ಕನ್ನಡ ಸಾಹಿತ್ಯ ಪರಿಷತ್ತಿನ ಸಂಸ್ಥಾಪನಾ ದಿನಾಚರಣೆ ಅಂಗವಾಗಿ ಪಟ್ಟಣದ ವಿದ್ಯ ವಿಕಾಸ ಪದವಿ ಪೂರ್ವ ಕಾಲೇಜಿನಲ್ಲಿ ಆಯೋಜಿಸಿದ್ದ ಕನ್ನಡ ಸಾಹಿತ್ಯ ಪರಿಷತ್ತಿನ ಸಂಸ್ಥಾಪನಾ ದಿನಾಚರಣೆ ಕಾರ್ಯಕ್ರಮವನ್ನು ಗಣ್ಯರು ಉದ್ಘಾಟಿಸಿದರು. ಮಹಾ ಶಿವಮೂರ್ತಿ, ಕಲಾವಿದ ಕೃಷ್ಣಮೂರ್ತಿ, ಮಹೇಶ್, ಕುಮಾರಸ್ವಾಮಿ, ಚೆನ್ನಕೇಶವೇಗೌಡ, ಸುಜಯ್, ಶಿಕ್ಷಕಿ ಸುಜಾತಾ ಇತರರಿದ್ದರು.
Published on:
Copied
Follow Us
ಪ್ರಮುಖ ಮುಖ್ಯಾಂಶಗಳು
ಪುರಸಭೆ ಅಧ್ಯಕ್ಷ ಅಕ್ರಂ ಷರೀಫ್ ಕರೆ
ಕನ್ನಡ ಸಾಹಿತ್ಯ ಪರಿಷತ್ತಿನ ಸಂಸ್ಥಾಪನಾ ದಿನಾಚರಣೆ
ಬೇಲೂರು: ಕನ್ನಡ ಭಾಷೆ ಉಳಿಸಿ ಬೆಳೆಸುವುದು ಕನ್ನಡಿಗರಾದ ನಮ್ಮೆಲ್ಲರ ಜವಾಬ್ದಾರಿಯಾಗಿದ್ದು, ವಿದ್ಯಾರ್ಥಿಗಳು ಈ ನಿಟ್ಟಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಜತೆ ಕೈಜೋಡಿಸಬೇಕು ಎಂದು ಪುರಸಭೆ ಅಧ್ಯಕ್ಷ ಅಕ್ರಂ ಷರೀಫ್ ಹೇಳಿದರು.
ತಾಲೂಕು ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಪಟ್ಟಣದ ವಿದ್ಯವಿಕಾಸ ಪದವಿ ಪೂರ್ವ ಕಾಲೇಜಿನಲ್ಲಿ ಶನಿವಾರ ಆಯೋಜಿಸಿದ್ದ ಕನ್ನಡ ಸಾಹಿತ್ಯ ಪರಿಷತ್ತಿನ ಸಂಸ್ಥಾಪನಾ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಕನ್ನಡಕ್ಕೆ ಮತ್ತು ಕನ್ನಡ ನಾಡಿಗೆ ಹೇಗೆ ಇತಿಹಾಸವಿದೆಯೋ ಅದಕ್ಕೆ ಬೇಲೂರಿನ ಹಲ್ಮಿಡಿ ಕಾರಣ. ಆದ್ದರಿಂದ ಕನ್ನಡ ನಾಡಿಗೆ ಅಮೋಘವಾದ ಕೊಡುಗೆ ನೀಡಿರುವ ಹಲ್ಮಿಡಿ ಶಿಲಾ ಶಾಶನ ದೊರೆತ ಹಲ್ಮಿಡಿ ಗ್ರಾಮವನ್ನು ಪ್ರವಾಸಿ ತಣವನ್ನಾಗಿ ಮಾಡುವ ಕನಸು ಕನಸಾಗೆ ಉಳಿದ್ದಿದ್ದು, ಕನ್ನಡಿಗರಾದ ನಾವೆಲ್ಲರೂ ಇದಕ್ಕಾಗಿ ಶ್ರಮ ಹಾಕಬೇಕು. ಕನ್ನಡವನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಎಲ್ಲರೂ ಮುಂದಾಗಬೇಕು ಎಂದರು.
ವಿದ್ಯ ವಿಕಾಸ ಪದವಿಪೂರ್ವ ಕಾಲೇಜು ಪ್ರಾಂಶುಪಾಲ ಡಾ.ಎಂ.ಎಂ.ರಮೇಶ್ ಮಾತನಾಡಿ, ಮಕ್ಕಳಲ್ಲಿ ಕನ್ನಡ ಭಾಷೆ ಬಗ್ಗೆ ಅರಿವು ಮೂಡಿಸಲು ಇಂತಹ ಹೆಚ್ಚು ಕಾರ್ಯಕ್ರಮ ಅಗತ್ಯತೆ ಇದೆ. ನಾವು ನೂರಾರು ಭಾಷೆಗಳನ್ನು ಕಲಿತರು, ಮಾತಾಡುವುದು ಒಂದೇ ಭಾಷೆ ಅದು ಕನ್ನಡ. ನಾವೆಲ್ಲರೂ ಕನ್ನಡ ಭಾಷೆ ಹಾಗೂ ಸಾಹಿತ್ಯದ ಬಗ್ಗೆ ಅಭಿಮಾನವನ್ನು ಬೆಳೆಸಿಕೊಳ್ಳಬೇಕು ಎಂದರು.
ಕನ್ನಡದ ಪ್ರಥಮ ಶಿಲಾ ಶಾಸನ ದೊರೆತ ಗ್ರಾಮ ಹಲ್ಮಿಡಿ ಇರುವ ಕ್ಷೇತ್ರದಲ್ಲಿರುವುದು ನಮ್ಮೆಲ್ಲರಿಗೂ ಅತ್ಯಂತ ಸಂತೋಷದ ಸಂಗತಿಯಾಗಿದೆ. ಆದ್ದರಿಂದ ಕನ್ನಡಕ್ಕೆ, ಕನ್ನಡ ನಾಡಿಗೆ ಬಹು ದೊಡ್ಡ ಕೊಡುಗೆ ನೀಡಿರುವ ತಾಲೂಕಿನ ಹಲ್ಮಿಡಿ ನಮ್ಮೆಲ್ಲರ ಹೆಮ್ಮೆ. ಆದ್ದರಿಂದ ಮೊದಲಿಗೆ ನಾವು ಕನ್ನಡ ಉಳಿಸಿ ಬೆಳೆಸುವ ಉದ್ದೇಶದಿಂದ ಇತರರಿಗೂ ಕನ್ನಡ ನಾಡು ಮತ್ತು ಕನ್ನಡದ ಬಗ್ಗೆ ಅರಿವು ಮೂಡಿಸಬೇಕಿದೆ ಎಂದರು
ಕಸಾಪ ತಾಲೂಕು ಅಧ್ಯಕ್ಷ ಮಾ.ನಾ.ಮಂಜೇಗೌಡ ಮಾತನಾಡಿ, 1915 ಮೇ 5ರಂದು ಕನ್ನಡ ಸಾಹಿತ್ಯ ಪರಿಷತ್ತಿನ ಉಗಮವಾಯಿತು. ಇದರ ಮೂಲ ಪುರುಷರು ಮೈಸೂರು ಅರಸರಾಗಿದ್ದ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು. 1956ರಲ್ಲಿ ಭಾಷಾವಾರು ಪ್ರಾಂತ್ಯ ರಚನೆಯಾಗಿ ಕನ್ನಡ ಭಾಷೆ ಮಾತನಾಡುವವರನ್ನು ಒಂದೆಡೆ ಸೇರಿಸಿದ್ದರಿಂದ ಮೈಸೂರು ರಾಜ್ಯ ಸ್ಥಾಪನೆಯಾಯಿತು. ನಂತರ 1973 ರಲ್ಲಿ ಕರ್ನಾಟಕವೆಂದು ನಾಮಕರಣವಾಗಿ ಕನ್ನಡ ರಾಜ್ಯ ಭಾಷೆಯಾಗಿ ಕನ್ನಡಿಗರ ಮಾತೃ ಭಾಷೆಯಾಗಿದೆ ಎಂದರು.
ಗೌರವ ಸಲಹೆಗಾರ ಮಹಾ ಶಿವಮೂರ್ತಿ, ಕಲಾವಿದ ಕೃಷ್ಣಮೂರ್ತಿ, ಕಸಾಪ ಗೌರವ ಕಾರ್ಯದರ್ಶಿ ಮಹೇಶ್, ಸಂಘಟನಾ ಕಾರ್ಯದರ್ಶಿ ಕುಮಾರಸ್ವಾಮಿ, ಸಾಂಸ್ಕೃತಿಕ ಕಾರ್ಯದರ್ಶಿ ಚೆನ್ನಕೇಶವೇಗೌಡ, ಉಪನ್ಯಾಸಕ ಸುಜಯ್, ಶಿಕ್ಷಕಿ ಸುಜಾತಾ ಸೇರಿದಂತೆ ಇತರರಿದ್ದರು.