ನ್ಯಾಯ ದೊರಕಿಸಲು ವಕೀಲರು ಸದಾ ಪ್ರಯತ್ನಿಸಲಿ

ಆಲೂರಿನಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಹಿರಿಯ ವಕೀಲರಾದ ಮಹೇಂದ್ರ, ಕೆ.ಕೆ.ಮಂಜೇಗೌಡ, ಕೆ.ನಾಗರಾಜು, ಆರ್. ಧನಂಜಯ್, ಕೆ.ಎಸ್.ರವಿಶಂಕರ್ ಅವರನ್ನು ಸನ್ಮಾನಿಸಲಾಯಿತು. ನ್ಯಾಯಾಧೀಶೆ ಎಂ.ಸ್ನೇಹಾ, ಸಂಘದ ಅಧ್ಯಕ್ಷ ಎಂ.ಎಸ್.ಮಹೇಶ್,  ಉಪಾಧ್ಯಕ್ಷ ಶಂಕರ್ ಇತರರು ಇದ್ದರು.
ಆಲೂರಿನಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಹಿರಿಯ ವಕೀಲರಾದ ಮಹೇಂದ್ರ, ಕೆ.ಕೆ.ಮಂಜೇಗೌಡ, ಕೆ.ನಾಗರಾಜು, ಆರ್. ಧನಂಜಯ್, ಕೆ.ಎಸ್.ರವಿಶಂಕರ್ ಅವರನ್ನು ಸನ್ಮಾನಿಸಲಾಯಿತು. ನ್ಯಾಯಾಧೀಶೆ ಎಂ.ಸ್ನೇಹಾ, ಸಂಘದ ಅಧ್ಯಕ್ಷ ಎಂ.ಎಸ್.ಮಹೇಶ್, ಉಪಾಧ್ಯಕ್ಷ ಶಂಕರ್ ಇತರರು ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಆಲೂರು ಜೆಎಂಎಫ್‌ಸಿ ನ್ಯಾಯಾಲಯದ ನ್ಯಾಯಾಧೀಶೆ ಎಂ.ಸ್ನೇಹಾ ಸಲಹೆ
ಆಲೂರು: ಸಮಾಜದಲ್ಲಿ ಅನ್ಯಾಯಕ್ಕೊಳಗಾದವರಿಗೆ ನ್ಯಾಯ ದೊರಕಿಸಲು ವಕೀಲರು ಸದಾ ಪ್ರಯತ್ನಿಸಬೇಕು ಎಂದು ಆಲೂರು ಜೆಎಂಎಫ್‌ಸಿ ನ್ಯಾಯಾಲಯದ ನ್ಯಾಯಾಧೀಶೆ ಎಂ.ಸ್ನೇಹಾ ಸಲಹೆ ನೀಡಿದರು.
ಪಟ್ಟಣದ ನ್ಯಾಯಾಲಯ ಆವರಣದಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಹಾಗೂ ತಾಲೂಕು ವಕೀಲ ಸಂಘದ ಸಹಯೋಗದಲ್ಲಿ ಬುಧವಾರ ಆಯೋಜಿಸಿದ್ದ ವಕೀಲರ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ದೇಶದ ನ್ಯಾಯಾಂಗ ವ್ಯವಸ್ಥೆಯಲ್ಲಿ ಹಲವಾರು ಪ್ರಕರಣಗಳು ವಿಲೇವಾರಿಯಾಗುತ್ತವೆ. ನಿತ್ಯ ಹಲವು ಪ್ರಕರಣಗಳ ವಿಚಾರಣೆ ನಡೆಸಲಾಗುತ್ತದೆ. ಹಾಗಾಗಿ ಸಮಾಜದಲ್ಲಿ ಅನ್ಯಾಯಕ್ಕೊಳಗಾದವರಿಗೆ ನ್ಯಾಯ ದೊರಕಿಸಲು ವಕೀಲರು ಸದಾ ಪ್ರಯತ್ನಿಸಬೇಕು. ಅದರಲ್ಲಿಯೇ ಸಂತೃಪ್ತಿ ಭಾವನೆ ಹೊಂದಬೇಕು ಎಂದು ಹೇಳಿದರು.
ವಕೀಲರ ಮೇಲೆ ಜವಾಬ್ದಾರಿ ಹೆಚ್ಚಿದೆ. ಹಾಗಾಗಿ ಪ್ರಾಮಾಣಿಕವಾಗಿ ನಿಭಾಯಿಸಿ, ಉನ್ನತ ಸ್ಥಾನ ಪಡೆಯಬೇಕು ಎಂದು ಸಲಹೆ ನೀಡಿದರು.
ತಾಲೂಕು ವಕೀಲರ ಸಂಘದ ಅಧ್ಯಕ್ಷ ಎಂ.ಎಸ್.ಮಹೇಶ್ ಮಾತನಾಡಿ, ದೇಶದ ಇತಿಹಾಸದಲ್ಲಿ ವಕೀಲರ ಸೇವೆ ಸದಾ ಸ್ಮರಣೀಯವಾಗಿದ್ದು, ಸ್ವಾತಂತ್ರ್ಯ ಹೋರಾಟದಲ್ಲಿಯೂ ವಕೀಲರು ಮುಂಚೂಣಿಯಲ್ಲಿದ್ದದ್ದು ಗಮನಾರ್ಹ. ವಕೀಲ ವೃತ್ತಿಯ ಘನತೆ ಸದಾ ಎತ್ತರದಲ್ಲಿರುವಂತೆ ಪ್ರತಿಯೊಬ್ಬ ವಕೀಲನೂ ಗಮನಹರಿಸಬೇಕು ಎಂದು ತಿಳಿಸಿದರು.
ಗ್ರಾಮಾಂತರದ ನ್ಯಾಯಾಲಯಗಳು ಒಳಗೊಂಡಂತೆ ಸರ್ವೋಚ್ಚ ನ್ಯಾಯಾಲಯದವರೆಗೂ ವಕೀಲರ ಪಾಂಡಿತ್ಯ ಸಮಾನವಾಗಿರುತ್ತದೆ. ಇದರಿಂದಾಗಿಯೇ ಇಂದಿಗೂ ವಕೀಲ ವೃತ್ತಿ ತನ್ನ ನಂಬಿಕೆಯನ್ನು ದೇಶದಲ್ಲಿ ಉಳಿಸಿಕೊಂಡಿದೆ ಎಂದು ಅಭಿಪ್ರಾಯಪಟ್ಟರು.
30 ವರ್ಷಗಳಿಂದ ವಕೀಲರಾಗಿರುವ ಮಹೇಂದ್ರ, ಕೆ.ಕೆ ಮಂಜೇಗೌಡ, ಕೆ.ನಾಗರಾಜು, ಆರ್ ಧನಂಜಯ್, ಕೆ.ಎಸ್.ರವಿಶಂಕರ್ ಅವರನ್ನು ಸನ್ಮಾನಿಸಲಾಯಿತು.
ವಕೀಲರ ಸಂಘದ ಉಪಾಧ್ಯಕ್ಷ ಟಿ.ಎಸ್.ಶಂಕರ್, ಕಾರ್ಯದರ್ಶಿ ಆರ್.ಬಿ.ಸುರೇಶ್, ಜಂಟಿ ಕಾರ್ಯದರ್ಶಿ ಕವಿತಾ, ಸರ್ಕಾರಿ ಸಹಾಯಕ ಅಭಿಯೋಜಕ ವಿಜಯ ಸಂಪಂಗಾವಿ, ವಕೀಲರಾದ ಕೆ.ಜಿ.ನಾಗರಾಜ್, ಬಿ.ಡಿ.ಸಂದೀಪ್, ಬಿ.ಮಂಜೇಗೌಡ, ಎಚ್.ಡಿ.ಮಧು, ಉಮೇಶ್, ಎಂ.ಎಂ.ಸುನೀಲ್, ಪ್ರೀತಂ ಇತರರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net