ಕೊಳ್ಳೇಗಾಲ:ಮಕ್ಕಳು ಶಿಕ್ಷಣದೊಂದಿಗೆ ಆತ್ಮರಕ್ಷಣೆ ಕಲೆಯಾದ ಕರಾಟೆಯನ್ನೂ ಕಲಿಯಬೇಕಿದೆ ಎಂದು ಅಕ್ಷರ ದಾಸೋಹದ ನೋಡಲ್ ಅಧಿಕಾರಿ ನಂಜುಂಡಯ್ಯ ಹೇಳಿದರು.
ಪಟ್ಟಣದಲ್ಲಿ ಭಾನುವಾರ ಮಾಸ್ಟರ್ ಕರಾಟೆ ಅಕಾಡೆಮಿಯಿಂದ ಅಯೋಜಿಸಿದ್ದ ರಾಷ್ಟ್ರೀಯ ಓಪನ್ ಕರಾಟೆ ಚಾಮರಾಜ ಕಪ್‌ಗೆ ಚಾಲನೆ ನೀಡಿ ಮಾತನಾಡಿದರು. ಮೊದಲ ಬಾರಿಗೆ ಚಾಮರಾಜ ಕಪ್ ಹೆಸರಿನಲ್ಲಿ ಕರಾಟೆ ಸ್ಪರ್ಧೆ ನಡೆದಿರುವುದು ಹೆಮ್ಮೆಯ ಸಂಗತಿ. ಮಕ್ಕಳ ಪ್ರತಿಭೆ ನಮ್ಮ ಕಣ್ಣ ಮುಂದಿದೆ. ಗಂಡು ಮಕ್ಕಳು ಮಾತ್ರವಲ್ಲದೆ ಹೆಣ್ಣು ಮಕ್ಕಳೂ ಕರಾಟೆಯಲ್ಲಿ ಬಹುಮಾನ ಗಳಿಸಿರುವುದು ಹೆಮ್ಮೆಯ ವಿಚಾರ. ಕರಾಟೆ ಶಿಕ್ಷಕರಾದ ನಂಜುಂಡಸ್ವಾಮಿ ಮತ್ತು ಅವರ ತಂಡದ ಪ್ರಯ್ತನ ನಿಜಕ್ಕೂ ಪ್ರಶಂಸನೀಯ ಎಂದರು.
ಡಿವೈಎಸ್ಪಿ ಮೋಹನ್ ಮಾತನಾಡಿ, ಆತ್ಮರಕ್ಷಣೆಗಾಗಿ ಕರಾಟೆ ಅತ್ಯಂತ ಮುಖ್ಯವಾದದ್ದು. ಈ ಕಲೆಗೆ ಹೆಚ್ಚಿನ ಪ್ರೋತ್ಸಾಹ ಅಗತ್ಯವಿದೆ. ಮಕ್ಕಳ ಪ್ರಗತಿಗೆ ಶಿಕ್ಷಣದ ಜತೆ ಇಂತಹ ಕಲೆ ಅತ್ಯಗತ್ಯ ಎಂದರು.
ರಾಜ್ಯ ಯುವ ಕಾಂಗ್ರೆಸ್ ಮಾಜಿ ಕಾರ್ಯದರ್ಶಿ ಚೇತನ್ ದೊರೈರಾಜು, ಯಳಂದೂರು ಮುಖ್ಯ ವೈದ್ಯಾಧಿಕಾರಿ ಡಾ.ಶ್ರೀಧರ್, ನಿವೃತ್ತ ಮುಖ್ಯಶಿಕ್ಷಕಿ ಪುಷ್ಪಲತಾ, ಮುಡಿಗುಂಡ ಮೂರ್ತಿ, ಕರಾಟೆ ಶಿಕ್ಷಕ ನಂಜುಂಡಸ್ವಾಮಿ ಇದ್ದರು.