

ಪ್ರಮುಖ ಮುಖ್ಯಾಂಶಗಳು
ಹೊಳೆನರಸೀಪುರ:
ರಾಜ್ಯ ಸರ್ಕಾರದ ಪ್ರಬಲ ವ್ಯಕ್ತಿಗಳು ನೈಸ್ ಕಂಪನಿ ಜತೆ ಶಾಮೀಲಾಗಿ ಅಧಿಕಾರ ದುರ್ಬಳಕೆ ಮಾಡಿಕೊಂಡು ಲೂಟಿ ಮಾಡಿದ್ದಾರೆ ಎಂದು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಆರೋಪಿಸಿದರು.
ಸರ್ಕಾರ ಜನರಿಗೆ ಏನು ಮಾಹಿತಿ ಕೊಡುತ್ತಾರೆ ಕೊಡಲಿ, ಇನ್ನೂ ಹತ್ತು ಪೇಜ್ ಜಾಹೀರಾತು ಕೊಡಲಿ. ಆದರೆ, ರೈತರು ನಾವು ಭೂಮಿ ಕೊಡಲ್ಲ ಅಂತಾರೆ. ಯಾಕೆ ದಬ್ಬಾಳಿಕೆ ಮಾಡಿ,ರೌಡಿಗಳನ್ನು ಬಿಟ್ಟು ಹೆದರಿಸುತ್ತಿದ್ದಾರೆ.
ಕಾಗೋಡು ತಿಮ್ಮಪ್ಪ ಸಮಿತಿಯಲ್ಲಿ ಸಿಎಂ ಡಿ.ಕೆ.ಶಿವಕುಮಾರ್ ಸದಸ್ಯರಾಗಿದ್ದರು. ಆ ಸಮಿತಿ ರಿಪೋರ್ಟ್ ಕೊಟ್ಟಿದ್ದು, ಯಾವುದೇ ಕಾರಣಕ್ಕೂ ಟೌನ್‌ಶಿಪ್ ಬರಕೂಡದು ಎಂದು ಶಿಫಾರಸು ಮಾಡಿದ್ದು, ಆ ಬಗ್ಗೆಯೂ ಜಾಹೀರಾತು ಕೊಡಿ, ಸ್ವಲ್ಪ ನಮ್ಮ ಖರ್ಚು ಉಳಿಸಿ ಎಂದು ಎಚ್‌ಡಿಕೆ ಮಾತಿನಲ್ಲೇ ತಿವಿದರು.
ಹನೂರಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳ ಶೂಟ್ ಔಟ್ ವಿಚಾರದಲ್ಲಿ ಸರ್ಕಾರ ಬುಲೆಟಿನ್ ಬಿಟ್ಟಿದೆ. ರೈತ ಕುಟುಂಬದ ಮೂವರ ಸಾವು ಆಗಿರೋದು ದುರದೃಷ್ಟಕರ ಎಂದ ಕುಮಾರಸ್ವಾಮಿ, ಸರ್ಕಾರ ಅವರ ಬದುಕಿಗೆ ದಾರಿ ಮಾಡಿದಾಗ ಇಂತಹ ಘಟನೆಗಳು ಆಗಲ್ಲ. ಮೊನ್ನೆ ಜಿಂಕೆ ಬೇಟೆಗೆ ಹೋಗಿದ್ದರು ಎಂದು ಸರ್ಕಾರ ಮಾಹಿತಿ ಕೊಟ್ಟಿದೆ. ಸಿಎಂ ತನಿಖೆ ಮಾಡಿಸುವುದಾಗಿ ಹೇಳಿದ್ದಾರೆ. ಪ್ರಶ್ನೆ ಇರೋದು, ನಮ್ಮ ಅರಣ್ಯ ಇಲಾಖೆ ಅಧಿಕಾರಿಗಳು ಗುಂಡು ಹಾರಿಸಿದರೂ ಸಾಯುವಂತೆ ಪ್ರಹಾರ ಮಾಡಿರೋದು ತಪ್ಪು. ಕಾಲಿಗೋ ಅಥವಾ ಜೀವಕ್ಕೆ ಅಪಾಯ ಆಗದಂತೆ ಗುಂಡು ಹಾರಿಸಿದ್ದರೆ ಒಪ್ಪುತ್ತಿದ್ದೆವು. ಆದರೆ ಸ್ಥಳದಲ್ಲೇ ಸಾಯುವಂತೆ ತಲೆ-ಎದೆಗೆ ಗುಂಡು ಹಾರಿಸಿ ಸಾಯಿಸಿರೋದು ಸರಿಯಲ್ಲ ಎಂದರು.
ಸರ್ಕಾರಿ ಕಾರ್ಯಕ್ರಮದಲ್ಲಿ ವಂದೇ ಮಾತರಂ ಗೌರವಿಸಲು ಕೇಂದ್ರದಿಂದ ಕಾನೂನು ಆಗಿದೆ. ಕಾಂಗ್ರೆಸ್ ನಾಯಕರು ಇದರಲ್ಲಿ ಸಣ್ಣತನ ತೋರಿಸುವ ಅಗತ್ಯ ಇಲ್ಲ. ಮಹಾತ್ಮಗಾಂಧಿ ಭಾಗಿಯಾಗಿದ್ದ ಕಾಂಗ್ರೆಸ್ ಕಾರ್ಯಕ್ರಮದಲ್ಲಿ ಮೊದಲ ಬಾರಿಗೆ ಸಾರ್ವಜನಿಕವಾಗಿ ವಂದೇ ಮಾತರಂ ಹಾಕಲಾಗಿತ್ತು. ಆದರೆ, ಈಗ ಸಣ್ಣತನ ಪ್ರದರ್ಶಿಸಿ ದೊಡ್ಡಮಟ್ಟದಲ್ಲಿ ಭವಿಷ್ಯ ಹಾಳು ಮಾಡಿಕೊಳ್ಳಬೇಡಿ. ಸೋನಿಯಾಗಾಂಧಿ ಅವರಿಂದ ಏನು ನಿರೀಕ್ಷೆ ಮಾಡಲು ಸಾಧ್ಯ, ಸೋನಿಯಾಗಾಂಧಿ ಏನು ನಮ್ಮ ದೇಶದವರಾ, ಅವರು ಮದುವೆಯಾಗಿ ಬಂದ್ರು. ಆದರೆ ಅವರ ರಕ್ತ ಹೆಚ್ಚು ಕಡಿಮೆ ಇಟಲಿ ರಕ್ತವೇ ಅಲ್ಲವೇಎಂದು ಕುಮಾರಸ್ವಾಮಿ ಛೇಡಿಸಿದರು.
ಸ್ವಾತಂತ್ರ್ಯೋತ್ಸವದಂದು ಒಟ್ಟು 35 ಲಕ್ಷ ರೂ. ಮೌಲ್ಯದ ವಾಚ್‌ಗಳು ಒಂದೇ ದಿನ ಮಾರಾಟವಾಗಿವೆ. ಎಚ್‌ಎಂಟಿ ಬಗ್ಗೆ ಜನರಲ್ಲಿ ಗೌರವ ಇದೆ. ಎರಡು ಕಿಲೋಮೀಟರ್ ಸಾಲಿನಲ್ಲಿ ನಿಂತು ವಾಚ್ ಖರೀದಿ ಮಾಡಿದ್ದಾರೆ. ಆ ಹಿನ್ನೆಲೆಯಲ್ಲಿ ಎರಡು ವರ್ಷಗಳಿಂದ ಮರು ಕಾಯಕಲ್ಪ ಮಾಡಲು ಪ್ರಯತ್ನ ಮಾಡುತ್ತಿದ್ದೇನೆ ಎಂದು ಎಚ್‌ಡಿಕೆ ನುಡಿದರು.