ನಂತರ ನಡೆದ ವೇದಿಕೆ ಕಾರ್ಯಕ್ರಮದಲ್ಲಿ ಶ್ರೀ ಸಂಸ್ಥಾನ ಹಿರೇಮಠ ಕಾರವಳ್ಳಿಯ ಪೀಠಾಧ್ಯಕ್ಷ ಶ್ರೀ ಸದಾಶಿವ ಶಿವಾಚಾರ್ಯ ಸ್ವಾಮೀಜಿ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು. ಕಾರ್ಯಕ್ರಮದಲ್ಲಿ ಶಾಸಕ ಸಿಮೆಂಟ್ ಮಂಜು, ಮಾಜಿ ಶಾಸಕ ಎಚ್.ಕೆ. ಕುಮಾರಸ್ವಾಮಿ, ಮಲೆನಾಡು ಅಭಿವೃದ್ಧಿ ಮಂಡಳಿ ಮಾಜಿ ಅಧ್ಯಕ್ಷ ಎಚ್.ಪಿ. ಮೋಹನ್, ಎಚ್‌ಡಿಸಿಸಿ ಬ್ಯಾಂಕ್ ನಿರ್ದೇಶಕ ಕೆ.ಎಸ್. ಮಂಜೇಗೌಡ, ಆಲೂರು ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ಬಿ.ಕೆ. ಲಿಂಗರಾಜು, ಕಾಂಗ್ರೆಸ್ ಹಿರಿಯ ಮುಖಂಡ ಜಿ.ಆರ್.ರಂಗನಾಥ್, ಜಗದೀಶ್ ಮಾದಿಹಳ್ಳಿ, ಜಿಲ್ಲಾ ಪಂಚಾಯಿತಿ ಸಿಇಒ ಚಂದ್ರಶೇಖರ್ ಹುಸ್ಕೂರು, ಪಿಡಿಒಗಳಾದ ಸಣ್ಣಪ್ಪ, ಧನಂಜಯ್, ಇಂಜಿನಿಯರ್ ಪುನೀತ್, ಜಿಪಂ ಮಾಜಿ ಸದಸ್ಯೆ ಸುಜಾತಾ, ತಾಪಂ ಮಾಜಿ ಉಪಾಧ್ಯಕ್ಷ ಜೀವನ್ ಹೆಮ್ಮಿಗೆ, ಸದಸ್ಯ ಅಜಯ್‌ಗೌಡ ಕಿತ್ತಬೂರು ಇತರರು ಇದ್ದರು.