ಅರಕಲಗೂಡು ಪಟ್ಟಣಕ್ಕೆ ಕೇವಲ ಐದು ಕಿಮೀ ದೂರದಲ್ಲಿರುವ ಪಾರಸನಹಳ್ಳಿ ಗ್ರಾಮದಿಂದ ಚಿರತೆ ಸಂತೆಮರೂರು, ಜೋಡಿಗುಬ್ಬಿ ಅರಣ್ಯ ಪ್ರದೇಶದತ್ತ ಅಲೆದಾಡುತ್ತಿರಬಹುದು. ಇಲ್ಲವೇ ಪೊದೆಯಲ್ಲಿ ಅವಿತಿರಬಹುದು. ಶಿಕ್ಷಕ ಚನ್ನಯ್ಯ ಅವರು ಭಾನುವಾರ ಬೆಳಗ್ಗೆ ಅರಕಲಗೂಡಿಗೆ ಬೈಕ್‌ನಲ್ಲಿ ಹೋಗುವಾಗ ಚಿರತೆ ಅಡ್ಡಸಿಕ್ಕಿ ಪರಾರಿಯಾಗಿದೆ.