ಆದಿಚುಂಚನಗಿರಿ ಶಿಕ್ಷಣ ಸಂಸ್ಥೆ ಆಡಳಿತಾಧಿಕಾರಿ ಡಾ.ಎ.ಬಿ.ಶಿವರಾಮು ಮಾತನಾಡಿ, ಪ್ರಿಕೆಜಿಯಿಂದ ಪಿಎಚ್.ಡಿವರೆಗೆ ಸಂಸ್ಥೆಯಿಂದ ಶಿಕ್ಷಣ ಒದಗಿಸಲಾಗುತ್ತಿದೆ. ನಮ್ಮ ಟ್ರಸ್ಟ್ ವ್ಯಾಪ್ತಿಯಲ್ಲಿ 120 ಪಿಯು ಕಾಲೇಜುಗಳಿದ್ದು, 28,000ಕ್ಕೂ ಹೆಚ್ಚು ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಜೆಇಇ ಪರೀಕ್ಷೆಯಲ್ಲಿ 150 ವಿದ್ಯಾರ್ಥಿಗಳು ಶೇ.90 ರಷ್ಟು ಅಧಿಕ ಅಂಕ ಗಳಿಸಿದ್ದಾರೆ. 2013-14 ರಲ್ಲಿ 230 ಇದ್ದ ಡಿಸ್ಟಿಂಕ್ಷನ್ ವಿದ್ಯಾರ್ಥಿಗಳ ಸಂಖ್ಯೆ ನಂತರದ ವರ್ಷಗಳಲ್ಲಿ 1500ಕ್ಕೆ ಏರಿಕೆಯಾಗಿದೆ. ಬಡ ಹಾಗೂ ಮಧ್ಯಮ ವರ್ಗದ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ಒದಗಿಸುವುದು ನಮ್ಮ ಟ್ರಸ್ಟ್‌ನ ಉದ್ದೇಶವಾಗಿದೆ ಎಂದರು.