ತಾಲೂಕಿನ ಗುತ್ತಿನಕೆರೆ ಗ್ರಾಮದ ಮಧು ಅವರ ಕೆಲಸ ಮಾಡಿಕೊಡಲು 50 ಸಾವಿರ ಲಂಚ ಕೊಡುವಂತೆ ಕೇಳಿದ್ದು ಇದರಿಂದ ಮನನೊಂದು ಲೋಕಾಯುಕ್ತ ಕಚೇರಿಗೆ ತೆರಳಿ ದೂರು ಕೊಟ್ಟಿದ್ದರು. ಮಂಜುನಾಥ್ ಕೆಲಸ ಮಾಡಿಕೊಡಲು ಸೆಸ್ಕ್ ಕಚೇರಿಯಲ್ಲಿ ಮಧು ಅವರಿಂದ ಮೊದಲ ಕಂತಿನ 25 ಸಾವಿರ ರೂ.ಪಡೆಯುವ ವೇಳೆ ತಕ್ಷಣವೇ ಕಾರ್ಯಪ್ರವೃತ್ತರಾದ ಲೋಕಾಯುಕ್ತ ಡಿವೈಎಸ್ಪಿ ಸುರೇಶ್, ಇನ್‌ಸ್ಪೆಕ್ಟರ್‌ಗಳಾದ ಶಿಲ್ಪಾ ಹಾಗೂ ಚಂದ್ರಶೇಖರ್ ಕಾರ್ಯಾಚರಣೆ ನಡೆಸಿದಾಗ ಸಿಕ್ಕಿ ಬಿದ್ದಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಲೋಕಾಯುಕ್ತ ಪೊಲೀಸ್ ಅಧಿಕಾರಿಗಳು ಪ್ರಕ್ರಿಯೆ ಪೂರ್ಣಗೊಂಡ ಬಳಿಕ ಮುಂದಿನ ಕ್ರಮ ಕೈಗೊಂಡಿದ್ದಾರೆ.