ಪಡಿತರ ವಿತರಣಾ ಉಪ ಕೇಂದ್ರ ಸದುಪಯೋಗವಾಗಲಿ

ಬೇಲೂರಿನ ಚನ್ನಕೇಶವ ನಗರದಲ್ಲಿ ಶಾಸಕ ಎಚ್.ಕೆ.ಸುರೇಶ್ ಪಡಿತರ ವಿತರಿಸಿದರು.
ಬೇಲೂರಿನ ಚನ್ನಕೇಶವ ನಗರದಲ್ಲಿ ಶಾಸಕ ಎಚ್.ಕೆ.ಸುರೇಶ್ ಪಡಿತರ ವಿತರಿಸಿದರು.
Published on

ಪ್ರಮುಖ ಮುಖ್ಯಾಂಶಗಳು

  • ಶಾಸಕ ಎಚ್.ಕೆ.ಸುರೇಶ್ ಆಶಯ
ಬೇಲೂರು : ಪಟ್ಟಣದ ಚನ್ನಕೇಶವ ನಗರ ನಿವಾಸಿಗಳ ಅನುಕೂಲಕ್ಕಾಗಿ ಪಡಿತರ ವಿತರಣಾ ಉಪ ಕೇಂದ್ರವನ್ನು ಇಲ್ಲಿಯೇ ಅಧಿಕೃತವಾಗಿ ಪ್ರಾರಂಭಿಸುವ ಮೂಲಕ ಮನೆ ಬಾಗಿಲಿಗೆ ಅಕ್ಕಿ ತಲುಪಿಸುವುದಕ್ಕೆ ಕ್ರಮ ಕೈಗೊಳ್ಳಲಾಗಿದ್ದು, ಇಲ್ಲಿನ ನಾಗರಿಕರು ಇದರ ಸದುಪಯೋಗ ಪಡೆಯಬೇಕು ಎಂದು ಶಾಸಕ ಎಚ್.ಕೆ.ಸುರೇಶ್ ಹೇಳಿದರು.
ಪುರಸಭೆ ವ್ಯಾಪ್ತಿಯ 8ನೇ ವಾರ್ಡ್‌ನ ಚನ್ನಕೇಶವ ನಗರದಲ್ಲಿ ಪಡಿತರ ವಿತರಣಾ ಉಪ ಕೇಂದ್ರಕ್ಕೆ ಶನಿವಾರ ಚಾಲನೆ ನೀಡಿ ಮಾತನಾಡಿದ ಅವರು, ಚನ್ನಕೇಶವ ನಗರದಲ್ಲಿ ಬಹುತೇಕರು ಕೂಲಿ ಕೆಲಸಕ್ಕೆ ಹೋಗುತ್ತಾರೆ. ಇದರಿಂದ ಪಡಿತರ ತರಲು ಒಂದು ದಿನ ರಜೆ ತೆಗೆದುಕೊಳ್ಳಬೇಕಾಗುತ್ತಿತ್ತು. ಇದರಿಂದ ಒಂದು ದಿನದ ಕೂಲಿಯೊಂದಿಗೆ ಆಟೋಗೆ ಹೆಚ್ಚಿನ ಬಾಡಿಗೆ ಕೊಡಬೇಕಿತ್ತು. ಈ ಬಗ್ಗೆ ಸ್ಥಳೀಯರು ನನ್ನ ಗಮನಕ್ಕೆ ತಂದ ಹಿನ್ನೆಲೆಯಲ್ಲಿ ಚನ್ನಕೇಶವ ನಗರದಲ್ಲಿ ಪಡಿತರ ವಿತರಣೆಗೆ ಅನುಕೂಲವಾಲಿ ಎಂದು ಬಿದಿರು ಕೆಲಸಗಾರರ ಸಹಕಾರ ಸಂಘದ ಅಧ್ಯಕ್ಷರ ನೇತೃತ್ವದಲ್ಲಿ ಉಪ ಕೇಂದ್ರ ತೆರೆಯಲಾಗಿದೆ ಎಂದರು.
ಚನ್ನಕೇಶವನಗರ ಮೂಲಸೌಕರ್ಯದಿಂದ ವಂಚಿತವಾಗಿದ್ದು, ರಸ್ತೆ ಚರಂಡಿ, ಬೀದಿ ದೀಪ ಹಾಕಿಸಲು ಕ್ರಮ ಕೈಗೊಳ್ಳಲಾಗುವುದು. ಇಲ್ಲಿನ ನಿವಾಸಿಗಳಿಗೆ ಹಕ್ಕು ಪತ್ರ ಕೊಡಿಸವ ಕೆಲಸ ಈಗಾಗಲೇ ಶೇ.90ರಷ್ಟು ಕೆಲಸ ಮುಗಿದಿದ್ದು, ಕೆಲವೇ ದಿನಗಳಲ್ಲಿ ಕೊಡಲಾಗುವುದು. ರಸ್ತೆ ಸಂಪೂರ್ನವಾಗಿ ಹದಗೆಟ್ಟಿದ್ದು, 15 ಲಕ್ಷ ರೂ. ವೆಚ್ಚದ ಕಾಮಗಾರಿಗೆ ಅನುಮೋದನೆ ದೊರೆತಿದೆ. ಕೆಲವೇ ದಿನಗಳಲ್ಲಿ ಕಾಮಗಾರಿ ಮಾಡಿಸಲಾಗುವುದು ಎಂದರು.
ಪುರಸಭೆ ಸದಸ್ಯ ಬಿ.ಸಿ.ಜಗದೀಶ್ ಮಾತನಾಡಿ, ಶಾಸಕರು ನೀಡಿದ ಭರವಸೆ ಇಲ್ಲಿಯೇ ಅಕ್ಕಿ ವಿತರಣೆ ಆರಂಭಿಸಿರುವುದು ಶ್ಲಾಘನೀಯ. ಜತೆಗೆ ಇಲ್ಲಿನ ನಿವಾಸಿಗಳಿಗೆ ಶೀಘ್ರದಲ್ಲೆ ಹಕ್ಕುಪತ್ರ ನೀಡಲಿದ್ದಾರೆ ಎಂದರು.
ಸ್ಥಳೀಯ ಮುಖಂಡ ಎಂ.ಜಿ.ನಿಂಗರಾಜ್ ಮಾತನಾಡಿದರು. ಬಿದಿರು ಸಹಕಾರ ಸಂಘದ ಅಧ್ಯಕ್ಷ ಕೇಬಲ್ ವಿಜಯ ಕುಮಾರ್, ಆಹಾರ ಇಲಾಖೆಯ ಶಿರಸ್ತೇದಾರರಾದ ವೀಣಾ, ಗೀತಾಂಜಲಿ, ಪುರುಷೋತ್ತಮ್, ಮುಖಂಡರಾದ ವೀರಭದ್ರಪ್ಪ, ಅರುಣ್ ಕುಮಾರ್, ರಮೇಶ್, ಪುರುಷೋತ್ತಮ್, ಮಹೇಶ್, ವೇಲು ಸೇರಿದಂತೆ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net