ಪತ್ರಿಕೆಗಳಲ್ಲಿ ವಾಸ್ತವ ಸಂಗತಿ ಪ್ರಸಾರವಾಗಲಿ

ಪಾಳ್ಯ ಗ್ರಾಮದ ರೆಸಾರ್ಟ್‌ವೊಂದರಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಪತ್ರಕರ್ತರ ಸಂಘದ ನೂತನ ಪದಾಧಿಕಾರಿಗಳನ್ನು ಅಭಿನಂದಿಸಲಾಯಿತು. ಸಿಮೆಂಟ್ ಮಂಜು, ಎಚ್.ಕೆ.ಕುಮಾರಸ್ವಾಮಿ, ಮುರಳಿಮೋಹನ್, ಎಚ್.ಬಿ.ಮದನಗೌಡ, ಜೆ. ಆರ್.ಕೆಂಚೇಗೌಡ, ಚೌಡಳ್ಳಿ ಜಗದೀಶ್, ಕೆ.ಎಸ್.ಮಂಜೇಗೌಡ ಇತರರಿದ್ದರು
ಪಾಳ್ಯ ಗ್ರಾಮದ ರೆಸಾರ್ಟ್‌ವೊಂದರಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಪತ್ರಕರ್ತರ ಸಂಘದ ನೂತನ ಪದಾಧಿಕಾರಿಗಳನ್ನು ಅಭಿನಂದಿಸಲಾಯಿತು. ಸಿಮೆಂಟ್ ಮಂಜು, ಎಚ್.ಕೆ.ಕುಮಾರಸ್ವಾಮಿ, ಮುರಳಿಮೋಹನ್, ಎಚ್.ಬಿ.ಮದನಗೌಡ, ಜೆ. ಆರ್.ಕೆಂಚೇಗೌಡ, ಚೌಡಳ್ಳಿ ಜಗದೀಶ್, ಕೆ.ಎಸ್.ಮಂಜೇಗೌಡ ಇತರರಿದ್ದರು
Published on

ಪ್ರಮುಖ ಮುಖ್ಯಾಂಶಗಳು

  • ಶಾಸಕ ಸಿಮೆಂಟ್ ಮಂಜು
  • ಪಾಳ್ಯ ಗ್ರಾಮದ ರೆಸಾರ್ಟ್‌
ಆಲೂರು: ಪತ್ರಕರ್ತರು ಸಮಾಜಕ್ಕೆ ಉತ್ತಮ ಮಾರ್ಗದರ್ಶನ ಮಾಡುವ ಮೂಲಕ ಜವಾಬ್ದಾರಿಯುಳ್ಳವರಾಗಿರಬೇಕು ಎಂದು ಶಾಸಕ ಸಿಮೆಂಟ್ ಮಂಜು ಸಲಹೆ ನೀಡಿದರು.
ತಾಲೂಕಿನ ಪಾಳ್ಯ ಗ್ರಾಮದ ರೆಸಾರ್ಟ್‌ವೊಂದರಲ್ಲಿ ಆಯೋಜಿಸಿದ್ದ ತಾಲೂಕು ಪತ್ರಕರ್ತರ ಸಂಘದ ಪದಾಧಿಕಾರಿಗಳ ಪದಗ್ರಹಣ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಪತ್ರಿಕೆಯಲ್ಲಿ ಪ್ರಕಟವಾಗುವ ಸುದ್ದಿಯನ್ನು ಜೀರ್ಣ ಮಾಡಿಕೊಳ್ಳುವ ಶಕ್ತಿ ಎಲ್ಲರಲ್ಲಿರಬೇಕು. ಮುದ್ರಣ ಮಾಧ್ಯಮ ನಂಬಿಕೆಗೆ ಅರ್ಹವಾಗಿದ್ದು, ವಾಸ್ತವ ಸಂಗತಿ ಪ್ರಸಾರವಾಗಬೇಕು ಎಂದರು.
ಮಾಜಿ ಸಚಿವ ಎಚ್.ಕೆ.ಕುಮಾರಸ್ವಾಮಿ, ಗ್ಯಾರಂಟಿ ಸಮಿತಿ ಅಧ್ಯಕ್ಷ ಮುರಳಿಮೋಹನ್, ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಜೆ.ಆರ್.ಕೆಂಚೇಗೌಡ, ಪತ್ರಕರ್ತರ ಸಂಘದ ರಾಜ್ಯ ಉಪಾಧ್ಯಕ್ಷ ಎಚ್.ಬಿ.ಮದನ್‌ಗೌಡ ಮಾತನಾಡಿದರು.
ಇದೇ ಸಂದರ್ಭದಲ್ಲಿ ನೂತನ ಅಧ್ಯಕ್ಷರಗಿ ಆದಿಲ್, ಉಪಾಧ್ಯಕ್ಷರಾಗಿ ನವೀನ್, ಪ್ರಧಾನ ಕಾರ್ಯದರ್ಶಿಯಾಗಿ ರುದ್ರಕುಮಾರ್, ಕಾರ್ಯದರ್ಶಿಯಾಗಿ ಸತೀಶ್, ಖಜಾಂಚಿಯಾಗಿ ಎಚ್.ವಿ.ಚೇತನ್ ಮತ್ತು ನಿರ್ದೇಶಕರು ಪದಗ್ರಹಣ ಮಾಡಿದರು. ಜಿಲ್ಲಾ ಪತ್ರಕರ್ತರ ಸಂಘದ ನಿರ್ದೇಶಕ ಚೌಡಳ್ಳಿ ಜಗದೀಶ್, ಮಾಜಿ ಅಧ್ಯಕ್ಷರಾದ ರವಿ ನಾಕಲಗೂಡು, ಬಾಳ್ಳುಗೋಪಾಲ್, ಜಿ.ಪ್ರಕಾಶ್, ಎಚ್.ವಿ. ರಾಘವೇಂದ್ರ, ಕೆ.ಎಸ್.ಮಂಜೇಗೌಡ, ಮಾಜಿ ಅಧ್ಯಕ್ಷ ಪೃಥ್ವಿಜಯರಾಂ, ನಟರಾಜ್ ನಾಕಲಗೂಡು, ಉದಯರವಿ, ಪಿ. ಎಲ್. ಲಿಂಗರಾಜು ಉಪಸ್ಥಿತರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net