ಮಕ್ಕಳ ಪ್ರತಿಭೆ ಅನಾವರಣಕ್ಕೆ ಕಲಿಕಾ ಹಬ್ಬ ಸಹಕಾರಿ

ಬೇಲೂರು ತಾಲೂಕಿನ ಹೆಬ್ಬಾಳು ಸರ್ಕಾರಿ ಕಿರಿಯ ಪ್ರಾಥಮಿಕ ಶಾಲಾ ಅವರಣ ಆಯೋಜಿಸಿದ್ದ ಹೆಬ್ಬಾಳು ಕ್ಲಸ್ಟರ್ ಮಟ್ಟದ ಕಲಿಕಾ ಹಬ್ಬ ಕಾರ್ಯಕ್ರಮದಲ್ಲಿ ಶಿಕ್ಷಕ ಮಾರುತಿ ಅವರನ್ನು ಸನ್ಮಾನಿಸಲಾಯಿತು. ಧ್ರುವಕುಮಾರಿ, ಅವಿನಾಶ್, ರಾಮೇಗೌಡ, ರಾಜಶೇಖರ ಮತ್ತು ರಮೇಶಪ್ಪ, ಶಿಕ್ಷಕರಾದ ಶಾಂತಮ್ಮ, ಶಾಂತೇಗೌಡ, ವಿಶ್ವೇಶ್ವರ್, ಜಯಣ್ಣ, ಜಗದೀಶ್, ಮಾರುತಿ, ಲೋಲಾಕ್ಷಮ್ಮ, ರುದ್ರೇಗೌಡ, ಚಂದ್ರಕಲಾ ಇತರರಿದ್ದರು.
ಬೇಲೂರು ತಾಲೂಕಿನ ಹೆಬ್ಬಾಳು ಸರ್ಕಾರಿ ಕಿರಿಯ ಪ್ರಾಥಮಿಕ ಶಾಲಾ ಅವರಣ ಆಯೋಜಿಸಿದ್ದ ಹೆಬ್ಬಾಳು ಕ್ಲಸ್ಟರ್ ಮಟ್ಟದ ಕಲಿಕಾ ಹಬ್ಬ ಕಾರ್ಯಕ್ರಮದಲ್ಲಿ ಶಿಕ್ಷಕ ಮಾರುತಿ ಅವರನ್ನು ಸನ್ಮಾನಿಸಲಾಯಿತು. ಧ್ರುವಕುಮಾರಿ, ಅವಿನಾಶ್, ರಾಮೇಗೌಡ, ರಾಜಶೇಖರ ಮತ್ತು ರಮೇಶಪ್ಪ, ಶಿಕ್ಷಕರಾದ ಶಾಂತಮ್ಮ, ಶಾಂತೇಗೌಡ, ವಿಶ್ವೇಶ್ವರ್, ಜಯಣ್ಣ, ಜಗದೀಶ್, ಮಾರುತಿ, ಲೋಲಾಕ್ಷಮ್ಮ, ರುದ್ರೇಗೌಡ, ಚಂದ್ರಕಲಾ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ತಾಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಮಂಜುನಾಥ್ ಅಭಿಮತ
  • ಕಲಿಕಾ ಹಬ್ಬ ಕಾರ್ಯಕ್ರಮ
ಬೇಲೂರು: ಮಕ್ಕಳನ್ನು ಕಲಿಕೆಯ ಪ್ರಕ್ರಿಯೆಯಲ್ಲಿ ಸಕ್ರಿಯವಾಗಿ ತೊಡಗಿಸುವ ಮೂಲಕ ಕಲಿಕಾ ಹಬ್ಬ ಅವರ ಸರ್ವತೋಮುಖ ಬೆಳವಣಿಗೆಗೆ ಸಹಕಾರಿಯಾಗಿದೆ ಎಂದು ತಾಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಮಂಜುನಾಥ್ ಹೇಳಿದರು.
ತಾಲೂಕಿನ ಹೆಬ್ಬಾಳು ಸರ್ಕಾರಿ ಕಿರಿಯ ಪ್ರಾಥಮಿಕ ಶಾಲಾ ಅವರಣ ಮಂಗಳವಾರ ಆಯೋಜಿಸಿದ್ದ ಹೆಬ್ಬಾಳು ಕ್ಲಸ್ಟರ್ ಮಟ್ಟದ ಕಲಿಕಾ ಹಬ್ಬ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಸ್ಥಳೀಯ ಹಾಗೂ ಗ್ರಾಮೀಣ ಭಾಗದ ಕಲೆಗಳು, ಜನಪದ ಹಾಡುಗಳು ಮತ್ತು ಕಥೆ, ಕವನಗಳಿಗೆ ಈ ಹಬ್ಬದಲ್ಲಿ ಹೆಚ್ಚಿನ ಮಹತ್ವ ನೀಡಲಾಗುತ್ತಿದೆ. ಮಕ್ಕಳಿಗೆ ನಮ್ಮ ಸಂಸ್ಕೃತಿಯ ಪರಿಚಯ, ಚಿತ್ರಕಲೆ, ಮಣ್ಣಿನಲ್ಲಿ ವಿವಿಧ ಮಾದರಿಯ ತಯಾರಿಕೆ, ಕಾಗದದ ಕೆಲಸ, ನಾಟಕಗಳ ಮೂಲಕ ಮಕ್ಕಳ ಸೃಜನಶೀಲ ಶಕ್ತಿಯನ್ನು ಉತ್ತೇಜಿಸಲಾಗುತ್ತದೆ ಎಂದರು.
ಕಲಿಕಾ ಹಬ್ಬವು ಮಕ್ಕಳಲ್ಲಿ ಕಲಿಯುವ ಆಸಕ್ತಿ ಹೆಚ್ಚಿಸಲು ಮತ್ತು ಅವರಲ್ಲಿ ಅಡಗಿರುವ ಪ್ರತಿಭೆಯನ್ನು ಹೊರ ಹಾಕಲು ಪೂರಕವಾಗಿದೆ. ಕಲಿಕಾ ಹಬ್ಬದಲ್ಲಿನ ಚಟುವಟಿಕೆಗಳು ಸರ್ಕಾರಿ ಶಾಲಾ ಮಕ್ಕಳಿಗೆ ಮಾತ್ರ ನಡೆಯುತ್ತವೆ. ಸರ್ಕಾರಿ ಶಾಲೆಯ ಕಿರಿಯ ಪ್ರಾಥಮಿಕ ಹಂತದ ಮಕ್ಕಳ ಕಲಿಕೆಯ ಬಗ್ಗೆ ಸಮುದಾಯದ ಗಮನ ಸೆಳೆಯುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿದೆ. ಪ್ರತಿಭಾ ಕಾರಂಜಿಯಲ್ಲಿ ಸಾಂಸ್ಕೃತಿಕ ಆಯಾಮದಲ್ಲಿ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಿದ ಮಕ್ಕಳಿಗೆ, ಕಲಿಕೆಯ ಸಾಫಲ್ಯತೆ ಪ್ರದರ್ಶಿಸುವ ಸದಾವಕಾಶ ಈ ಕಲಿಕಾ ಹಬ್ಬ ರೂಪುಗೊಂಡಿದೆ. ಕ್ಲಸ್ಟರ್ ಹಂತದ ಇತರ ಶಾಲೆಗಳಿಗಿಂತ ತನ್ನ ಶಾಲೆಯು ಕಲಿಕಾ ಮಟ್ಟದಲ್ಲಿ ಎಷ್ಟರ ಮಟ್ಟಿಗೆ ಯಶಸ್ವಿಯಾಗಿ ಸಾಗುತ್ತಿದೆಯೆಂದು ವಿದ್ಯಾರ್ಥಿಗಳು ಮತ್ತು ಶಿಕ್ಷಕರು ತಿಳಿಯಲು ಈ ಕಲಿಕಾ ಹಬ್ಬ ಉತ್ತಮ ವೇದಿಕೆಯಾಗಿದೆ ಎಂದರು.
ಹೆಬ್ಬಾಳು ಕ್ಲಸ್ಟರ್ ಮಟ್ಟದ ಸಿಆರ್‌ಪಿ ಚಂದ್ರಕಲಾ ಮಾತನಾಡಿ, ಕಲಿಕಾ ಹಬ್ಬ ಮಾಡಲು ಸರ್ಕಾರ ಹಾಗೂ ಶಿಕ್ಷಣ ಇಲಾಖೆ ತೀರ್ಮಾನ ಮಾಡಿದ್ದರಿಂದ ಮಕ್ಕಳು ಗಟ್ಟಿಯಾಗಿ ಓದುವುದು, ಕಥೆಗಳನ್ನು ಓದಿಸುವುದು, ಸ್ವಾತಂತ್ರವಾಗಿ ಬರೆಯುವುದು, ಸಂತೋಷದಿಂದ ಗಣಿತ ಕಲಿಸುವುದು ಕಾರ್ಯಕ್ರಮದ ಉದ್ದೇಶವಾಗಿದೆ. ಸರ್ಕಾರಿ ಶಾಲೆಗಳಲ್ಲಿ ಎಲ್ಲ ರೀತಿಯಲ್ಲೂ ಮೂಲಸೌಕರ್ಯ ಒದಗಿಸಲಾಗುತ್ತಿದೆ. ಪಾಲಕರು ಹಾಗೂ ಶಿಕ್ಷಕರು ಉತ್ತಮ ಬಾಂಧವ್ಯ ಹೊಂದಿದರೆ ಶಾಲೆಯ ಅಭಿವೃದ್ಧಿ, ಮಕ್ಕಳ ಜ್ಞಾನ ವೃದ್ಧಿಯಾಗುತ್ತದೆ. ಸರ್ಕಾರಿ ಶಾಲೆಗಳನ್ನು ಸಂರಕ್ಷಣೆ ಮಾಡುವುದರಿಂದ ಮಕ್ಕಳು ವಿದ್ಯೆಗಾಗಿ ವಲಸೆ ಹೋಗುವುದನ್ನು ತಪ್ಪಿಸಬೇಕು ಎಂದರು.
ವಿದ್ಯಾರ್ಥಿಗಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ವಿಜೇತರಾದ ಮಕ್ಕಳಿಗೆ ಬಹುಮಾನ ವಿತರಿಸಲಾಯಿತು. ಹೆಬ್ಬಾಳು ಗ್ರಾಪಂ ಅಧ್ಯಕ್ಷೆ ಧ್ರುವಕುಮಾರಿ, ಪಿಡಿಒ ಅವಿನಾಶ್, ಶಾಲೆಗೆ ಭೂಮಿ ನೀಡಿದ ರಾಮೇಗೌಡ, ನಿವೃತ್ತ ಶಿಕ್ಷಕ ರಾಜಶೇಖರ ಮತ್ತು ರಮೇಶಪ್ಪ, ಶಿಕ್ಷಕರಾದ ಶಾಂತಮ್ಮ, ಶಾಂತೇಗೌಡ, ವಿಶ್ವೇಶ್ವರ್, ಜಯಣ್ಣ, ಜಗದೀಶ್, ಮಾರುತಿ, ಲೋಲಾಕ್ಷಮ್ಮ, ರುದ್ರೇಗೌಡ, ಚಂದ್ರಕಲಾ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net