ದೇವರ ಆರಾಧನೆಯಿಂದ ನೆಮ್ಮದಿ ಪಡೆಯಲು ಸಾಧ್ಯ

ಬಾಗೂರು ಹೋಬಳಿಯ ಕುರಿ ಕಾವಲು ಗ್ರಾಮದ ಶ್ರೀ ದೊಡ್ಡಮ್ಮ, ಶ್ರೀ ಚಿಕ್ಕಮ್ಮ ದೇವಿಯ ನೂತನ ದೇವಾಲಯ ವಿಗ್ರಹ ಪ್ರತಿಷ್ಠಾಪನೆ ಹಾಗೂ ಕುಂಭಾಭಿಷೇಕ ಮಹೋತ್ಸವದ ಧಾರ್ಮಿಕ ಕಾರ್ಯಕ್ರಮದಲ್ಲಿ ಶಾಸಕ ಸಿ.ಎನ್.ಬಾಲಕೃಷ್ಣ ಅವರನ್ನು ಜೀರ್ಣೋದ್ಧಾರ ಸಮಿತಿ ಸದಸ್ಯರು ಸನ್ಮಾನಿಸಿದರು. ನಾಗರಾಜ್, ಮಂಜೇಗೌಡ, ಚಂದ್ರೇಗೌಡ, ದೊಡ್ಡೇಗೌಡ, ದೇವರಾಜ್, ಕಿರಣ್ ಇತರರು ಇದ್ದರು.
ಬಾಗೂರು ಹೋಬಳಿಯ ಕುರಿ ಕಾವಲು ಗ್ರಾಮದ ಶ್ರೀ ದೊಡ್ಡಮ್ಮ, ಶ್ರೀ ಚಿಕ್ಕಮ್ಮ ದೇವಿಯ ನೂತನ ದೇವಾಲಯ ವಿಗ್ರಹ ಪ್ರತಿಷ್ಠಾಪನೆ ಹಾಗೂ ಕುಂಭಾಭಿಷೇಕ ಮಹೋತ್ಸವದ ಧಾರ್ಮಿಕ ಕಾರ್ಯಕ್ರಮದಲ್ಲಿ ಶಾಸಕ ಸಿ.ಎನ್.ಬಾಲಕೃಷ್ಣ ಅವರನ್ನು ಜೀರ್ಣೋದ್ಧಾರ ಸಮಿತಿ ಸದಸ್ಯರು ಸನ್ಮಾನಿಸಿದರು. ನಾಗರಾಜ್, ಮಂಜೇಗೌಡ, ಚಂದ್ರೇಗೌಡ, ದೊಡ್ಡೇಗೌಡ, ದೇವರಾಜ್, ಕಿರಣ್ ಇತರರು ಇದ್ದರು.
Published on
ಬಾಗೂರು: ನೆಮ್ಮದಿ ಮತ್ತು ಮನಃಶಾಂತಿಯನ್ನು ಹಣದಿಂದ ಪಡೆಯಲು ಸಾಧ್ಯವಿಲ್ಲ. ಭಗವಂತನ ಆರಾಧನೆಯಿಂದ ಮಾತ್ರ ಎಲ್ಲವನ್ನು ಪಡೆಯಲು ಸಾಧ್ಯ ಎಂದು ಶಾಸಕ ಸಿ.ಎನ್.ಬಾಲಕೃಷ್ಣ ತಿಳಿಸಿದರು.
ಹೋಬಳಿಯ ಕುರಿ ಕಾವಲು ಗ್ರಾಮದಲ್ಲಿ ಬುಧವಾರ ಶ್ರೀ ದೊಡ್ಡಮ್ಮ ಶ್ರೀ ಚಿಕ್ಕಮ್ಮ ದೇವಿಯ ನೂತನ ದೇವಾಲಯ ವಿಗ್ರಹ ಪ್ರತಿಷ್ಠಾಪನೆ ಹಾಗೂ ಕುಂಭಾಭಿಷೇಕ ಮಹೋತ್ಸವದ ಪೂಜಾ ಕಾರ್ಯಕ್ರಮದಲ್ಲಿ ಮಾತನಾಡಿದರು.
ದೇವಾಲಯ ನಿರ್ಮಾಣಕ್ಕೆ 7.50 ಲಕ್ಷ ರೂ. ಅನುದಾನ ನೀಡಲಾಗಿದ್ದು, ಸದ್ಯ 2.50 ಲಕ್ಷ ರೂ. ಬಿಡುಗಡೆಯಾಗಿದೆ. ಉಳಿಕೆ ಹಣವನ್ನು ಶೀಘ್ರದಲ್ಲೇ ಕೊಡಲಾಗುತ್ತದೆ. ದೇವಾಲಯದ ಹೊರಗಿನ ರಸ್ತೆಯನ್ನು 1 ಕೋಟಿ ರೂ. ವೆಚ್ಚದಲ್ಲಿ ಅಭಿವೃದ್ಧಿಪಡಿಸಲಾಗಿದೆ. ಗ್ರಾಮದ ಮೇಲ್ಭಾಗದ ಬಡಾವಣೆಗೆ ನಿರಂತರ ವಿದ್ಯುತ್ ಸಂಪರ್ಕ ಕಲ್ಪಿಸಲಾಗುತ್ತದೆ ಎಂದರು.
ಅಲಗೊಂಡನಹಳ್ಳಿ ಏತ ನೀರಾವರಿ ಯೋಜನೆ ಅನುಷ್ಠಾನಗೊಂಡಿದ್ದು, ಈ ಭಾಗದಲ್ಲಿ ಕೆರೆಗಳು ತುಂಬಿರುವುದರಿಂದ ಬೇಸಿಗೆ ಕಾಲದಲ್ಲಿ ರೈತರಿಗೆ ಸಮಸ್ಯೆಯಾಗಲ್ಲ. ನೀರಾವರಿ ಯೋಜನೆಗಳ ಅನುಷ್ಠಾನದಿಂದ ಮಾತ್ರ ರೈತರನ್ನು ಉಳಿಸಲು ಸಾಧ್ಯ. ಮುಂಬರುವ ದಿನಗಳಲ್ಲಿ ಗ್ರಾಮಸ್ಥರ ಒತ್ತಾಯದಂತೆ ವಿವಿಧ ರಸ್ತೆಗಳ ಅಭಿವೃದ್ಧಿ, ನೂತನ ದೇವಾಲಯದ ಮುಂಭಾಗ ಛಾವಣಿ ಅಳವಡಿಕೆಗೆ ಅನುದಾನ ಸೇರಿದಂತೆ ವಿವಿಧ ಅಭಿವೃದ್ಧಿ ಕೆಲಸಗಳಿಗೆ ಹೆಚ್ಚಿನ ಸಹಕಾರ ನೀಡುವುದಾಗಿ ಭರವಸೆ ನೀಡಿದರು.
ಶೃಂಗೇರಿ ಮಠದ ಶ್ರೀಗಳಿಂದ ದೇವಾಲಯ ಲೋಕಾರ್ಪಣೆಗೊಂಡಿದ್ದು, ಶ್ರೀಗಳ ಆಶೀರ್ವಚನದಂತೆ ಗ್ರಾಮಸ್ಥರು ಒಗ್ಗಟ್ಟಾಗಿ ದೇವಾಲಯದ ಅಭಿವೃದ್ಧಿಗೆ ಶ್ರಮಿಸುವಂತೆ ತಿಳಿಸಿದರು. ಈ ಸಂದರ್ಭದಲ್ಲಿ ದೇವಾಲಯ ಸಮಿತಿ ಸದಸ್ಯರು ಹಾಗೂ ಗ್ರಾಮಸ್ಥರು ಶಾಸಕರನ್ನು ಸನ್ಮಾನಿಸಲಾಯಿತು.
ಜೆಡಿಎಸ್ ಮುಖಂಡರಾದ ನೆಟ್ಟೆಕೆರೆ ನಾಗಣ್ಣ, ಚಂದ್ರೇಗೌಡ, ಗೌರಮ್ಮ ದೇವರಾಜ್, ಯೋಗೇಶ್, ದೇವರಾಜ್, ಮಂಜುನಾಥ್, ದೊಡ್ಡೇಗೌಡ, ದತ್ತಾತ್ರೇಯ, ನಾಗರಾಜ್, ಉದ್ಯಮಿ ನಂಜೇಶ್, ಲಿಂಗರಾಜ್, ದೇವಾಲಯದ ಶಿಲ್ಪಿಗಳಾದ ನಾಗೇಶ್, ಆಶಾ ಶ್ಯಾಮ್, ದ್ಯಾವೇನಹಳ್ಳಿ ಮಂಜುನಾಥ್, ಹುಲಿಕೆರೆ ಸಂಪತ್ ಕುಮಾರ್, ಶಿವರ ರಾಜು, ಹೊಂಗೆಹಳ್ಳಿ ಮಂಜು, ಅರ್ಚಕ ಕಿರಣ್ ಕುಮಾರ್, ಸೇರಿದಂತೆ ಗ್ರಾಮಸ್ಥರು ಹಾಜರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net