ಪ್ರೊ.ಬಿ.ಕೃಷ್ಣಪ್ಪ ಮನೆ ಸ್ಮಾರಕವಾಗಲಿ

ಬೇಲೂರಿನಲ್ಲಿ ದಸಂಸ ಪದಾಧಿಕಾರಿಗಳು ಶಿರಸ್ತೇದಾರ್ ತನ್ವೀರ್ ಅಹಮದ್ ಅವರಿಗೆ ಮನವಿ ಸಲ್ಲಿಸಿದರು.  ಲಕ್ಷ್ಮಣ್, ಹೊಯ್ಸಳ,  ನಿಂಗರಾಜು, ವಸಂತ ಕುಮಾರ್, ಆಟೋ ಲಕ್ಷ್ಮಣ್, ಪ್ರವೀಣ್, ಚಂದ್ರು ಟೈಲರ್ ಇತರರಿದ್ದರು.
ಬೇಲೂರಿನಲ್ಲಿ ದಸಂಸ ಪದಾಧಿಕಾರಿಗಳು ಶಿರಸ್ತೇದಾರ್ ತನ್ವೀರ್ ಅಹಮದ್ ಅವರಿಗೆ ಮನವಿ ಸಲ್ಲಿಸಿದರು. ಲಕ್ಷ್ಮಣ್, ಹೊಯ್ಸಳ, ನಿಂಗರಾಜು, ವಸಂತ ಕುಮಾರ್, ಆಟೋ ಲಕ್ಷ್ಮಣ್, ಪ್ರವೀಣ್, ಚಂದ್ರು ಟೈಲರ್ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಶಿರಸ್ತೇದಾರ್‌ಗೆ ಮನವಿ ಸಲ್ಲಿಸಿದ ದಸಂಸ
ಬೇಲೂರು: ದಸಂಸ ಸಂಸ್ಥಾಪಕ ಪ್ರೊ.ಬಿ.ಕೃಷ್ಣಪ್ಪ ಅವರ ಮನೆಯನ್ನು ಸ್ಮಾರಕವಾಗಿಸಬೇಕೆಂದು ಆಗ್ರಹಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿ(ಅಂಬೇಡ್ಕರ್ ವಾದ)ತಾಲೂಕು ಸಮಿತಿ ಪದಾಧಿಕಾರಿಗಳು ಸೋಮವಾರ ಶಿರಸ್ತೇದಾರ್ ತನ್ವೀರ್ ಅಹಮದ್ ಮೂಲಕ ಮುಖ್ಯಮಂತ್ರಿಗೆ ಮನವಿ ಪತ್ರ ಸಲ್ಲಿಸಿದರು.
ದಲಿತ ಸಂಘರ್ಷ ಸಮಿತಿ(ಅಂಬೇಡ್ಕರ್ ವಾದ) ಮೈಸೂರು ವಿಭಾಗಿಯ ಸಂ.ಸಂಚಾಲಕ ಲಕ್ಷ್ಮಣ್ ಮಾತನಾಡಿ, 70 ರ ದಶಕದಲ್ಲಿ ರಾಜ್ಯಾದ್ಯಂತ ತಾಂಡವಾಡುತ್ತಿದ್ದ ಅಸ್ಪಶ್ಯತೆ, ಮೌಢ್ಯ, ಕಂದಾಚಾರ ಹಾಗೂ ದಲಿತರ ಮೇಲಿನ ದೌರ್ಜನ್ಯಗಳನ್ನು ತಡೆಗಟ್ಟಲು ಸಂಘಟನೆ ಕಟ್ಟಿ ಜಾಗೃತಿ ಮೂಡಿಸಿದ ಕರ್ನಾಟಕದ ಎರಡನೇ ಅಂಬೇಡ್ಕರ್ ಪ್ರೊ.ಬಿ.ಕೃಷ್ಣಪ್ಪ.ಭೂ ರಹಿತರಿಗೆ ಭೂಮಿ ಹಂಚಿಕೆ, ಶಿಕ್ಷಣ ಸೇರಿದಂತೆ ತಳ ಸಮುದಾಯಗಳಿಗೆ ನ್ಯಾಯ ಕೊಡಿಸುವ ನಿಟ್ಟಿನಲ್ಲಿ ಕರ್ನಾಟಕದಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ಹುಟ್ಟು ಹಾಕಿ ರಾಜ್ಯದ ಉದ್ದಗಲಕ್ಕೂ ಓಡಾಡಿ ಹಲವಾರು ಹೋರಾಟ, ಧರಣಿ, ಪ್ರತಿಭಟನೆಗಳ ಮೂಲಕ ತುಳಿತಕ್ಕೊಳಗಾದ ಸಮುದಾಯಗಳಿಗೆ ನ್ಯಾಯ ಕೊಡಿಸಿದ ದೀಮಂತ ನಾಯಕ. ಆದ್ದರಿಂದ ಅವರ ಹುಟ್ಟೂರು ದಾವಣಗೆರೆ ಜಿಲ್ಲೆಯ ಹರಿಹರದಲ್ಲಿರುವ ಮನೆಗೆ ಕಾಯಕಲ್ಪ ನೀಡಿ ಅದನ್ನು ಸ್ಮಾರಕವನ್ನಾಗಿ ಮಾಡಬೇಕು ಎಂದು ಆಗ್ರಹಿಸಿದರು.
ಬೇಲೂರು ತಾಲೂಕಿನಲ್ಲಿ ಜಮೀನಿನ ಹಕ್ಕಪತ್ರ ಸಿಕ್ಕಿದ್ದರೂ ಪಹಣಿಯಲ್ಲಿ ಹೆಸರು ನೋಂದಾಯಿಸದಿರುವುದು, ಜಮೀನು ಸ್ವಾ ಧೀನದಲ್ಲಿದ್ದು ಅರ್ಜಿ ಸಲ್ಲಿಸಿ ಸ್ವೀಕೃತಿ ಪತ್ರವಿದ್ದರೂ ಕಚೇರಿ ಪುಸ್ತಕದಲ್ಲಿ ಇಲ್ಲ ಎಂದು ವಂಚಿಸಲಾಗುತ್ತಿದ್ದು, ಸ್ವೀಕೃತಿ ಪತ್ರವನ್ನೇ ಅಧಿಕೃತವಾಗಿ ಮನ್ನಣೆ ಮಾಡಿ ಅವರಿಗೂ ಹಕ್ಕುಪತ್ರ ನೀಡಬೇಕು. ಪರಿಶಿಷ್ಟ ಜಾತಿ/ಪಂಗಡದವರಿಗೆ ಸೇರಿದ ರುದ್ರಭೂಮಿಗಳನ್ನು ಬಿಡಿಸಿ ಕೊಡಬೇಕು. ಜಮೀನುಗಳಿಗೆ ತೆರಳುವ ರಸ್ತೆಗೆ ಜಾಗ ಬಿಡಿಸಬೇಕು, ವಸತಿಗಾಗಿ ಅರ್ಜಿ ಸಲ್ಲಿಸಿರುವವರಿಗೆ ಹಕ್ಕು ಪತ್ರ ನೀಡಬೇಕೆಂದು ಒತ್ತಾಯಿಸಿದರು.
ದಸಂಸ(ಅಂಬೇಡ್ಕರ್ ವಾದ) ಜಿಲ್ಲಾ ಸಂ.ಸಂಚಾಲಕ ಹೊಯ್ಸಳ, ತಾಲೂಕು ಮುಖಂಡರಾದ ನಿಂಗರಾಜು, ವಸಂತ ಕುಮಾರ್, ಆಟೋ ಲಕ್ಷ್ಮಣ್, ಪ್ರವೀಣ್, ಚಂದ್ರು ಟೈಲರ್,ಮಲ್ಲೇಶ್, ಚಂದ್ರಪ್ಪ, ಭದ್ರಯ್ಯ, ಧರ್ಮ, ಪುಟ್ಟಸ್ವಾಮಿ, ಸುರೇಶ್, ಉಮೇಶ್, ಶರತ್, ಸಿದ್ಧೇಶ್, ನಂದೀಶ್, ಶಿವು, ಮಲ್ಲೇಶ್, ಹರೀಶ್ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net