ಛಾಯಾಗ್ರಾಹಕರ ಹಿತಾಸಕ್ತಿಗೆ ಕೈಜೋಡಿಸಿ

ತಾಲೂಕು ಛಾಯಾಗ್ರಾಹಕರ ಸಂಘದಿಂದ ಆಯೋಜಿಸಿದ್ದ  ಸಂಘದ ಆಸರೆ ಯೋಜನೆಗೆ  ಸಂಘದ ಜಿಲ್ಲಾಧ್ಯಕ್ಷ ನಿಂಗರಾಜು ಚಾಲನೆ ನೀಡಿದರು. ನಿಲೇಶ್, ಮಲ್ಲೇಶ್, ಲೋಕೇಶ್ ಇತರರಿದ್ದರು.
ತಾಲೂಕು ಛಾಯಾಗ್ರಾಹಕರ ಸಂಘದಿಂದ ಆಯೋಜಿಸಿದ್ದ ಸಂಘದ ಆಸರೆ ಯೋಜನೆಗೆ ಸಂಘದ ಜಿಲ್ಲಾಧ್ಯಕ್ಷ ನಿಂಗರಾಜು ಚಾಲನೆ ನೀಡಿದರು. ನಿಲೇಶ್, ಮಲ್ಲೇಶ್, ಲೋಕೇಶ್ ಇತರರಿದ್ದರು.
Published on
ಬೇಲೂರು: ವೃತ್ತಿನಿರತ ಛಾಯಾಗ್ರಾಹಕರ ಹಿತಾಸಕ್ತಿಗಾಗಿ ಕರ್ನಾಟಕ ಛಾಯಾಗ್ರಾಹಕರ ಸಂಘವು ಶ್ರಮಿಸುತ್ತಿದ್ದು, ಸಂಘದೊಂದಿಗೆ ಜಿಲ್ಲೆ ಮತ್ತು ತಾಲೂಕಿನ ಸಂಘಗಳು ಸಹ ಕೈಜೋಡಿಸಿದರೆ ಮತ್ತಷ್ಟು ಕೆಲಸಗಳನ್ನು ಮಾಡಲು ಸಾಧ್ಯ ಎಂದು ಛಾಯಾಗ್ರಾಹಕರ ಸಂಘದ ಜಿಲ್ಲಾಧ್ಯಕ್ಷ ನಿಂಗರಾಜು(ಸ್ವಾಮಿ)ಹೇಳಿದರು.
ಪಟ್ಟಣದ ಸರ್ಕಾರಿ ನೌಕರರ ಭವನದಲ್ಲಿ ಛಾಯಾಗ್ರಾಹಕರ ಸಂಘ ತಾಲೂಕು ಘಟಕದಿಂದ ಗುರುವಾರ ಆಯೋಜಿಸಿದ್ದ ಛಾಯ್ರಗ್ರಾಹಕರ ಸಂಘದ ಆಸರೆ ಯೋಜನೆಗೆ ಚಾಲನೆ ನೀಡಿ ಮಾತನಾಡಿದರು.
ಛಾಯಾಗ್ರಾಹಕರನ್ನು ಅಸಂಘಟಿತ ವಲಯಕ್ಕೆ ಸೇರ್ಪಡೆಗೊಳಿಸುವಲ್ಲಿ ರಾಜ್ಯ ಸಂಘವು ಯಶಸ್ವಿಯಾಗಿದ್ದು, ಇದರಿಂದ ಛಾಯಾಗ್ರಾಹಕರಿಗೆ ಸಾಕಷ್ಟು ಅನುಕೂಲತೆಗಳು ಲಭಿಸಲಿದೆ.
ಅಕಸ್ಮಾತ್ ಛಾಯಾಗ್ರಾಹಕರು ಮೃತರಾದ ಸಂದರ್ಭದಲ್ಲಿ ಕುಟುಂಬದವರ ಸಹಾಯಕ್ಕಾಗಿ ಆಸರೆ ಯೋಜನೆಯನ್ನು ರೂಪಿಸಲಾಗಿದೆ. ತಾಲೂಕು ಸಂಘದಲ್ಲಿ ಸದಸ್ಯತ್ವ ಪಡೆದಿರುವ ಪ್ರತಿಯೊಬ್ಬರೂ ಈ ಯೋಜನೆಗೆ ಅರ್ಹರಾಗಿದ್ದು, ಇದರ ಸದುಪಯೋಗವನ್ನು ಸಂಘದ ಎಲ್ಲ ಸದಸ್ಯರೂ ಪಡೆದು ಕೊಳ್ಳಬಹುದಾಗಿದೆ ಎಂದರು.
ಕರ್ನಾಟಕ ಛಾಯಾಗ್ರಾಹಕರ ಸಂಘದ ನಿರ್ದೇಶಕ ಕೊನೇರಿ ಸೂರಿ ಮಾತನಾಡಿ, ಸಂಘದ ರಾಜ್ಯಧ್ಯಕ್ಷ ನಾಗೇಶ್ ಛಾಯಾಗ್ರಾಹಕರ ಒಳಿತಿಗಾಗಿ ಸದಾ ಕ್ರಿಯಾಶೀಲವಾಗಿ ಉತ್ತಮ ಕೆಲಸ ಮಾಡುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಹೆಲ್ತ್ ಕಾರ್ಡ್ ಸೇರಿದಂತೆ ಇತರ ಸೌಲಭ್ಯಗಳನ್ನು ವಿತರಿಸುವ ಬಗ್ಗೆ ಚರ್ಚಿಸಲಾಗಿದೆ ಎಂದರು.
ತಾಲೂಕು ಛಾಯಾಗ್ರಾಹಕರ ಸಂಘದ ಅಧ್ಯಕ್ಷ ಪಿ.ಡಿ.ಚಂದ್ರಶೇಖರ್ ಮಾತನಾಡಿ, ಆಸರೆ ಯೋಜನೆಯ ಲಾಭವು ಮೃತರಾದಾಗ ಸಿಗುತ್ತದೆ ಎಂಬ ಭಾವನೆ ಬಿಟ್ಟು, ನಾವು ಬದುಕಿದ್ದಾಗ ಇನ್ನೊಬ್ಬರಿಗೆ ಸಹಾಯ ಮಾಡಲು ಸಿಗುವ ಅವಕಾಶದ ಯೋಜನೆ ಎಂದು ಭಾವಿಸಿ. ಮುಂದಿನ ಆಗಸ್ಟ್ 19 ರೊಳಗೆ ಈ ಯೋಜನೆಗೆ ಪ್ರತಿಯೊಬ್ಬ ಸದಸ್ಯನೂ ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳತಕ್ಕದ್ದು ಎಂದರು.
ಛಾಯಾಗ್ರಾಹಕರ ಸಂಘದ ಜಿಲ್ಲಾ ಸಂ.ಕಾರ್ಯದರ್ಶಿ ನಿಲೇಶ್, ಸಹ ಕಾರ್ಯದರ್ಶಿ ಮಲ್ಲೇಶ್, ಆಸರೆ ಯೋಜನೆಯ ಉಸ್ತುವಾರಿ ಲೋಕೇಶ್, ಮಾಜಿ ಅಧ್ಯಕ್ಷ ಪ್ರಕಾಶ್, ಪ್ರಧಾನ ಕಾರ್ಯದರ್ಶಿ ಸಂದೀಪ್, ಸಹಕಾರ್ಯದರ್ಶಿ ಅಶ್ವತ್, ಖಜಾಂಚಿ ನವೀನ್, ಸಂಘಟನಾ ಕಾರ್ಯದರ್ಶಿ ಪ್ರಭುರಾವ್, ನಿರ್ದೇಶಕ ನೀಲಕಂಠ, ಸುನೀಲ್, ರುದ್ರೇಶ್ ಸೇರಿದಂತೆ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net