ಹೇಮಾವತಿ ನದಿಯ ಹರಿವು ನಿತ್ಯಕ್ಕಿಂತ ಹೆಚ್ಚಿದ್ದರೆ,**** ಎತ್ತಿನಹೊಳೆಯಿಂದ ನೀರೆತ್ತುವ ಪ್ರಕ್ರಿಯೆ ನಿನ್ನೆಯಿಂದ ಆರಂಭವಾಗಿದೆ. ಉಳಿದಂತೆ ಬಹುತೇಕ ಎಲ್ಲ ನದಿಗಳು ಮೈದುಂಬಿ ಹರಿಯುತ್ತಿದ್ದು, ಮಲೆನಾಡಿನಲ್ಲಿ ಮಳೆ ವೈಭವ ಕಳೆಕಟ್ಟಿದೆ. ಶಾಲಾ-ಕಾಲೇಜುಗಳಿಗೆ ಮಂಗಳವಾರ ರಜೆ ಘೋಷಿಸಲಾಗಿದ್ದು, ಬುಧವಾರ ಮುಂಜಾನೆಯ ಮಳೆಯನ್ನಾಧರಿಸಿ ರಜೆ ಘೋಷಿಸಲಾಗುವುದು ಎಂದು ತಾಲೂಕು ಆಡಳಿತ ಮಾಹಿತಿ ನೀಡಿದೆ.