ಪರವಾನಗಿ ಭೂಮಾಪಕರ ಕಾಯಂಗೆ ಒತ್ತಾಯ

ಅರಕಲಗೂಡು ತಾಲೂಕು ಹನ್ಯಾಳು ಗ್ರಾಮದಲ್ಲಿ ಪರವಾನಗಿ ಭೂ ಮಾಪಕರು ಶಾಸಕ ಎ.ಮಂಜು ಅವರಿಗೆ ಮನವಿ ಸಲ್ಲಿಸಿದರು. ವಿ.ಹೇಮಂತಕುಮಾರ್, ತುಳಸಿರಾಮ್, ಚಂದ್ರಶೇಖರ್, ಸತೀಶ್, ಶ್ರೀಧರ್ ಇದ್ದರು.
ಅರಕಲಗೂಡು ತಾಲೂಕು ಹನ್ಯಾಳು ಗ್ರಾಮದಲ್ಲಿ ಪರವಾನಗಿ ಭೂ ಮಾಪಕರು ಶಾಸಕ ಎ.ಮಂಜು ಅವರಿಗೆ ಮನವಿ ಸಲ್ಲಿಸಿದರು. ವಿ.ಹೇಮಂತಕುಮಾರ್, ತುಳಸಿರಾಮ್, ಚಂದ್ರಶೇಖರ್, ಸತೀಶ್, ಶ್ರೀಧರ್ ಇದ್ದರು.
Published on
ಅರಕಲಗೂಡು: ಪರವಾನಗಿ ಭೂಮಾಪಕರನ್ನು ಕಾಯಂಗೊಳಿಸಿ ಸಮಾನ ಕೆಲಸಕ್ಕೆ ಸಮಾನ ವೇತನಕ್ಕಾಗಿ ವಿಧಾನಸಭೆ ಕಲಾಪದಲ್ಲಿ ಸರ್ಕಾರದ ಗಮನ ಸೆಳೆಯುವಂತೆ ಒತ್ತಾಯಿಸಿ ಭಾನುವಾರ ತಾಲೂಕು ಪರವಾನಗಿ ಭೂ ಮಾಪಕರು ಶಾಸಕ ಎ.ಮಂಜು ಅವರಿಗೆ ಮನವಿ ಸಲ್ಲಿಸಿದರು.
ತಾಲೂಕಿನ ಹನ್ಯಾಳು ಗ್ರಾಮದ ನಿವಾಸದಲ್ಲಿ ಮನವಿ ಸಲ್ಲಿಸಿ, 21 ವರ್ಷಗಳಿಂದ ಕೆಲಸ ನಿರ್ವಹಿಸುತ್ತಿರುವ ಭೂ ಮಾಪಕರ ಬೇಡಿಕೆಗಳನ್ನು ಸರ್ಕಾರ ಈಡೇರಿಸದೆ ನಿರ್ಲಕ್ಷ್ಯ ಮಾಡಿದೆ. ಇಲಾಖೆಗೆ ಅನುಕೂಲವಾಗುವ ರೀತಿಯಲ್ಲಿ ಕಾನೂನು ತಿದ್ದುಪಡಿ ಮಾಡಿ ಸರ್ಕಾರಿ ಭೂ ಮಾಪಕರು ಮಾಡುವ ದರಖಸ್ತು, ಪೋಡು, ಅನುಬಂಧ ಅಳತೆ, ಆಕಾರ್ ಬಂದ್, ಡಿಜಿಟಲೀಕರಣ, ಹದ್ದು ಬಸ್ತು ಅಳತೆ, ಕೋರ್ಟ್ ಅಳತೆ, ಕೆರೆ ಅಳತೆ, ಪವರ್ ಗ್ರೀಡ್, ಬ್ಯಾಕ್‌ಲಾಣ್ ಪೋಡಿ, ಸ್ವಾಮಿತ್ವ, ಪೋಡಿ ಮುಕ್ತ ಅಳತೆ ಸೇರಿದಂತೆ ಎಲ್ಲ ಕೆಸಲಗಳನ್ನು ನಿರ್ವಹಿಸುತ್ತಿದ್ದರೂ ಸಮಾನ ವೇತನವೂ ಇಲ್ಲ. ಸೇವಾ ಭದ್ರತೆಯೂ ಇಲ್ಲ. ವೈಜ್ಞಾನಿಕವಾಗಿ ಸಂಭಾವನೆ ಪಾವತಿ ಮಾಡಿಲ್ಲ. ನಮ್ಮ ಬೇಡಿಕೆಗಳನ್ನು ಈಡೇರಿಸುವ ತನಕ ಕೆಲಸ ಸ್ಥಗಿತಗೊಳಿಸಿ ಮುಷ್ಕರ ಹಮ್ಮಿಕೊಂಡಿರುವುದಾಗಿ ಸಂಘದ ವತಿಯಿಂದ ಇಲಾಖೆಯ ನಿರ್ದೇಶಕರು ಹಾಗೂ ಆಯುಕ್ತರಿಗೆ ಮನವಿ ಸಲ್ಲಿಸಲಾಗಿದೆ. ಸದನದಲ್ಲಿ ಧ್ವನಿಎತ್ತಿ ಸರ್ಕಾರದ ಗಮನ ಸೆಳೆದು ಪರವಾನಗಿ ಭೂ ಮಾಪಕರ ಬೇಡಿಕೆ ಈಡೇರಿಸುವಂತೆ ಮನವಿ ಮಾಡಿದರು.
ರಾಜ್ಯ ಪರವಾನಗಿ ಭೂ ಮಾಪಕರ ಸಂಘದ ಸದಸ್ಯ ವಿ.ಹೇಮಂತಕುಮಾರ್, ತಾಲೂಕು ಸಂಘದ ಅಧ್ಯಕ್ಷ ತುಳಸಿರಾಮ್, ಸದಸ್ಯರಾದ ಚಂದ್ರಶೇಖರ್, ಸತೀಶ್, ಶ್ರೀಧರ್, ಗಿರೀಶ್, ಶ್ರೀನಿವಾಸ್, ಹೇಮಂತ್, ಲೋಹಿತ್, ಆದರ್ಶ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net