ರನ್ ಇಂಗ್ಲಿಷ್ ಶಾಲೆಯಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಕಾರ್ಗಿಲ್ ಉತ್ಸವದಲ್ಲಿ ಭಾಗಿಯಾಗಿದ್ದ ಮಾಜಿ ಸೈನಿಕರಾದ ನಾಗಭೂಷಣ ಆಚಾರ್, ವೆಂಕಟೇಶ್ ಮಾತನಾಡಿದರು. ವಿಜಯಕುಮಾರ್, ರವಿಕುಮಾರ್, ಸತೀಶ್ ಇತರರು ಇದ್ದರು.
Published on:
Copied
Follow Us
ಪ್ರಮುಖ ಮುಖ್ಯಾಂಶಗಳು
patriotism grow
ಅರಸೀಕೆರೆ ಗ್ರಾಮಾಂತರ: ಇಂದಿನ ಮಕ್ಕಳು ದೇಶಪ್ರೇಮ, ನಾಡು, ನುಡಿಯ ಬಗ್ಗೆ ಸದಾ ಅಭಿಮಾನ ಇಟ್ಟುಕೊಳ್ಳಬೇಕು ಎಂದು ಮಾಜಿ ಸೈನಿಕ ವೆಂಕಟೇಶ್ ತಿಳಿಸಿದರು.
ಕಾರ್ಗಿಲ್ ವಿಜಯದಿವಸ್ ಅಂಗವಾಗಿ ಇಲ್ಲಿನ ರನ್ ಇಂಗ್ಲಿಷ್ ಶಾಲೆಯಲ್ಲಿ ಶನಿವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ಕಾರ್ಗಿಲ್ ಯುದ್ಧದಲ್ಲಿ ನಾವು ಭಾಗಿಯಾಗಿ ದೇಶಕ್ಕಾಗಿ ಹೋರಾಟ ಮಾಡಿದ ಅನುಭವ ಅವಿಸ್ಮರಣೀಯವಾದದ್ದು. ನಮ್ಮ ಸಹೋದ್ಯೋಗಿ ಮಿತ್ರರು ಹುತಾತ್ಮರಾಗಿರುವುದನ್ನು ನಾವೆಲ್ಲರೂ ಸ್ಮರಿಸಬೇಕು ಎಂದು ತಿಳಿಸಿದರು.
ಮತ್ತೊಬ್ಬ ಮಾಜಿ ಸೈನಿಕರಾದ ನಾಗಭೂಷಣ ಆಚಾರ್ ತಮ್ಮ ಅನುಭವ ಹಂಚಿಕೊಂಡರು. ಶಾಲಾ ವ್ಯವಸ್ಥಾಪಕ ವಿಜಯ್ ಕುಮಾರ್, ಮುಖ್ಯೋಪಾಧ್ಯಾಯ ರವಿಕುಮಾರ್, ದೈಹಿಕ ಶಿಕ್ಷಣ ಶಿಕ್ಷಕ ಸತೀಶ್ ಇತರರು ಹಾಜರಿದ್ದರು.