ಸಾಹಿತ್ಯ ಓದುಗರು ಕಣ್ಮರೆ

ಅರಸೀಕೆರೆ ನಗರದ ರೋಟರಿ ಭವನದಲ್ಲಿ ಪುಸ್ತಕ ಬಿಡುಗಡೆ ಸಮಾರಂಭವನ್ನು ಅತಿಥಿಗಳು ಉದ್ಘಾಟಿಸಿದರು. ಹರಶಿವಮೂರ್ತಿ, ಸುಂದರೇಶ್, ಕುಮಾರ್, ಹರೀಶ್, ಬಸವರಾಜ್,ಕಿರಣ್ ಕುಮಾರ್ ಇತರರಿದ್ದಾರೆ.
ಅರಸೀಕೆರೆ ನಗರದ ರೋಟರಿ ಭವನದಲ್ಲಿ ಪುಸ್ತಕ ಬಿಡುಗಡೆ ಸಮಾರಂಭವನ್ನು ಅತಿಥಿಗಳು ಉದ್ಘಾಟಿಸಿದರು. ಹರಶಿವಮೂರ್ತಿ, ಸುಂದರೇಶ್, ಕುಮಾರ್, ಹರೀಶ್, ಬಸವರಾಜ್,ಕಿರಣ್ ಕುಮಾರ್ ಇತರರಿದ್ದಾರೆ.
Published on

ಪ್ರಮುಖ ಮುಖ್ಯಾಂಶಗಳು

  • ಉಪನ್ಯಾಸಕ ಡಾ.ಹರಶಿವಮೂರ್ತಿ ಬೇಸರ
ಅರಸೀಕೆರೆ: ಕನ್ನಡ ಸಾಹಿತ್ಯ ಓದುಗರ ಸಂಖ್ಯೆ ಕ್ಷೀಣಿಸುತ್ತಿರುವುದು ಆತಂಕಕಾರಿ ಸಂಗತಿಯಾಗಿದೆ ಎಂದು ಉಪನ್ಯಾಸಕ ಡಾ.ಹರಶಿವಮೂರ್ತಿ ಹೇಳಿದರು.
ನಗರದ ರೋಟರಿ ಭವನದಲ್ಲಿ ಭಾನುವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ದಿಬ್ಬೂರು ರಮೇಶ್ ರಚಿತ ಆತ್ಮಗತಾ ಕೃತಿ ಬಿಡುಗಡೆ ಮಾಡಿ ಮಾತನಾಡಿದರು.
ಕನ್ನಡ ಸಾಹಿತ್ಯ ಸಹಸ್ರ ಶತಮಾನಗಳ ಇತಿಹಾಸ ಹೊಂದಿದೆ. ಕವಿಗಳು, ಲೇಖಕರು ಅಪರೂಪದ ಕೃತಿಗಳನ್ನು ಕೊಡುಗೆಯಾಗಿ ನೀಡಿದ್ದಾರೆ. ಹಿರಿಯರ ಹಾದಿಯಲ್ಲಿ ಕಿರಿಯರೂ ಸಾಗುತ್ತಿರುವುದು ಭಾಷೆಯ ಬೆಳವಣಿಗೆಗೆ ಪೂರಕವಾಗಿದೆ. ಇದಕ್ಕೆ ಪೂರಕ ಎನ್ನುವಂತೆ ದಿಬ್ಬೂರು ರಮೇಶ್ ವೈಚಾರಿಕ ಹಾಗೂ ಆತ್ಮಗತಾ ಕೃತಿ ರಚಿಸಿ ಕನ್ನಡ ಸಾರಸ್ವತ ಲೋಕಕ್ಕೆ ಸಮರ್ಪಣೆ ಮಾಡಿದ್ದಾರೆ. ಬದಲಾದ ಸನ್ನಿವೇಶದಲ್ಲಿ ಕನ್ನಡ ಸಾಹಿತ್ಯ ಕೃತಿಗಳನ್ನು ಓದುವವರು ಕ್ಷೀಣಿಸುತ್ತಿರುವುದು ಬೇಸರದ ಸಂಗತಿ ಎಂದು ಹೇಳಿದರು.
ನಿವೃತ್ತ ಉಪನ್ಯಾಸಕ ಡಾ.ಬಿ.ಡಿ.ಕುಮಾರ್ ಮಾತನಾಡಿ, ಹನ್ನೆರಡನೆಯ ಶತಮಾನದ ಬಸವಾದಿ ಶಿವಶರಣರ ಆಶಯದಂತೆ ನಡೆದರೆ ಬದುಕು ಸಾರ್ದಕವಾಗಲಿದೆ.ದಿಬ್ಬೂರು ರಮೇಶ್ ರಚಿತ ಆತ್ಮಗತಾ ಕೃತಿ ಆತ್ಮಾವಲೋಕನದ ಅಗತ್ಯತೆ ಪ್ಲತಿಪಾದಿಸುವಂತಿದೆ. ಪ್ರತಿಯೊಬ್ಬನೂ ತನ್ನನ್ನು ತಾನು ಅರಿತು ನಡೆದರೆ ಸಮ ಸಮಾಜ ನಿರ್ಮಾಣ ಸಾಧ್ಯವಾಗಲಿದೆ ಎಂದರು.
ಬರಹಗಾರರ ಸಂಘದ ಜಿಲ್ಲಾಧ್ಯಕ್ಷ ಸುಂದರೇಶ್ ಉಡುವಾರೆ ಮಾತನಾಡಿ, ಕನ್ನಡ ಕಟ್ಟುವ ಕೆಲಸ ಮಾಡಬೇಕಿದ್ದ ಕಸಾಪ ಎಡವಿದಂತೆ ಕಾಣುತ್ತಿದೆ ಎಂಬುದು ಇತ್ತೀಚಿನ ವಿದ್ಯಮಾನಗಳಿಂದ ಸಾಬೀತಾಗಿದೆ. ಹೀಗಿದ್ದರೂ ಕೇಂದ್ರ ಕನ್ನಡ ಸಾಹಿತ್ಯ ವೇದಿಕೆ, ಬರಹಗಾರರ ಸಂಘ ಸಾಹಿತ್ಯ ಕೃಷಿಯಲ್ಲಿ ತೊಡಗಿದವರನ್ನು ಪ್ರೋತ್ಸಾಹಿಸುತ್ತಿರುವುದು ಆಶಾದಾಯಕ ಬೆಳವಣಿಗೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಕವಿಗೋಷ್ಠಿಯಲ್ಲಿ ಕವಿತೆ ವಾಚಿಸಿದರು. ಸಾಹಿತಿ ವೆಂಕಟೇಶ್, ದಿಬ್ಬೂರು ರಮೇಶ್, ಪ್ರಾಧ್ಯಾಪಕರಾದ ಡಾ.ಹರೀಶ್ ಕುಮಾರ್, ಡಾ.ಬಸವರಾಜು, ಬಿ.ಪರಮೇಶ್, ಕರವೇ ಅಧ್ಯಕ್ಷ ಕಿರಣ್ ಕುಮಾರ್, ನಟರಾಜ್ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net