ಸ್ವಚ್ಛತೆ ಕಾಪಾಡಲು ಕೈಜೋಡಿಸಿ

ಹಾಸನ ನಗರದ ಸತ್ಯಮಂಗಲ ಕೆರೆ ಆವರಣದಲ್ಲಿ ಸತ್ಯಮಂಗಲ ಕೆರೆ ಅಭಿವೃದ್ಧಿ ಸಮಿತಿ ಹಾಗೂ ಹಾಸನ ಲಯನ್ಸ್ ಕ್ಲಬ್ ಆಶ್ರಯದಲ್ಲಿ ಸ್ವಚ್ಛತಾ ಅಭಿಯಾನವನ್ನು ಹಮ್ಮಿಕೊಳ್ಳಲಾಗಿತ್ತು. ವೆಂಕಟೇಶ್ ಜವರಪ್ಪ, ಸಿ.ಬಿ.ನಾಗರಾಜ್, ಖಜಾಂಚಿ ಪಂಚಾಕ್ಷರಿ, ಕೆ.ಆರ್. ಮಲ್ಲೇಶ್ ಗೌಡ, ಎಚ್.ಕೆ. ನಾಗೇಶ್, ಐ.ಜಿ. ರಮೇಶ್ ಇತರರಿದ್ದರು.

Published on

ಪ್ರಮುಖ ಮುಖ್ಯಾಂಶಗಳು

  • ಲಯನ್ಸ್ ಕ್ಲಬ್ ಅಧ್ಯಕ್ಷ ವೆಂಕಟೇಶ್ ಜವರಪ್ಪ ಹೇಳಿಕೆ
ಹಾಸನ: ನಗರದ ಸತ್ಯಮಂಗಲ ಕೆರೆ ಆವರಣದಲ್ಲಿ ಸತ್ಯಮಂಗಲ ಕೆರೆ ಅಭಿವೃದ್ಧಿ ಸಮಿತಿ ಹಾಗೂ ಹಾಸನ ಲಯನ್ಸ್ ಕ್ಲಬ್ ಆಶ್ರಯದಲ್ಲಿ ಸ್ವಚ್ಛತಾ ಅಭಿಯಾನವನ್ನು ಭಾನುವಾರದಂದು ಬೆಳಗ್ಗೆ ಹಮ್ಮಿಕೊಳ್ಳಲಾಗಿತ್ತು.
ಲಯನ್ಸ್ ಕ್ಲಬ್‌ನ ಪದಾಧಿಕಾರಿಗಳು ಮತ್ತು ಸದಸ್ಯರು ಕೆರೆ ಆವರಣವನ್ನು ಸ್ವಚ್ಛಗೊಳಿಸಿದರು. ಪ್ಲಾಸ್ಟಿಕ್ ತ್ಯಾಜ್ಯ, ಕಸ-ಕಡ್ಡಿಗಳನ್ನು ತೆರವುಗೊಳಿಸಿ ಪರಿಸರವನ್ನು ಶುಚಿಗೊಳಿಸುವ ಮೂಲಕ ಸಾರ್ವಜನಿಕರಿಗೆ ಸ್ವಚ್ಛತೆಯ ಸಂದೇಶ ಸಾರಿದರು.
ಲಯನ್ಸ್ ಕ್ಲಬ್ ಅಧ್ಯಕ್ಷ ವೆಂಕಟೇಶ್ ಜವರಪ್ಪ ಮಾತನಾಡಿ, ಪರಿಸರ ಮತ್ತು ಜಲಮೂಲಗಳ ಸಂರಕ್ಷಣೆ ಪ್ರತಿಯೊಬ್ಬ ನಾಗರಿಕನ ಜವಾಬ್ದಾರಿಯಾಗಿದ್ದು, ಸಾರ್ವಜನಿಕರು ಸಹ ಸ್ವಚ್ಛತೆ ಕಾಪಾಡುವಲ್ಲಿ ಕೈಜೋಡಿಸಬೇಕು ಎಂದು ಮನವಿ ಮಾಡಿದರು.
ಲಯನ್ಸ್ ಕ್ಲಬ್ ಕಾರ್ಯದರ್ಶಿ ಸಿ.ಬಿ.ನಾಗರಾಜ್, ಖಜಾಂಚಿ ಪಂಚಾಕ್ಷರಿ, ಸೆಕೆಂಡ್ ಸೆಂಚೂರಿ ಅಂಬಾಸಿಡರ್ ಕೆ.ಆರ್. ಮಲ್ಲೇಶ್ ಗೌಡ, ಎಚ್.ಕೆ. ನಾಗೇಶ್, ಐ.ಜಿ. ರಮೇಶ್, ವೆಂಕಟೇಗೌಡ, ಎಚ್.ಕೆ. ಕಿರಣ್, ಚಂದ್ರಶೇಖರ್, ಕಾರ್ಯದರ್ಶಿ ಕಮಲಮ್ಮ, ಶಾರದಮ್ಮ, ನಾರಾಯಣಗೌಡ, ಚಂದ್ರಪ್ಪ, ಚಂದ್ರೇಗೌಡ. ಕರೀಗೌಡ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net