್ನ ಭಾವನೆ ಹಾಗೂ ಒತ್ತಡಗಳನ್ನು ಆತ್ಮವಿಶ್ವಾಸದಿಂದ ಎದುರಿಸಬೇಕು. ಉತ್ತಮ ಸಂಬಂಧ ಮತ್ತು ದೈನಂದಿನ ಜವಾಬ್ದಾರಿಗಳನ್ನು ವಿದ್ಯಾರ್ಥಿಗಳು ಸಮರ್ಥವಾಗಿ ನಿರ್ವಹಿಸಿದರೆ ಮಾನಸಿಕ ಆರೋಗ್ಯವನ್ನು ಕಾಪಾಡಲು ಸಾಧ್ಯ. ಅತಿಯಾದ ದು:ಖ, ಆತಂಕದ ಸಂದರ್ಭ ಸ್ನೇಹಿತರು ಸಂಬಂಧಿಕರೊಂದಿಗೆ ಬೆರೆತು, ತಮ್ಮ ಕೆಲಸ ಕಾರ್ಯಗಳಲ್ಲಿ ಆಸಕ್ತಿ ವಹಿಸಿದರೆ ಮತ್ತೆ ಮಾನಸಿಕವಾಗಿ ಸದೃಢವಾಗಿರಬಹುದು ಎಂದರು.
ವೈಡಿಡಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಪ್ರಾಂಶುಪಾಲ ಡಾ.ಕೆ.ಟಿ.ನಾಗೇಂದ್ರಪ್ಪ ಮಾತನಾಡಿದರು.
ಜಿಲ್ಲಾ ಮಾನಸಿಕ ಆರೋಗ್ಯ ತಜ್ಞ ಡಾ.ಕಾರ್ತಿಕ್, ಮಾನಸಿಕ ಆರೋಗ್ಯದ ಬಗ್ಗೆ ಉಪನ್ಯಾಸ ನೀಡಿದರು.
ಸಮಾಜಶಾಸ್ತ್ರ ವಿಭಾಗದ ಮುಖ್ಯಸ್ಥ ವೀರಭದ್ರಪ್ಪ, ಅರ್ಥಶಾಸ್ತ್ರದ ಪ್ರಾಧ್ಯಾಪಕ ಡಾ.ಎನ್.ಎಂ.ಮಧು, ಉಪನ್ಯಾಸಕ ವಸಂತಕುಮಾರ್ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net