ಶಾಲೆಗಳು ಯುವ ಪೀಳಿಗೆಗೆ ಭವಿಷ್ಯ ರೂಪಿಸುವ ಕೇಂದ್ರಗಳಾಗಲಿ

ಅರಕಲಗೂಡು ತಾಲೂಕಿನ ಹನ್ಯಾಳು ಶಾಲೆಯಲ್ಲಿ ಶಿಕ್ಷಕರ ದಿನಾಚರಣೆಗೆ ಪ್ರಯುಕ್ತ ನಡೆದ ಗುರುವಂದನೆ ಕಾರ್ಯಕ್ರಮದಲ್ಲಿ ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಶಿಕ್ಷಕ ಶಿಕ್ಷಕ ಟಿ. ಮಲ್ಲೇಶ್, ರಾಜ್ಯ ಪ್ರಶಸ್ತಿ ಪುರಸ್ಕೃತ ಶಿಕ್ಷಕರಾದ ಕಾಳಬೊಯಿ ಹಾಗೂ ಶಿಕ್ಷಕರಾದ ಮನೋರಮಾ, ಮಹದೇವಪ್ಪ, ಜಾವೀದ್ ಪಾಷಾ ಮತ್ತು ಶ್ರೀದೇವಿ ಅವರನ್ನು ಹಳೆಯ ವಿದ್ಯಾರ್ಥಿಗಳು ಗೌರವಿಸಿದರು.
ಅರಕಲಗೂಡು ತಾಲೂಕಿನ ಹನ್ಯಾಳು ಶಾಲೆಯಲ್ಲಿ ಶಿಕ್ಷಕರ ದಿನಾಚರಣೆಗೆ ಪ್ರಯುಕ್ತ ನಡೆದ ಗುರುವಂದನೆ ಕಾರ್ಯಕ್ರಮದಲ್ಲಿ ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಶಿಕ್ಷಕ ಶಿಕ್ಷಕ ಟಿ. ಮಲ್ಲೇಶ್, ರಾಜ್ಯ ಪ್ರಶಸ್ತಿ ಪುರಸ್ಕೃತ ಶಿಕ್ಷಕರಾದ ಕಾಳಬೊಯಿ ಹಾಗೂ ಶಿಕ್ಷಕರಾದ ಮನೋರಮಾ, ಮಹದೇವಪ್ಪ, ಜಾವೀದ್ ಪಾಷಾ ಮತ್ತು ಶ್ರೀದೇವಿ ಅವರನ್ನು ಹಳೆಯ ವಿದ್ಯಾರ್ಥಿಗಳು ಗೌರವಿಸಿದರು.
Published on

ಪ್ರಮುಖ ಮುಖ್ಯಾಂಶಗಳು

  • ರಾಷಟ್ರೆ ಪ್ರಶಸ್ತಿ ಪುರಸ್ಕೃತ ನಿವೃತ್ತ ಶಿಕ್ಷಕ ಟಿ. ಮಲ್ಲೇಶ್ ಹೇಳಿಕೆ
ಅರಕಲಗೂಡು: ತಾಲೂಕಿನ ಹನ್ಯಾಳು ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆಯ ಹಳೆಯ ವಿದ್ಯಾರ್ಥಿಗಳ ಬಳಗದ ವತಿಯಿಂದ ಶಿಕ್ಷಕರ ದಿನಾಚರಣೆ ಅಂಗವಾಗಿ ಹಳೆಯ ಶಿಕ್ಷಕರಿಗೆ ಗುರುವಂದನಾ ಕಾರ್ಯಕ್ರಮ ಆಯೋಜಿಸಲಾಗಿತ್ತು.
ರಾಷಟ್ರೆ ಪ್ರಶಸ್ತಿ ಪುರಸ್ಕೃತ ನಿವೃತ್ತ ಶಿಕ್ಷಕ ಟಿ. ಮಲ್ಲೇಶ್ ಮಾತನಾಡಿ, ತಾವು ಸೇವೆ ಸಲ್ಲಿಸಿದ ಹನ್ಯಾಳು ಶಾಲೆಯ ಹಳೆಯ ವಿದ್ಯಾರ್ಥಿಗಳು ಶಾಸಕ ಎ. ಮಂಜು ಮಾರ್ಗದರ್ಶನದಲ್ಲಿ ತಮ್ಮ ಶಾಲೆಯ ಅಭಿವೃದ್ಧಿಗೆ ನೀಡುತ್ತಿರುವ ಕೊಡುಗೆ ಶ್ಲಾಘನೀಯವಾಗಿದೆ. ತಾವು ಕಲಿತ ಶಾಲೆ ಕೇವಲ ನೆನಪಾಗಿ ಉಳಿಯದೆ, ಮುಂದಿನ ಪೀಳಿಗೆಯ ಮಕ್ಕಳ ಭವಿಷ್ಯ ರೂಪಿಸುವ ಉತ್ತಮ ಶಿಕ್ಷಣದ ಕೇಂದ್ರವಾಗಬೇಕು ಎಂಬ ಆಶಯದೊಂದಿಗೆ ಹಳೆಯ ವಿದ್ಯಾರ್ಥಿಗಳು ಹಲವು ಅಭಿವೃದ್ಧಿ ಕಾರ್ಯಗಳಿಗೆ ಕೈಜೋಡಿಸಿದ್ದಾರೆ ಎಂದು ಹೇಳಿದರು.
ಅದರ ಭಾಗವಾಗಿ ಶಾಲೆಯಲ್ಲಿ ಮಕ್ಕಳ ಮನೆ ಎಲ್‌ಕೆಜಿ, ಯುಕೆಜಿ ಕಾರ್ಯಕ್ರಮ ಆರಂಭಿಸಲಾಗಿದೆ. ನೀರಾವರಿ ತಜ್ಞ ಮಾಜಿ ಸಚಿವ ಎಚ್.ಎನ್. ನಂಜೇಗೌಡರ ಸ್ಮರಣಾರ್ಥ ಸ್ಮಾರ್ಟ್ ಕ್ಲಾಸ್ ನಿರ್ಮಿಸಲಾಗಿದೆ. ಗುರುಗಳು ತಮಗೆ ನೀಡಿದ ಜ್ಞಾನವನ್ನು ಜೀವನದಲ್ಲಿ ಅಳವಡಿಸಿಕೊಂಡ ಹಳೆಯ ವಿದ್ಯಾರ್ಥಿಗಳು, ಅದೇ ಶಾಲೆಯ ಮುಂದಿನ ಪೀಳಿಗೆಯ ಮಕ್ಕಳಿಗೆ ಉತ್ತಮ ಸೌಲಭ್ಯಗಳನ್ನು ಒದಗಿಸುವ ಮೂಲಕ ತಮ್ಮ ಗುರುದಕ್ಷಿಣೆಯನ್ನು ಸಲ್ಲಿಸುತ್ತಿರುವುದು ವಿಶೇಷವಾಗಿದೆ ಎಂದರು.
ರಾಜ್ಯ ಪ್ರಶಸ್ತಿ ಪುರಸ್ಕೃತ ಶಿಕ್ಷಕ ಕಾಳಬೋಯಿ ಮಾತನಾಡಿ, ಒಂದು ಕಾಲದಲ್ಲಿ ಶಾಲೆಯ ತರಗತಿ ಕೊಠಡಿಗಳಲ್ಲಿ ಕುಳಿತು ಅಕ್ಷರ ಕಲಿತ ಮಕ್ಕಳು ವರ್ಷಗಳು ಉರುಳಿದರೂ ತಮ್ಮ ಬದುಕಿಗೆ ದಾರಿ ತೋರಿದ ಗುರುಗಳನ್ನು ಮರೆಯದೆ ತಾವು ಕಲಿತ ಶಾಲೆಯ ಋಣವನ್ನು ಸ್ಮರಿಸಿಕೊಂಡು, ಇಂತಹ ಅಪರೂಪದ ಕ್ಷಣಕ್ಕೆ ಸಾಕ್ಷಿಯಾಗಿರುವುದು ನಮ್ಮೆಲ್ಲರ ಸುದೈವ ಎಂದು ಹೇಳಿದರು.
ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಶಿಕ್ಷಕ ಟಿ. ಮಲ್ಲೇಶ್ ಹಾಗೂ ರಾಜ್ಯ ಪ್ರಶಸ್ತಿ ಪುರಸ್ಕೃತ ಶಿಕ್ಷಕರಾದ ಕಾಳಬೊಯಿ, ಮನೋರಮಾ, ಮಹದೇವಪ್ಪ, ಜಾವೀದ್ ಪಾಷಾ ಮತ್ತು ಶ್ರೀದೇವಿ ಅವರನ್ನು ಹಳೆಯ ವಿದ್ಯಾರ್ಥಿಗಳು ಸನ್ಮಾನಿಸಿದರು.
ಮಧು, ಚೇತನ್, ರಘುನಾಥ್, ಹೊನ್ನಗೇಂದ್ರ, ರವಿ, ರಾಹುಲ್, ಗೋವಿಂದ, ಸಂತೋಷ, ನವೀನ, ಕೃಷ್ಣ, ದೊಡ್ಡೇಗೌಡ, ಪ್ರತಿಮಾ, ಕಲಾ, ನಂದಿನಿ, ಸುಮಲತಾ, ಸುಮಿತ್ರಾ, ಪವಿತ್ರಾ, ಶ್ವೇತಾ, ರಾಣಿ ಹಾಗೂ ಹಳೆಯ ವಿದ್ಯಾರ್ಥಿಗಳು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net