ಅರಕಲಗೂಡು: ಅಹಿಂಸಾ ಧರ್ಮ ಬೋಧಿಸಿದ ಮಹಾವೀರರ ತತ್ವಗಳನ್ನು ಇಡೀ ಜಗತ್ತು ಅಳವಡಿಸಿಕೊಂಡರೆ ಶಾಂತಿ ಸ್ಥಾಪನೆ ಸಾಧ್ಯ ಎಂದು ತಹಸೀಲ್ದಾರ್ ಕೆ.ಸಿ.ಸೌಮ್ಯಾ ಹೇಳಿದರು.
ಪಟ್ಟಣದ ತಾಲೂಕು ಕಚೇರಿ ಸಭಾಂಗಣದಲ್ಲಿ ಸೋಮವಾರ ಏರ್ಪಡಿಸಿದ್ದ ವರ್ಧಮಾನ ಮಹಾವೀರ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಜಗತ್ತಿನಲ್ಲಿ ಈಗ ಮೂರನೇ ಮಹಾಯುದ್ಧ ಆಗುವ ಸಾಧ್ಯತೆಗಳು ಹೆಚ್ಚಿವೆ. ಯಾರೊಬ್ಬರಿಗೂ ದೈಹಿಕ ಹಾಗೂ ಮಾನಸಿಕವಾಗಿ ಹಿಂಸೆ ನೀಡದೆ ಅಹಿಂಸೆ ಪರಿಪಾಲನೆ ಮಾಡುವುದೇ ಮಹಾವೀರರ ದಿವ್ಯ ಸಂದೇಶವಾಗಿದ್ದು ಇದನ್ನು ಪಾಲಿಸುವುದು ಮುಖ್ಯವಾಗಿದೆ ಎಂದರು.