ತಾಲೂಕು ಕಚೇರಿಯಲ್ಲಿ ಸೋಮವಾರ ಸಂಜೆ ಆಯೋಜಿಸಿದ್ದ ವಿವಿಧ ರಾಜಕೀಯ ಪಕ್ಷಗಳ ಮುಖಂಡರ ಎಸ್‌ಐಆರ್ ಸಭೆಯಲ್ಲಿ ಮಾತನಾಡಿದ ಅವರು, ಪ್ರತಿವಾರ ಸಭೆ ನಡೆಸಿ ಎಸ್‌ಐಆರ್ ಪ್ರಗತಿ ಪರಿಶೀಲಿಸಲಾಗುತ್ತಿದೆ. ಕರಡು ಮತದಾರರ ಪಟ್ಟಿಗೆ ಸಂಬಂಧಿಸಿದ ಅರ್ಜಿ ಹಾಗೂ ಆಕ್ಷೇಪಣೆಗಳ ವಿಚಾರಣೆ ನಡೆಯುತ್ತಿದೆ. ಕ್ಷೇತ್ರದಲ್ಲಿ ಇಲ್ಲಿವರೆಗೆ 7,518 ಜನರಿಗೆ ನೋಟಿಸ್ ಸಿದ್ಧಪಡಿಸಿದ್ದು, 6,537 ನೋಟಿಸ್ ವಿತರಿಸಲಾಗಿದೆ. ಇನ್ನೂ 981 ನೋಟಿಸ್‌ಗಳ ವಿತರಣೆ ಬಾಕಿಯಿದೆ. ಶೀಘ್ರದಲ್ಲೇ ವಿತರಿಸಿ ಎಐಆರ್ ಪ್ರಕ್ರಿಯೆ ಸಂಬಂಧ ಮತದಾರರ ಪಟ್ಟಿಯಲ್ಲಿ ಹೆಸರು ಬಿಟ್ಟು ಹೋಗದಂತೆ ಕ್ರಮ ಕೈಗೊಳ್ಳಲಾಗುವುದು ಎಂದರು.