ಕಾರ್ಮಿಕರಿಗೆ ಸರ್ಕಾರಿ ಸವಲತ್ತು ಸಿಗಲಿ

ಹೊಯ್ಸಳ ವಿದ್ಯುತ್ ಉಪಕರಣಗಳ ರಿಪೇರಿ ಕಾರ್ಮಿಕರ ಸಂಘದ 2025-26ನೇ ಸಾಲಿನ ಸರ್ವ ಸದಸ್ಯರ ವಾರ್ಷಿಕ ಮಹಾಸಭೆಯನ್ನು ಗಣ್ಯರು ಉದ್ಘಾಟಿಸಿದರು. ಶಶಿಕುಮಾರ್ ಉಪ್ಯೂರ್, ಬಿ.ಬಿ.ಶಿವರಾಜ್, ವಿಜಯ್ ಕುಮಾರ್ ಇತರರು ಇದ್ದರು.
ಹೊಯ್ಸಳ ವಿದ್ಯುತ್ ಉಪಕರಣಗಳ ರಿಪೇರಿ ಕಾರ್ಮಿಕರ ಸಂಘದ 2025-26ನೇ ಸಾಲಿನ ಸರ್ವ ಸದಸ್ಯರ ವಾರ್ಷಿಕ ಮಹಾಸಭೆಯನ್ನು ಗಣ್ಯರು ಉದ್ಘಾಟಿಸಿದರು. ಶಶಿಕುಮಾರ್ ಉಪ್ಯೂರ್, ಬಿ.ಬಿ.ಶಿವರಾಜ್, ವಿಜಯ್ ಕುಮಾರ್ ಇತರರು ಇದ್ದರು.
Published on
ಬೇಲೂರು: ವಿದ್ಯುತ್ ಉಪಕರಣಗಳ ರಿಪೇರಿದಾರ ಕಾರ್ಮಿಕರ ಹಕ್ಕುಗಳ ರಕ್ಷಣೆ, ಕಲ್ಯಾಣ ಹಾಗೂ ವೃತ್ತಿಪರ ಅಭಿವೃದ್ಧಿಗೆ ಹೊಯ್ಸಳ ವಿದ್ಯುತ್ ಉಪಕರಣಗಳ ರಿಪೇರಿ ಕಾರ್ಮಿಕರ ಸಂಘವು ನಿರಂತರವಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ಟಿವಿ ಅಸೋಸಿಯೇಷನ್ ಅಧ್ಯಕ್ಷ ಶಶಿಕುಮಾರ್ ಉಪ್ಯೂರ್ ಹೇಳಿದರು.
ಪಟ್ಟಣದ ವಿಷ್ಣು ರೀಜೆನ್ಸಿ ಸಭಾಂಗಣದಲ್ಲಿ ಭಾನುವಾರ ಆಯೋಜಿಸಿದ್ದ ಹೊಯ್ಸಳ ವಿದ್ಯುತ್ ಉಪಕರಣಗಳ ರಿಪೇರಿ ಕಾರ್ಮಿಕರ ಸಂಘದ 2025-26ನೇ ಸಾಲಿನ ಸರ್ವ ಸದಸ್ಯರ ವಾರ್ಷಿಕ ಮಹಾಸಭೆ ಉದ್ಘಾಟಿಸಿ ಮಾತನಾಡಿದ ಅವರು, ವಿದ್ಯುತ್ ಉಪಕರಣಗಳ ರಿಪೇರಿದಾರ ಕಾರ್ಮಿಕರು ಯಾವಾಗಲೂ ಅಪಾಯದ ನಡುವೆಯೇ ಕೆಲಸ ನಿರ್ವಹಿಸುತ್ತಿರುತ್ತಾರೆ. ಅವರಿಗೆ ಸರ್ಕಾರ ಎಲ್ಲ ರೀತಿಯ ಸೌಲಭ್ಯಗಳನ್ನು ಕಲ್ಪಿಸಬೇಕು. ಸಂಘದ ಬೆಳವಣಿಗೆಯಲ್ಲಿ ಸರ್ವ ಸದಸ್ಯರ ಒಗ್ಗಟ್ಟು, ಸಹಕಾರ ಮುಖ್ಯ. ಸಹಕಾರವೇ ಸಂಘ, ಸಂಘವೇ ಶಕ್ತಿ ಎಂಬ ಧ್ಯೇಯದೊಂದಿಗೆ ಎಲ್ಲರೂ ಸಂಘದ ಅಭಿವೃದ್ಧಿಗೆ ಕೈಜೋಡಿಸಬೇಕು. ಬೇಲೂರು ಸಂಘವು ರಿಪೇರಿದಾರರ ಮಕ್ಕಳಲ್ಲಿನ ಪ್ರತಿಭೆಯನ್ನು ಗುರುತಿಸಿ ಪ್ರೋತ್ಸಾಹಿಸುವುದು, ಸಂಘದ ಹಿರಿಯರನ್ನು ಸನ್ಮಾನಿಸುವುದು, ಆರೋಗ್ಯ ಶಿಬಿರ, ಸಮಾಜಮುಖಿ ಕಾರ್ಯಕ್ರಮಗಳನ್ನು ಮಾಡುತ್ತಿರುವುದು ಶ್ಲಾಘನೀಯ ಎಂದರು.
ಕಾರ್ಮಿಕ ಇಲಾಖೆಯ ನಿರೀಕ್ಷಕ ವಿಜಯ್ ಕುಮಾರ್ ಮಾತನಾಡಿ, ಎಲೆಕ್ಟ್ರಿಕಲ್ ಹಾಗೂ ಎಲೆಕ್ಟ್ರಾನಿಕ್ಸ್ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುವ ಕಾರ್ಮಿಕರು ಸರ್ಕಾರದ ಕಲ್ಯಾಣ ಯೋಜನೆಗಳ ಸೌಲಭ್ಯಗಳನ್ನು ಸದುಪಯೋಗ ಪಡಿಸಿಕೊಳ್ಳಬೇಕು. ಲೇಬರ್ ಕಾರ್ಡ್ ಹೊಂದಿರುವ ಕಾರ್ಮಿಕರಿಗೆ ಆರೋಗ್ಯ ವಿಮೆ, ಅಪಘಾತ ಪರಿಹಾರ, ಮಕ್ಕಳಿಗೆ ವಿದ್ಯಾರ್ಥಿ ವೇತನ, ಉಚಿತ ಉಪಕರಣಗಳ ಕಿಟ್, ವಿವಾಹ ಸಹಾಯಧನ, ಪಿಂಚಣಿ ಸೇರಿದಂತೆ ವಿವಿಧ ಸೌಲಭ್ಯಗಳಿವೆ. ಅರ್ಹ ಕಾರ್ಮಿಕರು ಈ ಯೋಜನೆಗಳ ಬಗ್ಗೆ ಮಾಹಿತಿ ಪಡೆದು ನೋಂದಣಿ ಮಾಡಿಸಿಕೊಳ್ಳುವಂತೆ ತಿಳಿಸಿದರು.
ಇದೇ ಸಂದರ್ಭ ಹೊಯ್ಸಳ ವಿದ್ಯುತ್ ಉಪಕರಣಗಳ ರಿಪೇರಿ ಕಾರ್ಮಿಕರ ಸಂಘದ ಸದಸ್ಯರ ಮಕ್ಕಳಲ್ಲಿ ಎಸ್‌ಎಸ್‌ಎಲ್‌ಸಿ, ಪಿಯುಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕ ಗಳಿಸಿದವರಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು.
ಪತ್ರಕರ್ತ ಬಿ.ಬಿ.ಶಿವರಾಜ್ ಮಾತನಾಡಿದರು. ಸಂಘದ ಅಧ್ಯಕ್ಷ ಕೇಬಲ್ ವಿಜಯಕುಮಾರ್, ರಾಜ್ಯ ಪ್ರಧಾನ ಕಾರ್ಯದರ್ಶಿ ಜಯರಾಮ್, ಕಾರ್ಮಿಕ ಇಲಾಖೆ ಅಧಿಕಾರಿ ಶಶಿಕಲಾ, ರಾಘವೇಂದ್ರ ಹತ್ವಾರ್, ನಜೀರುದ್ದೀನ್ ಶಹಜಾದ್, ಅಚ್ಚುತರಾವ್, ಗಂಗರಾಜು ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net