ಮೂಲ ಸಂಸ್ಕೃತಿ-ಸಂಸ್ಕಾರ ಮರೆಯಾಗದಿರಲಿ

ಅರಸೀಕೆರೆಯ ವಿದ್ಯಾನಗರ ಬಡಾವಣೆಯಲ್ಲಿರುವ ಶ್ರೀ ವಿಷ್ಣು ಪಂಚಾಯತನ ದೇವಾಲಯದಲ್ಲಿ ಲೋಕ ಕಲ್ಯಾಣಾರ್ಥವಾಗಿ ಹೋಮ ನಡೆಯಿತು
ಅರಸೀಕೆರೆಯ ವಿದ್ಯಾನಗರ ಬಡಾವಣೆಯಲ್ಲಿರುವ ಶ್ರೀ ವಿಷ್ಣು ಪಂಚಾಯತನ ದೇವಾಲಯದಲ್ಲಿ ಲೋಕ ಕಲ್ಯಾಣಾರ್ಥವಾಗಿ ಹೋಮ ನಡೆಯಿತು
Published on

ಪ್ರಮುಖ ಮುಖ್ಯಾಂಶಗಳು

  • ಶ್ರೀ ಮಾರುತಿ ಸಚ್ಚಿದಾನಂದ ಆಶ್ರಮ
  • ಶ್ರೀ ಸತೀಶ್ ಶರ್ಮ ಗುರೂಜಿ
  • ವಿದ್ಯಾನಗರ ಬಡಾವಣೆ
  • ಶ್ರೀ ವಿಷ್ಣು ಪಂಚಾಯತನ ದೇವಾಲಯ
  • ಮಾಘ ಮಾಸ ಹುಣ್ಣಿಮೆ
ಅರಸೀಕೆರೆ: ಜಗತ್ತಿನ ಸಕಲ ಜೀವರಾಶಿಗಳ ಕಲ್ಯಾಣ ಸನಾತನ ಧರ್ಮದ ತಿರುಳು ಎಂದು ಶ್ರೀ ಮಾರುತಿ ಸಚ್ಚಿದಾನಂದ ಆಶ್ರಮದ ಶ್ರೀ ಸತೀಶ್ ಶರ್ಮ ಗುರೂಜಿ ಹೇಳಿದರು.
ವಿದ್ಯಾನಗರ ಬಡಾವಣೆಯಲ್ಲಿರುವ ಶ್ರೀ ವಿಷ್ಣು ಪಂಚಾಯತನ ದೇವಾಲಯದಲ್ಲಿ ಮಾಘ ಮಾಸ ಹುಣ್ಣಿಮೆ ನಿಮಿತ್ತ ಲೋಕ ಕಲ್ಯಾಣಾರ್ಥವಾಗಿ ಇತ್ತೀಚೆಗೆ ಆಯೋಜಿಸಿದ್ದ ವಿಶೇಷ ಪೂಜಾ ಕೈಂಕರ್ಯಗಳ ಸಾನ್ನಿಧ್ಯ ವಹಿಸಿ ಮಾತನಾಡಿದರು.
ಸೂರ್ಯನಿಂದ ಹೊರಹೊಮ್ಮುವ ಬೆಳಕು ವಿಶ್ವವನ್ನೇ ಬೆಳಗಿದರೆ, ಧರ್ಮಧಾರಿತ ನಂಬಿಕೆಗಳು ವಿಶ್ವವನ್ನು ಬೆಳಗುವ ಜ್ಞಾನ ದೀಪವಾಗಿದೆ. ಎಲ್ಲರ ಅಂತರಾತ್ಮದ ಕತ್ತಲನ್ನು ಹೋಗಲಾಡಿಸುವ ಬೆಳಕು ನಮ್ಮಲ್ಲಿಯೇ ಇದ್ದು, ಅದನ್ನು ಧರ್ಮಗುರುಗಳ ಮೂಲಕ ಅರಿವು ಮೂಡಿಸಿಕೊಳ್ಳಬೇಕು ಎಂದರು.
ಮನೆಯಲ್ಲಿ ಧರ್ಮದ ನಂದಾ ದೀಪ ಸದಾ ಬೆಳಗುತ್ತಿರಬೇಕು. ಮೊಬೈಲ್ನಂತಹ ಮಾಯ ಪ್ರಪಂಚದಲ್ಲಿ ಮುಳುಗುತ್ತಿರುವ ಮಕ್ಕಳಲ್ಲಿ ನಮ್ಮ ಮೂಲ ಸಂಸ್ಕೃತಿ-ಸಂಸ್ಕಾರ ಮರೆಯಾಗದಂತೆ ಅರಿವು ಮೂಡಿಸಿ ಜಾಗೃತಿಗೊಳಿಸಬೇಕು. ಪಾಲಕರು ಸೇರಿದಂತೆ ಕುಟುಂಬದ ಸದಸ್ಯರು ತಮ್ಮ ಮಕ್ಕಳಿಗೆ ಮೊಬೈಲ್ ಹೊರತಾಗಿ ಬೇರೊಂದು ಪ್ರಪಂಚವಿದೆ ಎಂಬ ಅರಿವು ಮೂಡಿಸಬೇಕು. ಹಬ್ಬ-ಹರಿದಿನಗಳಲ್ಲಿ ನಮ್ಮ ಸನಾತನ ಧರ್ಮದ ಹಬ್ಬಗಳೊಂದಿಗೆ ಆಚಾರ, ವಿಚಾರ, ಸಂಸ್ಕೃತಿ-ಸಂಸ್ಕಾರಗಳನ್ನು ಮಕ್ಕಳ ಮನಸ್ಸಿನಲ್ಲಿ ಬಿತ್ತಿದಾಗ ಮಾತ್ರ ನಮ್ಮ ಭಾರತೀಯ ಸನಾತನ ಧರ್ಮವು ಮುಂದಿನ ಪೀಳಿಗೆಯಿಂದ ರಕ್ಷಿಸಲು ಸಾಧ್ಯ ಎಂದರು.
ಶ್ರೀ ಕ್ಷೇತ್ರದಲ್ಲಿರುವ ಶ್ರೀ ಲಕ್ಷ್ಮೀನರಸಿಂಹಸ್ವಾಮಿಗೆ ಫಲಪಂಚಾಮೃತಷೇಕ, ಪವಮಾನ ಅಭಿಷೇಕದೊಂದಿಗೆ ಪಂಚಮುಖಿ ಹೇರಂಭ ಮಹಾಗಣಪತಿ, ಶ್ರೀ ಸೂರ್ಯ ನಾರಾಯಣ ಸ್ವಾಮಿ , ಶ್ರೀಬಾಲ ಅಂಬಿಕಾದೇವಿ, ಮಹೇಶ್ವರಾತ್ಮಕ ಶ್ರೀಕಂಠೇಶ್ವರ ಸ್ವಾಮಿ, ಪಂಚಮುಖಿ ಆಂಜನೇಯ ಸ್ವಾಮಿ ಸೇರಿದಂತೆ ನಾಗರಕಟ್ಟೆಗೆ ವಿಶೇಷ ಹೂವಿನ ಅಲಂಕಾರದೊಂದಿಗೆ ಪೂಜಾ ಕೈಂಕರ್ಯ ನೆರವೇರಿತು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net