ಮೆಕ್ಕೆಜೋಳದ ಬೆಳೆ ಪರೀಕ್ಷಿ ದಕೃಷಿ ಅಧಿಕಾರಿ

ಅರಕಲಗೂಡು ತಾಲೂಕಿನ ಮಧುರನಹಳ್ಳಿ ಗ್ರಾಮದ ಜಮೀನುಗಳಿಗೆ  ತಾಲೂಕು ಸಹಾಯಕ ಕೃಷಿ ನಿರ್ದೇಶಕಿ ಕೆ.ಜೆ. ಕವಿತಾ ಭೇಟಿ ನೀಡಿ ಮುಸುಕಿನ ಜೋಳದ ಬೆಳೆಗೆ ಕಾಣಿಸಿಕೊಂಡಿರುವ ಬಿಳಿಸುಳಿ ರೋಗದ ಪರಿಶೀಲಿಸಿದರು. ಫರೀನಾ, ಲಕ್ಷ್ಮೀ ಇದ್ದರು.
ಅರಕಲಗೂಡು ತಾಲೂಕಿನ ಮಧುರನಹಳ್ಳಿ ಗ್ರಾಮದ ಜಮೀನುಗಳಿಗೆ ತಾಲೂಕು ಸಹಾಯಕ ಕೃಷಿ ನಿರ್ದೇಶಕಿ ಕೆ.ಜೆ. ಕವಿತಾ ಭೇಟಿ ನೀಡಿ ಮುಸುಕಿನ ಜೋಳದ ಬೆಳೆಗೆ ಕಾಣಿಸಿಕೊಂಡಿರುವ ಬಿಳಿಸುಳಿ ರೋಗದ ಪರಿಶೀಲಿಸಿದರು. ಫರೀನಾ, ಲಕ್ಷ್ಮೀ ಇದ್ದರು.
Published on
ಅರಕಲಗೂಡು: ಮುಸುಕಿನ ಜೋಳದ ಬೆಳೆಗೆ ಕಾಣಿಸಿಕೊಂಡಿರುವ ಬಿಳಿಸುಳಿ ರೋಗಬಾಧೆ ಹತೋಟಿಗೆ ನಿರ್ವಹಣಾ ಕ್ರಮಗಳನ್ನು ಅನುರಿಸಿ ಇಳುವರಿ ಕುಂಠಿತಗೊಳ್ಳದಂತೆ ನಿಗಾ ವಹಿಸಬೇಕು ಎಂದು ತಾಲೂಕು ಸಹಾಯಕ ಕೃಷಿ ನಿರ್ದೇಶಕಿ ಕೆ.ಜೆ.ಕವಿತಾ ಸಲಹೆ ನೀಡಿದರು.
ತಾಲೂಕಿನ ಮಧುರನಹಳ್ಳಿ ಗ್ರಾಮದ ರೈತರ ಬೆಳೆ ತಾಕಿಗೆ ಇತ್ತೀಚೆಗೆ ಕೃಷಿ ತಾಂತ್ರಿಕ ವ್ಯವಸ್ಥಾಪಕರೊಂದಿಗೆ ಭೇಟಿ ನೀಡಿ, ಬೆಳೆ ಪರಿಶೀಲಿಸಿ ಮಾತನಾಡಿದರು.
ಪ್ರಸಕ್ತ ಮುಂಗಾರು ಹಂಗಾಮಿನಲ್ಲಿ ಪ್ರಮುಖ ಬೆಳೆಯಾದ ಮುಸುಕಿನ ಜೋಳಕ್ಕೆ ಬಿಳಿಸುಳಿ ರೋಗ ಕಂಡುಬಂದಿದೆ. ಹೀಗಾಗಿ ಕಸಬಾ ಹೋಬಳಿಯ ನೆಲಮನೆ- ಹೆತ್ತಗೌಡನಹಳ್ಳಿ, ಕೊಣನೂರು ಹೋಬಳಿ ಸೇರಿದಂತೆ ವಿವಿಧ ಭಾಗದಲ್ಲಿ ರೈತರ ಬೆಳೆ ತಾಕಿಗೆ ಭೇಟಿ ನೀಡಿ ಪರಿಶೀಲಿಸಲಾಗಿದೆ. ಮುಸುಕಿನ ಜೋಳಕ್ಕೆ ಶಿಲೀಂದ್ರದಿಂದ ಬರುವ ರೋಗವಾಗಿದ್ದು, ಇದು ಗಾಳಿ ಮತ್ತು ಮಣ್ಣಿನ ಮೂಲಕ ಹರಡುತ್ತದೆ. ರೋಗಭಾದಿತ ಗಿಡಗಳ ಎಲೆಗಳ ಮೇಲೆ ಹಳದಿ ಬಣ್ಣದ ಪಟ್ಟಿ ಕಾಣಿಸಿಕೊಳ್ಳುತ್ತದೆ. ಎಲೆಗಳ ಕೆಳಭಾಗದಲ್ಲಿ ಬಿಳಿ ಬೂಸ್ಟ್ ಬೆಳೆದಿರುತ್ತದೆ. ಇದರಿಂದ ಗಿಡಗಳ ಬೆಳೆವಣಿಗೆ ಕುಂಠಿತಗೊಂಡು ಕಾಳುಕಟ್ಟದೆ ಇಳುವರಿಯಲ್ಲಿ ನಷ್ಟವಾಗಲಿದೆ. ಹೀಗಾಗಿ ಪ್ರಾರಂಭಿಕ ಹಂತದಲ್ಲಿ ಸಸ್ಯ ಸಂರಕ್ಷಣೆ ಕೈಗೊಂಡು ಹತೋಟಿ ಮಾಡಬೇಕು ಎಂದು ತಿಳಿಸಿದರು.
ರಾಮನಾಥಪುರ ರೈತ ಸಂಪರ್ಕ ಕೇಂದ್ರ ಅಧಿಕಾರಿ, ಫರೀನಾ, ಸಹಾಯಕ ತಾಂತ್ರಿಕ ವ್ಯವಸ್ಥಾಪಕಿ ಲಕ್ಷ್ಮೀ, ರೈತರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net